ಹೈದರಾಬಾದ್[ಸೆ.14]: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಪಿ.ವಿ. ಸಿಂಧು ಈ ಬಾರಿಯ ಯುವ ದಸರಾವನ್ನು ಉದ್ಘಾಟಿಸಲಿದ್ದಾರೆ. ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಪಿ.ವಿ ಸಿಂಧು ನಿವಾಸಕ್ಕೆ ಭೇಟಿ ಕೊಟ್ಟು, ಯುವ ದಸರಾ ಉದ್ಘಾಟಿಸುವಂತೆ ಅಧಿಕೃತ ಆಹ್ವಾನ ನೀಡಿದ್ದಾರೆ. 

ಒಲಂಪಿಕ್‌ನಲ್ಲಿ ಚಿನ್ನ ಗೆಲ್ಲುವೆ : PV ಸಿಂಧು

ಅಕ್ಟೋಬರ್ 01ರಂದು ಮೈಸೂರಿನ ಮಹರಾಜ ಕಾಲೇಜು ಮೈದಾನದಲ್ಲಿ ಯುವ ದಸರಾ ಕಾರ್ಯಕ್ರಮ ನಡೆಯಲಿದೆ. ಹೀಗಾಗಿ ಈ ಕಾರ್ಯಕ್ರಮ ಉದ್ಘಾಟಿಸುವಂತೆ ಪ್ರತಾಪ್ ಸಿಂಹ ಅಧಿಕೃತ ಆಹ್ವಾನ ಪತ್ರಿಕೆ ನೀಡುವ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಯುವ ದಸರಾ ಉದ್ಘಾಟಿಸಲು ಅತಿಥಿಯಾಗಿ ಆಗಮಿಸುವಂತೆ ರಿಯೋ ಒಲಿಂಪಿಕ್ ರಜತ ಪದಕ ವಿಜೇತೆ ಸಿಂಧುಗೆ ಆಹ್ವಾನ ನೀಡಿದ್ದರು. 

ಜಿಲ್ಲಾ ಸುದ್ದಿಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ...

ಇದೀಗ ಸಂಸದ ಸಿಂಹ ಹಾಗೂ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಶ್ಯಾಂತ್ ಅಧಿಕೃತವಾಗಿ ಭೇಟಿಯಾಗಿ ’ಯುವ ದಸರಾ’ ಉದ್ಘಾಟಿಸುವಂತೆ ಕೋರಿದ್ದಾರೆ. ಈ ಕುರಿತಂತೆ ಪ್ರತಾಪ್ ಸಿಂಹ, ಅಕ್ಟೋಬರ್ 01ರಂದು ಸಿಂಧು ಹಾಗೂ ಅವರ ಕುಟುಂಬವನ್ನು ಬರಮಾಡಿಕೊಳ್ಳಲು ಎದುರು ನೋಡುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಸಿಂಧು ಧನ್ಯವಾದ ಅರ್ಪಿಸಿದ್ದಾರೆ. 

ಹೈದರಾಬಾದ್’ನ ಪಿ.ವಿ ಸಿಂಧು ಇತ್ತೀಚೆಗಷ್ಟೇ ಸ್ವಿಟ್ಜರ್’ಲ್ಯಾಂಡ್’ನ ಬಾಸೆಲ್’ನಲ್ಲಿ ಮುಕ್ತಾಯವಾದ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್’ಶಿಪ್’ನಲ್ಲಿ ಚಿನ್ನ ಗೆಲ್ಲುವ ಮೂಲಕ ಇತಿಹಾಸ ಬರೆದಿದ್ದರು. ಇದರೊಂಚಿಗೆ ಬ್ಯಾಡ್ಮಿಂಟನ್’ನಲ್ಲಿ ವಿಶ್ವ ಚಾಂಪಿಯನ್ ಆದ ಮೊದಲ ಭಾರತೀಯ ಆಟಗಾರ್ತಿ ಎನ್ನುವ ಗೌರವಕ್ಕೆ ಭಾಜನರಾಗಿದ್ದರು.