ನವದೆಹಲಿ[ಮಾ.17]: ಪುಲ್ವಾಮಾ ದಾಳಿಯ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ), ಭದ್ರತಾ ಸಿಬ್ಬಂದಿಯ ಕಲ್ಯಾಣ ನಿಧಿಗೆ 20 ಕೋಟಿ ದೇಣಿಗೆ ನೀಡಲು ನಿರ್ಧರಿಸಿದೆ. 

ರಾಂಚಿ ಪಂದ್ಯವನ್ನು ಸೈನಿಕರಿಗೆ ಅರ್ಪಿಸಿದ ಟೀಂ ಇಂಡಿಯಾ

ಮಾ.23ರಂದು ಐಪಿಎಲ್‌ ಉದ್ಘಾಟನಾ ಪಂದ್ಯದ ವೇಳೆ ಭಾರತೀಯ ಸಶಸ್ತ್ರ ಪಡೆಗಳ ಹಿರಿಯ ಅಧಿಕಾರಿಗಳನ್ನು (ಭೂಸೇನೆ, ವಾಯು ಸೇನೆ ಹಾಗೂ ನೌಕಾ ಪಡೆ) ಆಹ್ವಾನಿಸಲು ಬಿಸಿಸಿಐ ನಿರ್ಧರಿಸಿದೆ ಎನ್ನಲಾಗಿದೆ. ‘ಬಿಸಿಸಿಐ ಆಡಳಿತ ಸಮಿತಿ 20 ಕೋಟಿಯನ್ನು ಮಂಜೂರು ಮಾಡಿದೆ. ಉದ್ಘಾಟನಾ ಪಂದ್ಯದಂದು ಎಂ.ಎಸ್‌.ಧೋನಿ ಹಾಗೂ ವಿರಾಟ್‌ ಕೊಹ್ಲಿ ಉಪಸ್ಥಿತರಿಲಿದ್ದಾರೆ. ಈ ವೇಳೆ ಘೋಷಿಸಿರುವ ಮೊತ್ತದ ಮೊದಲ ಕಂತನ್ನು ಭದ್ರತಾ ಸಿಬ್ಬಂದಿಯ ಕಲ್ಯಾಣ ನಿಧಿಗೆ ನೀಡಲಾಗುತ್ತದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಐಪಿಎಲ್‌ ಉದ್ಘಾಟನಾ ಸಮಾರಂಭವನ್ನು ರದ್ದುಗೊಳಿಸಿ, ಅದಕ್ಕೆ ಮೀಸಲಿಡುವ ಹಣವನ್ನು ಯೋಧರಿಗೆ ನೀಡಲು ಬಿಸಿಸಿಐ ನಿರ್ಧರಿಸಿತ್ತು.

ಆರ್ಮಿ ಕ್ಯಾಪ್: ಪಾಕ್ ಕ್ಯಾತೆಗೆ ಐಸಿಸಿ ಛೀಮಾರಿ

ಪುಲ್ವಾಮಾ ದಾಳಿಯಲ್ಲಿ ಹುತಾತ್ಮ ಯೋಧರಿಗೆ ಗೌರವ ಸೂಚಕವಾಗಿ ಭಾರತ-ಆಸ್ಟ್ರೇಲಿಯಾ ನಡುವೆ ರಾಂಚಿಯಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಆರ್ಮಿ ಕ್ಯಾಪ್ ಧರಿಸಿ ಕಣಕ್ಕಿಳಿದಿದ್ದರು. ಅಲ್ಲದೆ ಪಂದ್ಯದ ಪೂರ್ಣ ಸಂಭಾವನೆಯನ್ನು ಭದ್ರತಾ ಸಿಬ್ಬಂದಿಯ ಕಲ್ಯಾಣ ನಿಧಿಗೆ ನೀಡಿದ್ದರು.