Asianet Suvarna News Asianet Suvarna News

ಬಾಲ್ ಟ್ಯಾಂಪರಿಂಗ್ ಆರೋಪ ತಳ್ಳಿ ಹಾಕಿದ ಚಾಂಡಿಮಾಲ್

ಬಾಲ್ ಟ್ಯಾಂಪರಿಂಗ್ ಆರೋಪಕ್ಕೆ ಗುರಿಯಾಗಿರುವ ಶ್ರೀಲಂಕಾ ನಾಯಕ ದಿನೇಶ್ ಚಾಂಡಿಮಾಲ್ ಸ್ಪಷ್ಟಣೆ ನೀಡಿದ್ದಾರೆ. ಚಾಂಡಿಮಾಲ್ ನೀಡಿದ ಹೇಳಿಕೆ ಏನು? ವೆಸ್ಟ್ಇಂಡೀಸ್-ಶ್ರೀಲಂಕಾ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ನಿಜಕ್ಕೂ ಚೆಂಡು ವಿರೂಪಗೊಳಿಸಲಾಗಿತ್ತಾ? ಈ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

Chandimal pleads not guilty to ball-tampering charge

ಗ್ರಾಸ್ ಐಲೆಟ್(ಜೂ.19): ಜೇಬಲ್ಲಿಟ್ಟುಕೊಂಡಿದ್ದ ಸಿಹಿ ಬಳಸಿ ಚೆಂಡು ವಿರೂಪಗೊಳಿಸಿರುವ ಆರೋಪವನ್ನು ಶ್ರೀಲಂಕಾ ನಾಯಕ ದಿನೇಶ್ ಚಾಂಡಿಮಲ್ ತಳ್ಳಿಹಾಕಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ನ 3ನೇ ದಿನದಾಟದಂದು ಅಂಪೈರ್‌ಗಳ ಚೆಂಡು ಬದಲಾವಣೆ ನಿರ್ಧಾರದಿಂದಾಗಿ ಶ್ರೀಲಂಕಾ
ಆಟಗಾರರು ಮೈದಾನಕ್ಕಿಳಿಯದೆ ಪ್ರತಿಭಟಿಸಿದ್ದರು. 

ಇದನ್ನೂ ಓದಿ: ನಿಷೇಧದ ಭೀತಿಯಲ್ಲಿ ಶ್ರೀಲಂಕಾ ನಾಯಕ ದಿನೇಶ್ ಚಾಂಡಿಮಾಲ್

ಲಂಕಾ ಆಟಗಾರರ ಪ್ರತಿಭಟನೆಯಿಂದಾಗಿ ಆಟ ಆರಂಭವಾಗುವುದು 2 ಗಂಟೆ ತಡವಾಗಿತ್ತು. ಹೀಗಾಗಿ ಮ್ಯಾಚ್ ರೆಫ್ರಿ ಶ್ರೀಲಂಕಾ ತಂಡಕ್ಕೆ ಎಚ್ಚರಿಕೆ ನೀಡಿ ವಿಂಡೀಸ್ ತಂಡಕ್ಕೆ 5 ರನ್ ಹೆಚ್ಚುವರಿಯಾಗಿ ನೀಡಿತ್ತು.  ಈ ನಾಟಕೀಯ ಬೆಳವಣಿಗೆ ಬಳಿಕ ಪಂದ್ಯದ ಅಧಿಕಾರಿಗಳು 2ನೇ ದಿನದಾಟದ ಕೊನೆ ಅವಧಿಯ ಆಟದ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಚಾಂಡಿಮಲ್ ಚೆಂಡು ವಿರೂಪಕ್ಕೆ ಯತ್ನಿಸಿರುವ ಅನುಮಾನಗಳು ಹುಟ್ಟಿಕೊಂಡಿದ್ದವು.

ಇದನ್ನೂ ಓದಿ:ವೆಸ್ಟ್ಇಂಡೀಸ್-ಶ್ರೀಲಂಕಾ ಟೆಸ್ಟ್ ಪಂದ್ಯದಲ್ಲಿ ಬಾಲ್ ಟ್ಯಾಂಪರಿಂಗ್ ಆರೋಪ

ಬಾಲ್ ಟ್ಯಾಂಪರಿಂಗ್ ಮಾಡಿರುವ ಕುರಿತು ಮ್ಯಾಚ್ ಅಂಪೈರ್ ಅಲೀಮ್ ದಾರ್ ಹಾಗೂ ಇಯನ್ ಗೋಲ್ಡ್ ಅನುಮಾನ ವ್ಯಕ್ತಪಡಿಸಿ, ಚೆಂಡು ಬದಲಾಯಿಸಿದ್ದರು. ಅನುಮಾನ ಬಲವಾಗುತ್ತಿದ್ದಂತೆ, ನಾಯಕ ದಿನೇಶ್ ಚಾಂಡಿಮಾಲ್  ಐಸಿಸಿ ಕೆಂಗಣ್ಣಿಗೂ ಗುರಿಯಾಗಿದ್ದಾರೆ.

Follow Us:
Download App:
  • android
  • ios