ಪದ್ಮವಿಭೂಷಣ ಪ್ರಶಸ್ತಿಗೆ ಬಾಕ್ಸರ್ ಮೇರಿ ಕೋಮ್ ಹೆಸರು ಶಿಫಾರಸು
ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕೇಂದ್ರ ಕ್ರೀಡಾ ಸಚಿವಾಲಯ ಅತ್ಯುನ್ನತ ನಾಗರೀಕ ಗೌರವ ನೀಡಲು ಮುಂದಾಗಿದೆ. ಮೇರಿ ಕೋಮ್ ಇದೇ ಮೊದಲ ಬಾರಿಗೆ ಪದ್ಮವಿಭೂಷಣ ಗೌರವ ನೀಡಲು ಶಿಫಾರಸು ಮಾಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನವದೆಹಲಿ: ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಭಾರತದ ಮಹಿಳಾ ಕ್ರೀಡಾಪಟುಗಳಿಗೆ ಕೇಂದ್ರ ಕ್ರೀಡಾ ಸಚಿವಾಲಯ ಅತ್ಯುನ್ನತ ನಾಗರೀಕ ಗೌರವ ನೀಡಲು ಮುಂದಾಗಿದೆ. ಈ ಬಾರಿ ವಿಶೇಷವಾಗಿ 7 ಮಹಿಳಾ ಕ್ರೀಡಾಪಟುಗಳನ್ನು ಪದ್ಮ ಪ್ರಶಸ್ತಿಗೆ ಕ್ರೀಡಾ ಸಚಿವಾಲಯ ಗುರುವಾರ ಶಿಫಾರಸು ಮಾಡಿದೆ.
ಕರ್ನಾಟಕದ ಮಾಜಿ ಒಲಿಂಪಿಯನ್ ಎಂ.ಪಿ ಗಣೇಶ್ ಹಾಗೂ ಆರ್ಚರಿ ಪಟು ತರುಣ್‌ದೀಪ್ ರೈ ಅವರನ್ನು ಹೊರತುಪಡಿಸಿದರೆ ಉಳಿದ ಎಲ್ಲಾ ಮಹಿಳಾ ಕ್ರೀಡಾ ಸಾಧಕಿಯರ ಹೆಸರನ್ನು ಪದ್ಮ ಪ್ರಶಸ್ತಿಗೆ ಸೂಚಿಸಲಾಗಿದ್ದು, ಗೃಹ ಸಚಿವಾಲಯಕ್ಕೆ ಈಗಾಗಲೇ ಪಟ್ಟಿಯನ್ನು ಕಳುಹಿಸಲಾಗಿದೆ.
ಜನಪದ ಕೋಗಿಲೆ, ನಾಡೋಜ ಸುಕ್ರಜ್ಜಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು
6 ಬಾರಿ ವಿಶ್ವ ಚಾಂಪಿಯನ್ ಮಹಿಳಾ ಬಾಕ್ಸರ್ ಮೇರಿ ಕೋಮ್‌ರನ್ನು ದೇಶದ 2ನೇ ಅತ್ಯುನ್ನತ ಗೌರವವಾದ (ಭಾರತ ರತ್ನ ನಂತರದ ಸ್ಥಾನ) ಪದ್ಮ ವಿಭೂಷಣಕ್ಕೆ ಶಿಫಾರಸು ಮಾಡಿದೆ. ಮೇರಿ ಕೋಮ್ 2013ರಲ್ಲಿ ಪದ್ಮಭೂಷಣ ಮತ್ತು 2006ರಲ್ಲಿ ಪದ್ಮಶ್ರೀ ಪುರಸ್ಕೃತರಾಗಿದ್ದಾರೆ. ಒಲಿಂಪಿಕ್ ಬೆಳ್ಳಿ ವಿಜೇತೆ, ವಿಶ್ವ ಚಾಂಪಿಯನ್ ಶಟ್ಲರ್ ಪಿ.ವಿ. ಸಿಂಧುರನ್ನು 3ನೇ ಅತ್ಯುನ್ನತ ಗೌರವವಾದ ಪದ್ಮಭೂಷಣ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. 2015ರಲ್ಲಿ ಸಿಂಧು ಪದ್ಮಶ್ರೀ ಪುರಸ್ಕೃತರಾಗಿದ್ದರು.
