ಮುಂಬೈ(ಮೇ.17):  ಮಹೀಂದ್ರ ಮೋಟಾರ್ ಮಾಲೀಕ ಆನಂದ್ ಮಹೀಂದ್ರ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ಟ್ವಿಟರ್ ಮೂಲಕ ಸದಾ ಸುದ್ದಿಯಲ್ಲಿರುವ ಮಹೀಂದ್ರ ಇದೀಗ 5ರ ಪೋರನ ಫುಟ್ಬಾಲ್ ಆಟಕ್ಕೆ ಮನಸೋತು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಪುಟಾಣಿ ಹುಡುಗನ ಫುಟ್ಬಾಲ್ ಪ್ರತಿಭೆ ಇದೀಗ ಭಾರತದಲ್ಲಿ ಸದ್ದು ಮಾಡುತ್ತಿದೆ.

ಇದನ್ನೂ ಓದಿ: ಚಾಲಾಕಿ ಹೆಂಡ್ತಿ ಇರೋದರ ಅಪಾಯ: ಏನು ಆನಂದ್ ಮಹೀಂದ್ರಾ ಉಪಾಯ?

ಆನಂದ್ ಮಹೀಂದ್ರ ವ್ಯಾಟ್ಸಾಪ್ ಗ್ರೂಪ್‌ಗೆ ಬಂದ ವೀಡಿಯೋ ಒಂದನ್ನು ಗಮನಿಸಿದ ಆನಂದ್ ಮಹೀಂದ್ರಾಗೆ ಅಚ್ಚರಿ ಕಾದಿತ್ತು. ಅದ್ಬುತ ಫುಟ್ಬಾಲ್ ಪ್ರತಿಗೆ ಆನಂದ್ ಮಹೀಂದ್ರ ಮನದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಆರಂಭದಲ್ಲಿ ಹುಡುಗಿ ಎಂದುಕೊಂಡಿದ್ದ ಆನಂದ್ ಮಹೀಂದ್ರ ಅಂತರ್ಜಾಲದಲ್ಲಿ ಹೆಚ್ಚಿನ ಮಾಹಿತಿ ಹುಡುಕಿದ್ದಾರೆ. ಫುಟ್ಬಾಲ್ ಮೋಡಿ ಮಾಡುತ್ತಿರುವ ಈ ಪುಣಾಣಿ ಹುಡುಗ ಅನ್ನೋ ಸತ್ಯ ಬಹಿರಂಗವಾಗಿದೆ. ಇಷ್ಟೇ ಅಲ್ಲ 4 ವರ್ಷದ ಇರಾನಿ ಹುಡುಗನ ಫುಟ್ಬಾಲ್ ಆಟ ಅಚ್ಚರಿಗೊಳಿಸುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

 

 

ಇದನ್ನೂ ಓದಿ: ಕಾರು ಎಷ್ಟು ಕೊಡುತ್ತೆ ಪ್ರಶ್ನೆಗೆ ಮಹೀಂದ್ರ ಮಾಲೀಕರ ತಕ್ಕ ತಿರುಗೇಟು!

ಆನಂದ್ ಮಹೀಂದ್ರ ಮೇಲ್ನೋಟಕ್ಕೆ ಹುಡುಗಿ ಎಂದುಕೊಳ್ಳಲು ಕಾರಣವಿದೆ. ಉದ್ದ ಕೂದಲು ಬಿಟ್ಟಿದ್ದ ಈ ಪೋರ ಮೊದಲ ನೋಟಕ್ಕೆ ಪುಟಾಣಿ ಹುಡುಗಿಯಂತೆ ಕಾಣಿಸುತಿದ್ದ. ಇಷ್ಟೇ ಅಲ್ಲ ಈ ವೀಡಿಯೋ ಕ್ಲಾರಿಟಿ ಕೂಡ ಕಡಿಮೆ. ಇದೀಗ ಆನಂದ್ ಮಹೀಂದ್ರ ಟ್ವೀಟ್ ಮೂಲಕ ಇರಾನಿ ಹುಡುಗನ ಫುಟ್ಬಾಲ್ ಆಟವನ್ನು ಬಣ್ಣಿಸಿದ್ದಾರೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.