ಪರ್ತ್(ಜ.06): ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ಬ್ರೆಂಡನ್ ಮೆಕಲಂ ಬ್ಯಾಟ್ ಹಿಡಿದರೆ ಸಾಕು ಯುವ ಕ್ರಿಕೆಟಿಗರು ನಾಚುವಂತೆ ಪ್ರದರ್ಶನ ನೀಡುತ್ತಾರೆ. ಇನ್ನು ಫೀಲ್ಡಿಂಗ್‌ನಲ್ಲಿ ಮೆಕಲಂ ಮೀರಿಸುವುದು ಕಷ್ಟ. ಇದೀಗ ಆಸ್ಟ್ರೇಲಿಯಾದ ಬಿಗ್ ಬ್ಯಾಶ್ ಲೀಗ್ ಟೂರ್ನಿಯಲ್ಲಿ ಬ್ರೆಂಡನ್ ಮೆಕಲಂ ಕ್ಯಾಚ್ ಪ್ರಯತ್ನ ಹೊಸ ವರ್ಷದಲ್ಲಿ ಹೊಸ ಸಂಚಲನ ಮೂಡಿಸಿದೆ.

ಇದನ್ನೂ ಓದಿ: ವಿಶ್ವಕಪ್ ಹೀರೋ ಕಪಿಲ್ ದೇವ್‌ಗೆ 60ನೇ ವರ್ಷದ ಹುಟ್ಟುಹಬ್ಬ ಸಂಭ್ರಮ

ಬ್ರಿಸ್ಬೇನ್ ಹೀಟ್ ಹಾಗೂ ಪರ್ತ್ ಸ್ಕಾಚರ್ಸ್ ನಡುವಿನ ಲೀಗ್ ಪಂದ್ಯದಲ್ಲಿ ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ಮಾಡುತ್ತಿದದ್ದ ಮೆಕಲಂ ಡೈವ್ ಮೂಲಕ ಕ್ಯಾಚ್ ಹಿಡಿಯಲು ಪ್ರಯತ್ನಿಸಿದ್ದಾರೆ. ಕ್ಯಾಚ್ ಡ್ರಾಪ್ ಆಗಿದೆ. ಆದರೆ ಮೆಕಲಂ ಪ್ರಯತ್ನಕ್ಕೆ ವಿಶ್ವವೇ ಸಲಾಂ ಹೇಳಿದೆ.

 

 

ಇದನ್ನೂ ಓದಿ: ಸಾಧನೆಗೆ ಸಲಾಂ: ಮೌಂಟ್ ವಿನ್ಸನ್ ಪರ್ವತ ಏರಿದ ಅರುಣಿಮಾ ಸಿನ್ಹಾ

ಬಿಗ್‌ಬ್ಯಾಶ್ ಅಧೀಕೃತ ಟ್ವಿಟರ್ ಪೇಜ್‌ನಲ್ಲ, ಮೆಕಲಂ ನ್ಯೂಜಿಲೆಂಡ್ ಫುಟ್ಬಾಲ್ ತಂಡದ ಗೋಲ್ ಕೀಪರ್ ಸ್ಥಾನ ನೀಡಬೇಕಿದೆ ಎಂದು ಹೇಳಲಾಗಿದೆ. ಇಷ್ಟೇ ಅಲ್ಲ 37ರ ಹರೆಯದಲ್ಲಿ ಮೆಕಲಂ ಪ್ರಯತ್ನಿ ನಿಜಕ್ಕೂ ಅದ್ಬುತ ಎಂದು ಅಭಿಮಾನಿಗಳು ಹೇಳಿದ್ದಾರೆ.