ದುಬೈ: ಕೆಲ ವರ್ಷಗಳ ಹಿಂದೆ ಕ್ರಿಕೆಟ್ ಎಂದರೆ ಅಲರ್ಜಿ ಎಂಬಂತಿದ್ದ ಅಮೆರಿಕ ಈಗ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಾನ್ಯತೆಯ ಚುಟುಕು ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದೆ. 

ಐಸಿಸಿಯ 105ನೇ ಸದಸ್ಯ ರಾಷ್ಟ್ರವಾದ ಅಮೆರಿಕ, ಟಿ20 ಕ್ರಿಕೆಟ್ ಪಂದ್ಯವಾಡುತ್ತಿರುವ ವಿಶ್ವದ 28ನೇ ದೇಶವಾಗಿದೆ. ಟಾಸ್ ಗೆದ್ದ ಯುಎಇ ಕ್ಷೇತ್ರ ರಕ್ಷಣೆ ಆಯ್ದುಕೊಂಡಿತು.

ಮಳೆಯ ಕಾರಣ ಪಂದ್ಯವನ್ನು 15 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ಮೊದಲು ಬ್ಯಾಟಿಂಗ್ ನಡೆಸಿದ ಅಮೆರಿಕ 7 ವಿಕೆಟ್ ನಷ್ಟಕ್ಕೆ 152 ರನ್ ಪೇರಿಸಿತು. ಬಳಿಕ ಯುಎಇ ಬ್ಯಾಟಿಂಗ್ ನಡೆಸುತ್ತಿದ್ದಾಗ 3.3ನೇ ಓವರ್ ವೇಳೆ ಆರಂಭಗೊಂಡ ಮಳೆ ನಿಲ್ಲದ ಕಾರಣ ಪಂದ್ಯವನ್ನು ರದ್ದುಗೊಳಿಸಲಾಯಿತು.

ಸ್ಕೋರ್: 
ಅಮೆರಿಕ 152/7 
ಯುಎಇ 29/2