ಟೀಂ ಇಂಡಿಯಾ ಐತಿಹಾಸಿಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಮೊಹಮ್ಮದ್ ಕೈಫ್ ವಿದಾಯಕ್ಕೆ, ಆಲ್‌ರೌಂಡರ್ ಯುವರಾಜ್ ಸಿಂಗ್ ಅಚ್ಚರಿ ಹೇಳಿಕೆ ನೀಡಿದ್ದಾರೆ. ವಿದಾಯದ ಕುರಿತು ಯುವರಾಜ್ ಸಿಂಗ್ ಮಾಡಿದ ಟ್ವೀಟ್ ಏನು?
ಲಂಡನ್(ಜು.16): ನಾಟ್‌ವೆಸ್ಟ್ ಸರಣಿಯ ಗೆಲುವಿನ ರೂವಾರಿ ಮೊಹಮ್ಮದ್ ಕೈಫ್, ಜುಲೈ13ರಂದು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. 2002ರಲ್ಲಿ ಇಂಗ್ಲೆಂಡ್ ವಿರುದ್ಧ ಮೊಹಮ್ಮದ್ ಕೈಫ್ ಹಾಗೂ ಯುವರಾಜ್ ಸಿಂಗ್ ದಿಟ್ಟ ಹೋರಾಟದಿಂದ ಭಾರತ ಲಾರ್ಡ್ಸ್ ಮೈದಾನದಲ್ಲಿ ಸರಣಿ ಗೆದ್ದಿತ್ತು. ನಾಯಕ ಸೌರವ್ ಗಂಗೂಲಿ ಗೆಲುವಿನ ಸಂಭ್ರಮದಲ್ಲಿ ಶರ್ಟ್ ಬಿಚ್ಚಿ ತಿರುಗಿಸಿ ಇಂಗ್ಲೆಂಡ್ ಕ್ರಿಕೆಟಿಗರಿಗೆ ತಿರುಗೇಟು ನೀಡಿದ್ದರು.
ನಾಟ್‌ವೆಸ್ಟ್ ರೋಚಕ ಗೆಲುವಿನ 16ನೇ ವರ್ಷದ ಸಂಭ್ರಮಾಚರಣೆಯಲ್ಲಿ ಮೊಹಮ್ಮದ್ ಕೈಫ್ ವಿದಾಯ ಹೇಳಿದ್ದರು. ಕೈಫ್ ವಿದಾಯಕ್ಕೆ ಟೀಂ ಇಂಡಿಯಾ ಆಲ್‌ರೌಂಡರ್ ಯುವರಾಜ್ ಸಿಂಗ್ ಟ್ವೀಟ್ ಮೂಲಕ ಶುಭಕೋರಿದ್ದಾರೆ.
ಭಾರತೀಯ ಕ್ರಿಕೆಟ್‌ಗೆ ಕೈಫ್ ಕೊಡುಗೆ ಅಪಾರ. ದೇಶವೇ ಕೈಫ್ ಸಾಧನೆಗೆ ಹೆಮ್ಮೆಪಡುತ್ತಿದೆ. ಅದ್ಬುತ ಫಿನೀಶರ್ ಹಾಗೂ ನನ್ನ ಹೊರತು ಪಡಿಸಿದರೆ ಅತ್ಯುತ್ತಮ ಫೀಲ್ಡರ್ ಎಂದು ಯುವರಾಜ್ ಸಿಂಗ್, ಕೈಫ್ ಕಾಲೆಳೆದಿದ್ದಾರೆ. ಫೀಲ್ಡಿಂಗ್ ಕುರಿತು ಕೈಫ್ ಕಾಲೆಳೆದು ಅಚ್ಚರಿ ಮೂಡಿಸಿದ ಯುವಿ, 2002ರ ನಾಟ್ ವೆಸ್ಟ್ ಸರಣಿಯ ಫೈನಲ್ ಪಂದ್ಯದಲ್ಲಿ ನಿಮ್ಮ ಜೊತೆಗಿನ ಜೊತೆಯಾಟ ನನಗೆ ಹಮ್ಮೆಯಿದೆ ಎಂದಿದ್ದಾರೆ.
ಭಾರತದ ಪರ 125 ಏಕದಿನ ಪಂದ್ಯ ಆಡಿರುವ ಕೈಫ್ 2753 ರನ್ ಸಿಡಿಸಿದ್ದಾರೆ. 2 ಶತಕ ಹಾಗೂ 17 ಅರ್ಧಶಕಕ ಸಿಡಿಸಿಡಿಸಿದ್ದಾರೆ. 13 ಟೆಸ್ಟ್ ಪಂದ್ಯದಿಂದ 624 ರನ್ ಬಾರಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 1 ಶತಕ ಹಾಗೂ 3 ಅರ್ಧಶತಕ ಬಾರಿಸಿದ್ದಾರೆ.
