ನವದೆಹಲಿ[ಜು.20]: ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾರ ಆಪ್ತ ಸಹಾಯಕನಿಂದಲೇ ಅವ್ಯವಹಾರ ನಡೆದಿದೆ. ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿಯಾಗಿರುವ ಶುಕ್ಲಾ ಅವರ ಸಹಾಯಕ ಅಕ್ರಂ ಸೈಫಿ, ರಾಹುಲ್ ಶರ್ಮಾ ಎನ್ನುವ ಆಟಗಾರನಿಗೆ ತಂಡದಲ್ಲಿ ಸ್ಥಾನ ಕೊಡಿಸುವುದಾಗಿ ಹೇಳಿ ಹಣ ಹಾಗೂ ಇನ್ನಿತರ ಬೇಡಿಕೆಗಳನ್ನಿಡುತ್ತಿರುವುದು ಹಿಂದಿ ಸುದ್ದಿ ವಾಹಿನಿಯೊಂದರ ರಹಸ್ಯ ಕಾರ್ಯಾಚರಣೆಯಿಂದ ಬಹಿರಂಗವಾಗಿದೆ. 

ಇದನ್ನು ಓದಿ:  ಐತಿಹಾಸಿಕ ದಿನದಂದೇ ಕ್ರಿಕೆಟ್’ಗೆ ಗುಡ್’ಬೈ ಹೇಳಿದ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ..!

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ, ತನಿಖೆಗೆ ಮುಂದಾಗಿದೆ. ಜತೆಗೆ ಅಕ್ರಂನನ್ನು ತನಿಖೆ ಮುಕ್ತಾಯಗೊಳ್ಳುವ ವರೆಗೂ ಅಮಾನತುಗೊಳಿಸಿದೆ.
ಈ ಅವ್ಯವಹಾರ ಬೆಳಕಿಗೆ ಬರುತ್ತಿದ್ದಂತೆ ಉತ್ತರ ಪ್ರದೇಶ ತಂಡದ ಮಾಜಿ ನಾಯಕ ಮೊಹಮ್ಮದ್ ಕೈಫ್ ಟ್ವೀಟ್ ಮಾಡಿದ್ದು, ಈ ವಿಚಾರ ತಿಳಿದು ಆಘಾತವಾಯಿತು. ತನಿಖೆ ನಡೆದು ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಲಿ ಹಾಗೆಯೇ ಯುವ ಪ್ರತಿಭೆಗಳಿಗೆ ನಾಯ ಸಿಗಲಿ ಎಂದು ಹೇಳಿದ್ದಾರೆ.

ಇದನ್ನು ಓದಿ:  ಕ್ರಿಕೆಟ್‌ಗೆ ಗುಡ್ ಬೈ ಹೇಳಿದ ಕೈಫ್‌ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಯುವಿ!

ಇದನ್ನು ಓದಿ:  ಪಾಕ್ ಗುಣಗಾನ ಮಾಡಿದ ಕೈಫ್: ಟ್ವಿಟರಿಗರಿಂದ ಕ್ರಿಕೆಟಿಗನಿಗೆ ದೇಶಪ್ರೇಮದ ಪಾಠ

ಇತ್ತೀಚೆಗಷ್ಟೇ ಮೊಹಮ್ಮದ್ ಕೈಫ್ ಎಲ್ಲಾ ಮಾದರಿಯ ಸ್ಪರ್ಧಾತ್ಮಕ ಕ್ರಿಕೆಟ್’ಗೆ ವಿದಾಯ ಹೇಳಿದ್ದರು. ಕೈಫ್ ನಾಯಕತ್ವದಲ್ಲಿ 2005-06ರ ಆವೃತ್ತಿಯಲ್ಲಿ ಉತ್ತರ ಪ್ರದೇಶ ತಂಡ ರಣಜಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.