Asianet Suvarna News Asianet Suvarna News

ಬಿಸಿಸಿಐ ಕಚೇರಿಯಲ್ಲೂ ಪಾಕ್‌ ಕ್ರಿಕೆಟಿಗರ ಫೋಟೋ ತೆರವು

ಕರ್ನಾಟಕ ಸೇರಿ ಹಲವು ರಾಜ್ಯ ಕ್ರಿಕೆಟ್‌ ಸಂಸ್ಥೆಗಳು ಪಾಕಿಸ್ತಾನಿ ಆಟಗಾರರ ಫೋಟೋಗಳನ್ನು ತೆರವುಗೊಳಿಸಿದರೂ ಬಿಸಿಸಿಐ ಮಾತ್ರ ಮೃದು ಧೋರಣೆ ತೋರುತ್ತಿದ್ದಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು.

Finally photos of Pakistan players removed from BCCI office
Author
Mumbai, First Published Feb 22, 2019, 1:31 PM IST

ಮುಂಬೈ(ಫೆ.22): ಪ್ರತಿಷ್ಠಿತ ಕ್ರಿಕೆಟ್‌ ಕ್ಲಬ್‌ ಆಫ್‌ ಇಂಡಿಯಾ ಹಾಗೂ ಹತ್ತಾರು ರಾಜ್ಯ ಕ್ರಿಕೆಟ್‌ ಸಂಸ್ಥೆಗಳು ಪುಲ್ವಾಮ ಉಗ್ರರ ದಾಳಿ ಖಂಡಿಸಿ ಪಾಕಿಸ್ತಾನ ಕ್ರಿಕೆಟಿಗರ ಫೋಟೋಗಳನ್ನು ತೆರವುಗೊಳಿಸಿದ ಬಳಿಕ, ಬಿಸಿಸಿಐ ಸಹ ವಾಂಖೇಡೆ ಕ್ರೀಡಾಂಗಣದ ಆವರಣದಲ್ಲಿರುವ ತನ್ನ ಕೇಂದ್ರ ಕಚೇರಿಯಲ್ಲಿದ್ದ ಪಾಕಿಸ್ತಾನಿ ಕ್ರಿಕೆಟಿಗರ ಫೋಟೋಗಳನ್ನು ಕಿತ್ತೆಸೆದಿದೆ. 

ಚಿನ್ನಸ್ವಾಮಿ ಮೈದಾನದಲ್ಲಿದ್ದ ಪಾಕಿ ಪೋಟೋಗಳಿಗೆ ಗೇಟ್’ಪಾಸ್..!

ಕರ್ನಾಟಕ ಸೇರಿ ಹಲವು ರಾಜ್ಯ ಕ್ರಿಕೆಟ್‌ ಸಂಸ್ಥೆಗಳು ಪಾಕಿಸ್ತಾನಿ ಆಟಗಾರರ ಫೋಟೋಗಳನ್ನು ತೆರವುಗೊಳಿಸಿದರೂ ಬಿಸಿಸಿಐ ಮಾತ್ರ ಮೃದು ಧೋರಣೆ ತೋರುತ್ತಿದ್ದಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಕಚೇರಿಯಲ್ಲಿದ್ದ ಜಾವೆದ್‌ ಮಿಯಾಂದಾದ್‌, 2004ರಲ್ಲಿ ಭಾರತ ತಂಡದ ಪಾಕಿಸ್ತಾನ ಪ್ರವಾಸದ ಫೋಟೋಗಳು ಪ್ರಮುಖ ಆಕರ್ಷಣೆಯಾಗಿದ್ದವು. ಈ ಎಲ್ಲಾ ಫೋಟೋಗಳಿಗೀಗ ಬಿಸಿಸಿಐ ಗೇಟ್’ಪಾಸ್ ನೀಡಿದೆ. 

ಪಾಕ್‌ ಹೊರಹಾಕಲು ಬಿಸಿಸಿಐನಲ್ಲಿ ತಿಕ್ಕಾಟ? ಬಿಸಿಸಿಐ ಅಧಿಕಾರಿಗಳಿಂದಲೇ ವಿರೋಧ..!

ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ದಾಳಿಗೆ ಭಾರತದ 40ಕ್ಕೂ ಹೆಚ್ಚು ವೀರ ಯೋಧರು ಹುತಾತ್ಮರಾಗಿದ್ದರು. ಈ ದಾಳಿಯನ್ನು ಖಂಡಿಸಿ ರಾಜ್ಯ ಕ್ರಿಕೆಟ್ ಸಂಸ್ಥೆಗಳಾದ ಪಂಜಾಬ್, ರಾಜಸ್ಥಾನ, ವಿದರ್ಭ ಹಾಗೂ ಕರ್ನಾಟಕ ಕ್ರಿಕೆಟ್ ಸಂಸ್ಥೆಗಳು ತಮ್ಮ ಸ್ಟೇಡಿಯಂನಲ್ಲಿದ್ದ ಪಾಕಿಸ್ತಾನ ಆಟಗಾರರ ಭಾವಚಿತ್ರಗಳನ್ನು ತೆಗೆದುಹಾಕುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿವೆ. 

Follow Us:
Download App:
  • android
  • ios