ಮುಂಬೈ(ಫೆ.21): ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನ ಜೊತೆಗಿನ ವಿಶ್ವಕಪ್ ಪಂದ್ಯ ಬಹಿಷ್ಕರಿಸಲು ಒತ್ತಡ ಹೆಚ್ಚಾಗುತ್ತಿದೆ. ಹಲವು ಕ್ರಿಕೆಟಿಗರು ಪಂದ್ಯ ಬಹಿಷ್ಕರಿಸುವಂತೆ ಸೂಚಿಸಿದ್ದಾರೆ. ಹೀಗಾಗಿ  ಸಭೆ ಸೇರಿದ ಬಿಸಿಸಿಐ ಇಂದು ಐಸಿಸಿಗೆ ಪತ್ರ ಬರೆದಿದೆ.  ಬಿಸಿಸಿಐ ಪತ್ರ ಬಹಿರಂಗವಾಗುತ್ತಿದ್ದಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ನಡುಕು ಶುರುವಾಗಿದೆ.

ಇದನ್ನೂ ಓದಿ: ವಿಶ್ವಕಪ್ 2019: ಬದ್ಧವೈರಿ ಪಾಕ್‌ಗೆ 2 ಅಂಕ ನೀಡಲು ಇಷ್ಟಪಡೋದಿಲ್ಲ - ಸಚಿನ್

ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್ ಮುಖಾಮುಖಿ ಕುರಿತು ಸಭೆಯಲ್ಲಿ ಬಿಸಿಸಿಐ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಿ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಪತ್ರದಲ್ಲಿ ಹೇಳಿದೆ. ಇದರ ಜೊತೆಗೆ ಭಯೋತ್ಪಾದಕರನ್ನು ಪೋಷಿಸೋ ರಾಷ್ಟ್ರದ ಜೊತೆ ಯಾವುದೇ ಕ್ರಿಕೆಟ್ ಇಟ್ಟುಕೊಳ್ಳಬೇಡಿ ಎಂದು ಐಸಿಸಿಗೆ ಸೂಚಿಸಿದೆ. ಇದು ಪಾಕಿಸ್ತಾನದ ಆತಂಕಕ್ಕೆ ಕಾರಣವಾಗಿದೆ. ಬಿಸಿಸಿಐ ಒತ್ತಡಕ್ಕೆ ಮಣಿದು ಐಸಿಸಿ ಸಮಿತಿ ಪಾಕ್ ವಿರುದ್ಧ ನಿರ್ಧಾರ ಪ್ರಕಟಿಸಿದರೆ,   ಕ್ರಿಕೆಟ್ ಅಂತ್ಯವಾಗಲಿದೆ ಅನ್ನೋ ಭಯ ಕಾಡುತ್ತಿದೆ.

ಇದನ್ನೂ ಓದಿ: ಐಪಿಎಲ್ ಉದ್ಘಾಟನಾ ಸಮಾರಂಭ ರದ್ದು - ಭಾರತೀಯರ ಹೃದಯ ಗೆದ್ದ ಬಿಸಿಸಿಐ!

ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರಿಗೆ ವಿಶೇಷ ಭದ್ರತೆ ಕಲ್ಪಿಸಲು ಬಿಸಿಸಿಐ ಪತ್ರದ ಮೂಲಕ ಸೂಚಿಸಿದೆ. ಕ್ರಿಕೆಟಿಗರ ಜೊತೆ ಟೀಂ ಇಂಡಿಯಾ ಅಧಿಕಾರಿಗಳು ಹಾಗೂ ಅಭಿಮಾನಿಗಳಿಗೂ ಸೂಕ್ತ ಭದ್ರತೆ ನೀಡಲು ಆಗ್ರಹಿಸಿದೆ. ಪಾಕ್ ವಿರುದ್ದದ ಪಂದ್ಯದ ಕುರಿತು ಸದ್ಯಕ್ಕೆ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ಇದನ್ನೂ ಓದಿ: ಬಿಸಿಸಿಐ ಕಚೇರಿಯಲ್ಲೂ ಪಾಕ್‌ ಕ್ರಿಕೆಟಿಗರ ಫೋಟೋ ತೆರವು

ವಿಶ್ವಕಪ್ ಟೂರ್ನಿಯಿಂದ ಪಾಕಿಸ್ತಾನ ತಂಡವನ್ನ ನಿಷೇಧಿಸಲು ಬಿಸಿಸಿಐಗೆ ಸಾಧ್ಯವಿಲ್ಲ. ಒಂದು ವೇಳೆ ಬಿಸಿಸಿಐ ಈ ಪ್ರಯತ್ನಕ್ಕೆ ಮುಂದಾದರೆ ಐಸಿಸಿಗೆ ಹೆಚ್ಚಿನ ಮತಗಳು ಸಿಗಲಿದೆ. ಇದು ಭಾರತಕ್ಕೆ ತೀವ್ರ ಹಿನ್ನಡೆಯಾಗಲಿದೆ. ಇಷ್ಟೇ ಅಲ್ಲ 2021ರ ಚಾಂಪಿಯನ್ಸ್ ಟ್ರೋಫಿ ಹಾಗೂ 2023ರ ವಿಶ್ವಕಪ್ ಆಯೋಜನೆ ಭಾರತದ ಕೈತಪ್ಪಲಿದೆ ಎಂದು ಬಿಸಿಸಿಐ ಅಧಿಕಾರಿಗಳು ಹೇಳಿದ್ದಾರೆ.