ಚಾಂಗ್‌ಝೋ (ಸೆ.19): ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ ಪಿ.ವಿ ಸಿಂಧು, ಚೀನಾ ಓಪನ್‌ ಮಹಿಳಾ ಸಿಂಗಲ್ಸ್‌ನಲ್ಲಿ ಶುಭಾರಂಭ ಮಾಡಿದ್ದಾರೆ. ಆದರೆ ಮತ್ತೊಬ್ಬ ತಾರಾ ಆಟಗಾರ್ತಿ ಸೈನಾ ನೆಹ್ವಾಲ್‌ ಮೊದಲ ಸುತ್ತಿ​ನಲ್ಲೇ ಸೋತು ಹೊರ​ಬಿ​ದ್ದರು.

’ಯುವ ದಸರಾ’ ಉದ್ಘಾಟಿಸಲು PV ಸಿಂಧುವನ್ನು ಆಹ್ವಾನಿಸಿದ ಸಂಸದ ಪ್ರತಾಪ್ ಸಿಂಹ

ಬುಧ​ವಾ​ರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಮಾಜಿ ಒಲಿಂಪಿಕ್‌ ಚಾಂಪಿಯನ್‌ ಚೀನಾದ ಲೀ ಕ್ಸಿರುಯಿ ವಿರುದ್ಧ ವಿರುದ್ಧ 21-18, 21-12 ಗೇಮ್‌ಗಳಲ್ಲಿ ಸಿಂಧು ಜಯ​ಗ​ಳಿ​ಸಿ​ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇ​ಶಿ​ಸಿ​ದರು. ಸೈನಾ ತಮ್ಮ ಮೊದಲ ಸುತ್ತಿನ ಪಂದ್ಯ​ದಲ್ಲಿ ಥಾಯ್ಲೆಂಡ್‌ನ ಬುಸನನ್‌ ಒಂಗ್ಬಮ್ರುಂಗ್ಫಾನ್‌ ವಿರುದ್ಧ 10-21, 17-21 ನೇರ ಗೇಮ್‌ಗಳಲ್ಲಿ ಸೋತು ಹೊರಬಿದ್ದರು.

ಒಲಂಪಿಕ್‌ನಲ್ಲಿ ಚಿನ್ನ ಗೆಲ್ಲುವೆ : PV ಸಿಂಧು

ಇದೇ ವೇಳೆ ಪುರು​ಷರ ಸಿಂಗಲ್ಸ್‌ ಮೊದಲ ಸುತ್ತಿ​ನಲ್ಲಿ ಬಿ.ಸಾಯಿಪ್ರಣೀತ್‌, ಥಾಯ್ಲೆಂಡ್‌ನ ಸುಪ್ಪನ್ಯರನ್ನು 21-19, 21-23, 21-14 ಗೇಮ್‌ಗಳಿಂದ ಮಣಿಸಿ 2ನೇ ಸುತ್ತಿಗೆ ಪ್ರವೇ​ಶಿ​ಸಿ​ದರು.