ಮುಂಬೈ(ಫೆ.22): ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಬದ್ಧವೈರಿ ಪಾಕಿಸ್ತಾನ ತಂಡಕ್ಕೆ 2 ಅಂಕ ನೀಡುವುದು ಸರಿಯಲ್ಲ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅಭಿಪ್ರಾಯಪಟ್ಟಿದ್ದಾರೆ. ಪಾಕಿಸ್ತಾನ ಜೊತೆ ಯಾವುದೇ ದ್ವಿಪಕ್ಷೀಯ ಸರಣಿ ಬೇಡ. ಆದರೆ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ವಿರುದ್ದದ ಪಂದ್ಯ ಬಹಿಷ್ಕರಿಸಿದರೆ ಅದರಿಂದ ನಷ್ಟ ನಮಗೆ ಎಂದು ಸಚಿನ್ ಹೇಳಿದ್ದಾರೆ.

ಇದನ್ನೂ ಓದಿ: ಇಂಡೋ-ಪಾಕ್ ವಿಶ್ವಕಪ್ ಪಂದ್ಯ: ಭಾರತಕ್ಕೆ ಕೌಂಟರ್ ನೀಡಲು ರೆಡಿಯಾದ ICC

ಬಿಸಿಸಿಐ ಪಾಕ್ ವಿರುದ್ದದ ಪಂದ್ಯ ಬಹಿಷ್ಕರಿಸಿದರೆ, ಬದ್ಧವೈರಿಗಳು ಸುಲಭವಾಗಿ 2 ಅಂಕ ಪಡೆದುಕೊಳ್ಳಲಿದ್ದಾರೆ. ಇದು ನಮಗಾದ ಸೋಲು. ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ವಿರುದ್ಧ ಭಾರತ ಸೋತಿಲ್ಲ. ಇದೀಗ ಮತ್ತೊಮ್ಮೆ ಪಾಕಿಸ್ತಾನ ತಂಡವನ್ನ ಸೋಲಿಸಬೇಕು ಎಂದು ಸಚಿನ್ ಹೇಳಿದ್ದಾರೆ.

ಇದನ್ನೂ ಓದಿ: ಪಾಕ್ ಜೊತೆ ಕ್ರಿಕೆಟ್ ಮಾತ್ರವಲ್ಲ ಯಾವುದೇ ಕ್ರೀಡೆ ಬೇಡ: ಗಂಗೂಲಿ!

ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೂಡ ಪಾಕಿಸ್ತಾನ ವಿರುದ್ದದ ಪಂದ್ಯ ಬಹಿಷ್ಕರಿಸುವುದು ಸೂಕ್ತವಲ್ಲ ಎಂದಿದ್ದರು. ಇದೀಗ ಸಚಿನ್ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನ ವಿರುದ್ಧದ ಯಾವುದೇ ವ್ಯವಹಾರಕ್ಕೂ ಭಾರತ ಸಿದ್ಧವಿಲ್ಲ. ಹೀಗಾಗಿ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ದದ ಪಂದ್ಯ ಬಹಿಷ್ಕರಿಸುವಂತೆ ಒತ್ತಾಯ ಕೇಳಿಬುರುತ್ತಿದೆ.