ರಣಜಿ: ಬಿಸಿಸಿಐ ಭರಿಸಲಿದೆ ಈಶಾನ್ಯ ರಾಜ್ಯಗಳ ಖರ್ಚು

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 2, Aug 2018, 12:25 PM IST
BCCI to bear all expenses of NE states Ranji debut
Highlights

ಸಾಮಾನ್ಯವಾಗಿ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಸಹಾಯಕ ಸಿಬ್ಬಂದಿಗೆ ವೇತನ ಪಾವತಿಸಲಿವೆ. ಆದರೆ ಈಶಾನ್ಯ ರಾಜ್ಯ ತಂಡಗಳ ಪರವಾಗಿ ವೇತನವನ್ನು ಬಿಸಿಸಿಐ ಪಾವತಿಸಲಿದೆ.

ನವದೆಹಲಿ(ಆ.02]: ಮೊದಲ ಬಾರಿಗೆ ರಣಜಿ ಟ್ರೋಫಿಯಲ್ಲಿ ಈಶಾನ್ಯ ರಾಜ್ಯಗಳು ಆಡಲಿದ್ದು, ತಂಡಗಳ ಖರ್ಚು ವೆಚ್ಚವನ್ನು ಸ್ವತಃ ಬಿಸಿಸಿಐ ಭರಿಸುವುದಾಗಿ ತಿಳಿಸಿದೆ. 

ತಂಡಕ್ಕೆ ಮಾನ್ಯತೆ ಹೊಂದಿರುವ ಎನ್‌ಸಿಎ ಕೋಚ್‌ಗಳು, ಫಿಸಿಯೋ, ಟ್ರೈನರ್’ಗಳನ್ನು ಒದಗಿಸುವುದಾಗಿ ಬಿಸಿಸಿಐ ಸ್ಪಷ್ಟಪಡಿಸಿದೆ. ಸಾಮಾನ್ಯವಾಗಿ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಸಹಾಯಕ ಸಿಬ್ಬಂದಿಗೆ ವೇತನ ಪಾವತಿಸಲಿವೆ. ಆದರೆ ಈಶಾನ್ಯ ರಾಜ್ಯ ತಂಡಗಳ ಪರವಾಗಿ ವೇತನವನ್ನು ಬಿಸಿಸಿಐ ಪಾವತಿಸಲಿದೆ.

ಇದನ್ನು ಓದಿ: ಈ ಬಾರಿಯ ರಣಜಿ ಟೂರ್ನಿಗೆ ಹೊಸ 9 ತಂಡಗಳು ಸೇರ್ಪಡೆ

ಜತೆಗೆ ಸಿಕ್ಕಿಂ ಹಾಗೂ ಅರುಣಾಚಲ ಪ್ರದೇಶ ತಂಡಗಳಿಗೆ ತವರಿನಲ್ಲಿ ಆಡಲು ಸೂಕ್ತ ಕ್ರೀಡಾಂಗಣಗಳು ಇಲ್ಲದ ಕಾರಣ, ಪಕ್ಕದ ರಾಜ್ಯಗಳ ಕ್ರೀಡಾಂಗಣಗಳನ್ನು ಬಳಕೆ ಮಾಡಿಕೊಳ್ಳಲು ಬಿಸಿಸಿಐ ಅನುಕೂಲ ಮಾಡಿಕೊಡುವುದಾಗಿ ತಿಳಿಸಿದೆ.

loader