ಈ ಬಾರಿಯ ರಣಜಿ ಟೂರ್ನಿಗೆ ಹೊಸ 9 ತಂಡಗಳು ಸೇರ್ಪಡೆ

Nine new teams in Ranji Trophy 2018 19
Highlights

ಈ ತಂಡಗಳು ವಿವಿಧ ವಯೋಮಿತಿಯ ಪಂದ್ಯಾವಳಿಗಳಲ್ಲೂ ಆಡಲಿದ್ದು, 2018-19ರ ದೇಸಿ ಋತುವಿನಲ್ಲಿ ಒಟ್ಟು ಬರೋಬ್ಬರಿ 2017 ಪಂದ್ಯಗಳು ನಡೆಯಲಿವೆ. ಈ ವರ್ಷದ ದೇಸಿ ಋತು ಆ.13ರಿಂದ ಆರಂಭಗೊಳ್ಳಲಿದ್ದು ಹಿರಿಯ ಮಹಿಳೆಯರ ಚಾಲೆಂಜರ್ ಟ್ರೋಫಿ ಆ.20ರ ವರೆಗೂ ನಡೆಯಲಿದೆ. ಪುರುಷರ ವೇಳಾಪಟ್ಟಿ ದುಲೀಪ್ ಟ್ರೋಫಿಯೊಂದಿಗೆ (ಆ.17-ಸೆ.9) ಆರಂಭಗೊಳ್ಳಲಿದೆ. ಬಳಿಕ ಸೆ.19ರಿಂದ ಅ.20ರವರೆಗೂ ವಿಜಯ್ ಹಜಾರೆ(ಏಕದಿನ) ಟೂರ್ನಿ ನಡೆಯಲಿದ್ದು ಒಟ್ಟು 160 ಪಂದ್ಯಗಳು ನಿಗದಿಯಾಗಿವೆ. 

ನವದೆಹಲಿ[ಜು.19]: ಈ ವರ್ಷದಿಂದ ರಣಜಿ ಟ್ರೋಫಿಯಲ್ಲಿ ಈಶಾನ್ಯ ರಾಜ್ಯಗಳ ತಂಡಗಳು ಸಹ ಆಡಲಿವೆ. ಬುಧವಾರ ಬಿಸಿಸಿಐ ಮಹತ್ವದ ವಿಚಾರವನ್ನು ಪ್ರಕಟಗೊಳಿಸಿತು. ಮಣಿಪುರ, ಮೇಘಾಲಯ, ಮಿಜೋರಾಮ್, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಪುದುಚೇರಿ, ಸಿಕ್ಕಿಂ, ಉತ್ತರಾಖಂಡ ಹಾಗೂ ಬಿಹಾರ ತಂಡಗಳು ಸೇರ್ಪಡೆಗೊಂಡಿದ್ದು, ರಣಜಿಯಲ್ಲಿ ಆಡುವ ಒಟ್ಟು ತಂಡಗಳ ಸಂಖ್ಯೆ 37ಕ್ಕೇರಿದೆ.

ಈ ತಂಡಗಳು ವಿವಿಧ ವಯೋಮಿತಿಯ ಪಂದ್ಯಾವಳಿಗಳಲ್ಲೂ ಆಡಲಿದ್ದು, 2018-19ರ ದೇಸಿ ಋತುವಿನಲ್ಲಿ ಒಟ್ಟು ಬರೋಬ್ಬರಿ 2017 ಪಂದ್ಯಗಳು ನಡೆಯಲಿವೆ. ಈ ವರ್ಷದ ದೇಸಿ ಋತು ಆ.13ರಿಂದ ಆರಂಭಗೊಳ್ಳಲಿದ್ದು ಹಿರಿಯ ಮಹಿಳೆಯರ ಚಾಲೆಂಜರ್ ಟ್ರೋಫಿ ಆ.20ರ ವರೆಗೂ ನಡೆಯಲಿದೆ. ಪುರುಷರ ವೇಳಾಪಟ್ಟಿ ದುಲೀಪ್ ಟ್ರೋಫಿಯೊಂದಿಗೆ (ಆ.17-ಸೆ.9) ಆರಂಭಗೊಳ್ಳಲಿದೆ. ಬಳಿಕ ಸೆ.19ರಿಂದ ಅ.20ರವರೆಗೂ ವಿಜಯ್ ಹಜಾರೆ(ಏಕದಿನ) ಟೂರ್ನಿ ನಡೆಯಲಿದ್ದು ಒಟ್ಟು 160 ಪಂದ್ಯಗಳು ನಿಗದಿಯಾಗಿವೆ. 

ನ.1ರಿಂದ ಫೆ.6, 2019ರ ವರೆಗೂ ನಡೆಯುವ ರಣಜಿ ಟ್ರೋಫಿಯಲ್ಲಿ ಒಟ್ಟು 160 ಪಂದ್ಯಗಳು ನಡೆಯಲಿವೆ.  ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಒಟ್ಟು 140 ಪಂದ್ಯ, ಪುರುಷರ ಅಂಡರ್-23 ವಿಭಾಗದಲ್ಲಿ ಒಟ್ಟು 302 ಪಂದ್ಯ, ಬಾಲಕರ ಅಂಡರ್-19 ವಿಭಾಗದಲ್ಲಿ ಒಟ್ಟು 286 ಪಂದ್ಯ, ಹಿರಿಯ ಮಹಿಳೆಯರ ವಿಭಾಗದಲ್ಲಿ 295 ಪಂದ್ಯ, ಅಂಡರ್ -23 ವಿಭಾಗದಲ್ಲಿ ಒಟ್ಟು 292 ಪಂದ್ಯಗಳು ನಡೆಯಲಿವೆ.

ರಣಜಿಯಲ್ಲಿ ಪ್ಲೇಟ್ ಗುಂಪು ವಾಪಸ್:

ಈಶಾನ್ಯ ರಾಜ್ಯಗಳ ತಂಡಗಳು ಸೇರ್ಪಡೆಗೊಂಡಿರುವ ಕಾರಣ, ಈ ವರ್ಷದಿಂದ ರಣಜಿ ಟ್ರೋಫಿಯಲ್ಲಿ ಪ್ಲೇಟ್ ಗುಂಪು ವಾಪಸಾಗಲಿದೆ. ‘ಎ’ ಹಾಗೂ ‘ಬಿ’ ಗುಂಪಿನಲ್ಲಿ ತಲಾ 9 ತಂಡಗಳು,
‘ಸಿ’ ಗುಂಪಿನಲ್ಲಿ 10 ತಂಡ ಹಾಗೂ ಹೊಸದಾಗಿ ಸೇರ್ಪಡೆಗೊಂಡಿರುವ ತಂಡಗಳು ಪ್ಲೇಟ್ ಗುಂಪಿನಲ್ಲಿ ಆಡಲಿವೆ.  ‘ಎ’, ‘ಬಿ’ ಗುಂಪಿನಿಂದ ಒಟ್ಟು 5, ‘ಸಿ’ ಗುಂಪಿನಿಂದ 2, ಪ್ಲೇಟ್ ಗುಂಪಿನಿಂದ 1 ತಂಡ ಕ್ವಾರ್ಟರ್ ಫೈನಲ್‌ಗೇರಲಿವೆ. 

loader