ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಚೆಂಡು ವಿರೂಪಗೊಳಿಸಲು ಪ್ರಯತ್ನಿಸಿದ್ದ ಚಾಂಡಿಮಲ್‌’ರನ್ನು ಐಸಿಸಿ ವಿಚಾರಣೆಗೊಳಪಡಿಸಿತ್ತು. ಬಳಿಕ ಪಂದ್ಯದ ಸಂಭಾವನೆಯ ಶೇ.100ರಷ್ಟು ಮೊತ್ತವನ್ನು ದಂಡ ಹಾಗೂ ಒಂದು ಪಂದ್ಯ ನಿಷೇಧಕ್ಕೊಳಪಡಿಸಿತ್ತು. 

ಜಮೈಕಾ[ಜೂ.22]: ವಿಂಡೀಸ್ ಪ್ರವಾಸದಲ್ಲಿರುವ ಶ್ರೀಲಂಕಾ ತಂಡದ ನಾಯಕ ದಿನೇಶ್ ಚಾಂಡಿಮಲ್, ಐಸಿಸಿ ತಮಗೆ ವಿಧಿಸಿರುವ ನಿಷೇಧದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದಾರೆ. 

ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಚೆಂಡು ವಿರೂಪಗೊಳಿಸಲು ಪ್ರಯತ್ನಿಸಿದ್ದ ಚಾಂಡಿಮಲ್‌’ರನ್ನು ಐಸಿಸಿ ವಿಚಾರಣೆಗೊಳಪಡಿಸಿತ್ತು. ಬಳಿಕ ಪಂದ್ಯದ ಸಂಭಾವನೆಯ ಶೇ.100ರಷ್ಟು ಮೊತ್ತವನ್ನು ದಂಡ ಹಾಗೂ ಒಂದು ಪಂದ್ಯ ನಿಷೇಧಕ್ಕೊಳಪಡಿಸಿತ್ತು. 

ಇದನ್ನು ಓದಿ:ಚೆಂಡು ವಿರೂಪ: ಲಂಕಾ ನಾಯಕನಿಗೆ 1 ಟೆಸ್ಟ್ ನಿಷೇಧ

Scroll to load tweet…

ಇದನ್ನು ಓದಿ:ಗಾಯದ ಮೇಲೆ ಬರೆ ಎಳೆದಂತಾದ ವಾರ್ನರ್ ಪರಿಸ್ಥಿತಿ..!

ಈ ಮೊದಲು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗರಾದ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಹಾಗೂ ಕ್ಯಾಮರೋನ್ ಬೆನ್’ಕ್ರಾಪ್ಟ್ ಬಾಲ್ ಟ್ಯಾಂಪರಿಂಗ್ ಮಾಡಿ ಸಿಕ್ಕಿಬಿದ್ದಿದ್ದರು. ಹೀಗಾಗಿ ಸ್ಮಿತ್ ಹಾಗೂ ವಾರ್ನರ್ ಒಂದು ವರ್ಷ ನಿಷೇಧಕ್ಕೆ ಗುರಿಯಾಗಿದ್ದರೆ, ಬೆನ್’ಕ್ರಾಫ್ಟ್ 9 ತಿಂಗಳು ನಿಷೇಧಕ್ಕೆ ಗುರಿಯಾಗಿದ್ದಾರೆ.