ಪುಲ್ವಾಮ ದಾಳಿ: ಪಾಕಿಸ್ತಾನ ಲೀಗ್ ಕ್ರಿಕೆಟ್ ಲೈವ್ ಸ್ಕೋರ್‌ಗೂ ಬ್ರೇಕ್!
ಪುಲ್ವಾಮ ದಾಳಿಯಿಂದ ಭಾರತಗ 40ಕ್ಕೂ ಹೆಚ್ಚು CRPF ಯೋಧರು ಹುತಾತ್ಮರಾಗಿದ್ದಾರೆ. ಇದಕ್ಕೆ ತಕ್ಕ ಪಾಠ ಕಲಿಸಲು ಮುಂದಾಗಿರುವ ಭಾರತ ಭಯೋತ್ವಾದಕರ ತವರು ಪಾಕಿಸ್ತಾನಕ್ಕೆ ಒಂದೊಂದೇ ಶಾಕ್ ನೀಡುತ್ತಿದೆ. ಇದೀಗ ಕ್ರಿಕೆಟ್ ವೆಬ್‌ಸೈಟ್ ಕ್ರಿಕ್‌ಬಝ್ ಕೂಡ ಶಾಕ್ ನೀಡಿದೆ.
ಮುಂಬೈ(ಫೆ.18): ಪುಲ್ವಾಮ ಭಯೋತ್ವಾದ ದಾಳಿಗೆ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಭಾರತ ಮುಂದಾಗಿದೆ. ಭಯೋತ್ವಾದಕ ದಾಳಿಯಿಂದ 40ಕ್ಕೂ ಹೆಚ್ಚು CRPF ಯೋಧರು ಹುತ್ಮಾರಾಗಿದ್ದಾರೆ. ಇದರ ಬೆನ್ನಲ್ಲೇ ಪಾಕಿಸ್ತಾನ ಸೂಪರ್ ಲೀಗ್(PSL) ಕ್ರಿಕೆಟ್ ಪ್ರಸಾರವನ್ನ ಭಾರತದಲ್ಲಿ ನಿರ್ಬಂಧಿಸಲಾಗಿದೆ. ಇದೀಗ PSL ಪಂದ್ಯಗಳ ಪ್ರತಿ ಎಸೆತದ ವಿವರಣೆ, ಸ್ಕೋರ್ ವಿವರಗಳನ್ನು ಪ್ರಕಟ ಮಾಡುತ್ತಿದ್ದ ‘ಕ್ರಿಕ್‌ಬಝ್’(Cricbuzz) ಕ್ರಿಕೆಟ್ ವೆಬ್‌ಸೈಟ್, ಪಿಎಸ್‌ಎಲ್‌ಗೆ ಬಹಿಷ್ಕಾರ ಹಾಕಿದೆ.
ಇದನ್ನೂ ಓದಿ: ಪುಲ್ವಾಮ ದಾಳಿ: ಭಾರತದಲ್ಲಿ ಪಾಕಿಸ್ತಾನ ಲೀಗ್ ಕ್ರಿಕೆಟ್ ಪ್ರಸಾರ ನಿರ್ಬಂಧ!
ಪಂದ್ಯಗಳ ವಿವರಗಳನ್ನು ಪ್ರಸಾರ ಮಾಡದಿರಲು ನಿರ್ಧರಿಸಿರುವ ಸಂಸ್ಥೆ, ಟೂರ್ನಿಯ ಹಿಂದಿನ ಪಂದ್ಯಗಳ ಸ್ಕೋರ್ ವಿವರ, ಪಂದ್ಯಗಳ ವರದಿ, ವಿಶೇಷ ವರದಿಗಳನ್ನು ಕಿತ್ತೆಸೆದಿದೆ. ಜನಪ್ರಿಯ ಫ್ಯಾಂಟಸಿ ಆ್ಯಪ್ ಡ್ರೀಮ್ ಇಲೆವೆನ್‌ನಿಂದಲೂ ಪಿಎಸ್‌ಎಲ್ ಹೊರಬಿದ್ದಿದೆ.
ಇದನ್ನೂ ಓದಿ: ಪುಲ್ವಾಮ ದಾಳಿ: ಪಾಕ್ ವಿರುದ್ಧದ ವಿಶ್ವಕಪ್ ಪಂದ್ಯ ಬಹಿಷ್ಕರಿಸಲು CCI ಆಗ್ರಹ!
ಭಾರತೀಯ ವೀಕ್ಷಕರನ್ನು ಕಳೆದುಕೊಂಡಿದ್ದಲ್ಲದೇ ಕೋಟ್ಯಂತರ ರು. ಮೌಲ್ಯದ ಜಾಹೀರಾತುಗಳನ್ನು ಸಹ ಟೂರ್ನಿಯ ಕೈತಪ್ಪಲಿದೆ. ಭಾರತೀಯ ಪ್ರೇಕ್ಷಕರು, ಜಾಹೀರಾತು ಇಲ್ಲದೆ ಆರ್ಥಿಕವಾಗಿ ಪಿಎಸ್‌ಎಲ್ ಮತ್ತಷ್ಟುಸಂಕಷ್ಟಕ್ಕೆ ಸಿಲುಕಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.