ಲಂಡನ್(ಜೂ.03): ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಹೋರಾಟಕ್ಕೆ ಟೀಂ ಇಂಡಿಯಾ ಸಜ್ಜಾಗುತ್ತಿದೆ. ಜೂನ್ 5 ರಂದು ಸೌತ್ಆಫ್ರಿಕಾ ವಿರುದ್ದದ ಪಂದ್ಯದೊಂದಿಗೆ ಕೊಹ್ಲಿ ಸೈನ್ಯ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಈ ಭಾರಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಟೀಂ ಇಂಡಿಯಾಗೆ ಇದೀಗ ಭಾರತದ ಫುಟ್ಬಾಲ್ ತಂಡ ಶುಭಹಾರೈಸಿದೆ.

ನಾಯಕ ಸುನಿಲ್ ಚೆಟ್ರಿ, ಸಂದೇಶ್ ಜಿಂಗನ್ ಸೇರಿದಂತೆ ಪುರುಷರ ಫುಟ್ಬಾಲ್ ತಂಡ ಹಾಗೂ ಮಹಿಳಾ ಪುಟ್ಬಾಲ್ ಪಟುಗಳು ಟೀಂ ಇಂಡಿಯಾಗೆ ಶುಭಹಾರೈಸಿದ್ದಾರೆ. ಅತ್ಯುತ್ತಮ ಪ್ರದರ್ಶನದ ಮೂಲಕ ಭಾರತ ವಿಶ್ವಕಪ್ ಗೆಲ್ಲಲಿ ಎಂದಿದ್ದಾರೆ.

 

 

ಜೂನ್ 5 ರಂದು ಭಾರತ ಹಾಗೂ ಸೌತ್ಆಫ್ರಿಕಾ ಹೋರಾಟ ನಡೆಸಲಿದೆ. ಬಳಿಕ ಟೀಂ ಇಂಡಿಯಾ, ಜೂನ್ 9 ರಂದು ಆಸ್ಟ್ರೇಲಿಯಾ ವಿರುದ್ಧ ಹೋರಾಟ ನಡೆಸಲಿದೆ. ಜುಲೈ 14 ರಂದು ಲಾರ್ಡ್ಸ್ ಮೈದಾನದಲ್ಲಿ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ನಡೆಯಲಿದೆ.