ಉಳಿದಂತೆ ಪುರುಷ ಆರ್ಚರಿ ಪಟು ತರುಣ್‌ದೀಪ್ ರೈ ಸೇರಿದಂತೆ 7 ಮಹಿಳಾ ಕ್ರೀಡಾ ಸಾಧಕಿಯರಿಗೆ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಇದರಲ್ಲಿ ಕುಸ್ತಿಪಟು ವಿನೇಶ್ ಫೋಗಾಟ್, ಟೇಬಲ್ ಟೆನಿಸ್ ಆಟಗಾರ್ತಿ ಮನಿಕಾ ಬಾತ್ರಾ, ಮಹಿಳಾ ಕ್ರಿಕೆಟ್ ಆಟಗಾರ್ತಿ ಹರ್ಮನ್‌ಪ್ರೀತ್ ಕೌರ್, ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್, ಮಾಜಿ ಶೂಟರ್ ಸುಮಾ ಶಿರೂರ್, ಪರ್ವತಾರೋಹಿ ಅವಳಿ ಸಹೋದರಿಯರಾದ ತಾಶಿ ಮಲಿಕ್ ಮತ್ತು ನುಂಗ್ಶಿ ಮಲಿಕ್ ಅವರ ಹೆಸರನ್ನು ಸೂಚಿಸಲಾಗಿದೆ.
ಪದ್ಮಶ್ರೀ ಪಡೆದ ಬಳಿಕ ಕೆಲಸ ಸಿಗುತ್ತಿಲ್ಲ: ಇರುವೆ ಮೊಟ್ಟೆ ತಿಂದು ಜೀವನ ನಡೆಸ್ತಿದ್ದಾನೆ ರೈತ!
ಪದ್ಮಶ್ರೀಗೆ ಗಣೇಶ್ ಹೆಸರು:
ಮಾಜಿ ಒಲಿಂಪಿಯನ್ ಹಾಕಿ ಪಟು ಕರ್ನಾಟಕದ ಎಂ.ಪಿ ಗಣೇಶ್ ಅವರನ್ನು ದೇಶದ 4ನೇ ಅತ್ಯುನ್ನತ ಗೌರವವಾದ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. 1972ರ ಮ್ಯೂನಿಕ್ ಒಲಿಂಪಿಕ್ ಗೇಮ್ಸ್‌ನಲ್ಲಿ ಕಂಚು ಜಯಿಸಿದ್ದ ಭಾರತ ಹಾಕಿ ತಂಡದಲ್ಲಿ ಗಣೇಶ್ ಆಡಿದ್ದರು. 1971ರ ವಿಶ್ವಕಪ್‌ನಲ್ಲಿ ಕಂಚು ಗೆದ್ದ ಭಾರತ ಹಾಕಿ ತಂಡದಲ್ಲಿ, 1973ರ ವಿಶ್ವಕಪ್‌ನಲ್ಲಿ ಬೆಳ್ಳಿ ಗೆದ್ದ ಭಾರತ ಹಾಕಿ ತಂಡದಲ್ಲಿ ಗಣೇಶ್ ಆಡಿದ್ದಾರೆ. ಉಳಿದಂತೆ ರಾಜ್ಯದ ಚಿಕ್ಕಬಳ್ಳಾಪುರದಲ್ಲಿ ಜನಿಸಿರುವ ಮಾಜಿ ಶೂಟರ್ ಸುಮಾ ಶಿರೂರ್ ಅವರನ್ನು ಪದ್ಮಶ್ರೀಗೆ ಸೂಚಿಲಾಗಿದೆ.