ಚೆಂಡು ವಿರೂಪ: ಲಂಕಾ ನಾಯಕನಿಗೆ 1 ಟೆಸ್ಟ್ ನಿಷೇಧ

Dinesh Chandimal ball-tampering: Sri Lanka captain banned for one Test
Highlights

  • ವೆಸ್ಟ್ ಇಂಡೀಸ್ ವಿರುದ್ಧ 2ನೇ ಟೆಸ್ಟ್‌ನಲ್ಲಿ ಚೆಂಡು ವಿರೂಪ ಪ್ರಯತ್ನ
  • ಒಂದು ಟೆಸ್ಟ್‌ಗೆ ನಿಷೇಧ ಹಾಗೂ ಪಂದ್ಯ ಸಂಭಾವನೆ ಯ ಶೇ.100ರಷ್ಟನ್ನು ದಂಡ

ಸೇಂಟ್‌ಲೂಸಿಯಾ(ಜೂ.21): ವೆಸ್ಟ್ ಇಂಡೀಸ್ ವಿರುದ್ಧ 2ನೇ ಟೆಸ್ಟ್‌ನಲ್ಲಿ ಚೆಂಡು ವಿರೂಪಗೊಳಿಸಲು ಪ್ರಯತ್ನಿಸಿದ ಶ್ರೀಲಂಕಾ ನಾಯಕ ದಿನೇಶ್ ಚಾಂಡಿಮಲ್‌ಗೆ ಐಸಿಸಿ ಒಂದು ಟೆಸ್ಟ್‌ಗೆ ನಿಷೇಧ ಹಾಗೂ ಪಂದ್ಯ ಸಂಭಾವನೆ ಯ ಶೇ.100ರಷ್ಟನ್ನು ದಂಡ ವಿಧಿಸಿದೆ.

ಚೆಂಡು ವಿರೂಪದ ಆರೋಪವನ್ನು ಚಾಂಡಿಮಲ್ ನಿರಾಕರಿಸಿದ್ದರು. ಬಳಿಕ ನಡೆದ ವಿಚಾರಣೆ ವೇಳೆ ಚಾಂಡಿಮಲ್ ತಮ್ಮ ಬಾಯಿಯಿಂದ ತೆಗೆದಿರುವ ರಸವೊಂದನ್ನು ಚೆಂಡಿಗೆ ಹಚ್ಚಿದ್ದು ಸ್ಪಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಲಾಗಿದೆ.

loader