Asianet Suvarna News Asianet Suvarna News

ಆರ್ಮಿ ಕ್ಯಾಪ್: ಪಾಕ್ ಕ್ಯಾತೆಗೆ ಐಸಿಸಿ ಛೀಮಾರಿ

ಮಾ. 8ರಂದು ರಾಂಚಿಯಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ 3ನೇ ಪಂದ್ಯದಲ್ಲಿ ಸೇನಾ ಕ್ಯಾಪ್ ಧರಿಸಿ ಟೀಂ ಇಂಡಿಯಾ ಅಂಗಣಕ್ಕಿಳಿದಿತ್ತು. ಇದನ್ನು ಪ್ರಶ್ನಿಸಿದ್ದ ಪಿಸಿಬಿ, ಐಸಿಸಿಗೆ ದೂರು ನೀಡಿತ್ತು. ಅಲ್ಲದೇ ಸೂಕ್ತ ಕ್ರಮ ಕೈಗೊಳ್ಳುವಂತೆ ಹೇಳಿತ್ತು. ಈ ಬಗ್ಗೆ ಐಸಿಸಿ ಪ್ರತಿಕ್ರಯಿಸಿದ್ದು, ಪಾಕ್’ಗೆ ಮುಟ್ಟಿನೋಡಿಕೊಳ್ಳುವಂತ ಉತ್ತರ ನೀಡಿದೆ.

India had taken permission from ICC to wear camouflage caps
Author
New Delhi, First Published Mar 11, 2019, 11:13 AM IST

ಮುಂಬೈ(ಮಾ.11): ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಗೌರವ ಸಲ್ಲಿಸುವ ಸಲುವಾಗಿ ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ಆಟಗಾರರು ಸೇನಾ ಕ್ಯಾಪ್ ಧರಿಸಿದ್ದಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಹಾಗೂ ರಾಜಕಾರಣಿಗಳು ಕ್ಯಾತೆ ತೆಗೆದಿದ್ದು, ಇದೀಗ ಐಸಿಸಿ ಮುಂದೆ ಮುಖಭಂಗ ಅನುಭವಿಸಿದೆ.

ಕೊಹ್ಲಿ ಬಾಯ್ಸ್ ಸೇನಾ ಕ್ಯಾಪ್ ಧರಿಸಿದ್ದಕ್ಕೆ ಪಾಕಿಸ್ತಾನ ಆಕ್ರೋಶ !

ಮಾ. 8ರಂದು ರಾಂಚಿಯಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ 3ನೇ ಪಂದ್ಯದಲ್ಲಿ ಸೇನಾ ಕ್ಯಾಪ್ ಧರಿಸಿ ಟೀಂ ಇಂಡಿಯಾ ಅಂಗಣಕ್ಕಿಳಿದಿತ್ತು. ಇದನ್ನು ಪ್ರಶ್ನಿಸಿದ್ದ ಪಿಸಿಬಿ, ಐಸಿಸಿಗೆ ದೂರು ನೀಡಿತ್ತು. ಅಲ್ಲದೇ ಸೂಕ್ತ ಕ್ರಮ ಕೈಗೊಳ್ಳುವಂತೆ ಹೇಳಿತ್ತು.

ರಾಂಚಿ ಪಂದ್ಯವನ್ನು ಸೈನಿಕರಿಗೆ ಅರ್ಪಿಸಿದ ಟೀಂ ಇಂಡಿಯಾ

ಇದಕ್ಕೆ ಪ್ರತಿಕ್ರಿಯಿಸಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ), ಭಾರತ ಕ್ರಿಕೆಟ್ ತಂಡ ಸೇನಾ ಕ್ಯಾಪ್ ಧರಿಸುವುದಾಗಿ ಮುಂಚಿತವಾಗಿಯೇ ಐಸಿಸಿಯಿಂದ ಅನುಮತಿ ಪಡೆದಿತ್ತು. ಅಲ್ಲದೇ ಆ ಪಂದ್ಯದಲ್ಲಿನ ಆಟಗಾರರ ಸಂಭಾವನೆ ಮೊತ್ತವನ್ನು ಸೈನಿಕರ ನಿಧಿಗೆ ನೀಡುವುದಾಗಿ ಬಿಸಿಸಿಐ ಅನುಮತಿ ಕೋರಿತ್ತು ಎಂದು ಸಿಇಒ ಡೇವ್ ರಿಚರ್ಡಸನ್ ಹೇಳಿದ್ದಾರೆ. 

Follow Us:
Download App:
  • android
  • ios