ಪಾಕ್ ಗುಣಗಾನ ಮಾಡಿದ ಕೈಫ್: ಟ್ವಿಟರಿಗರಿಂದ ಕ್ರಿಕೆಟಿಗನಿಗೆ ದೇಶಪ್ರೇಮದ ಪಾಠ

Mohammad Kaif severely criticised for heaping praise on the Pakistan team
Highlights

ತ್ರಿಕೋನ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿದ ಪಾಕಿಸ್ತಾನ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆಸೀಸ್ ವಿರುದ್ಧ 6 ವಿಕೆಟ್’ಗಳ ಭರ್ಜರಿ ಜಯ ದಾಖಲಿಸಿದ ಪಾಕಿಸ್ತಾನ ಐಸಿಸಿ ಟಿ20 ರ‍್ಯಾಂಕಿಂಗ್’ನಲ್ಲೂ ನಂ.1 ಸ್ಥಾನ ಭದ್ರಪಡಿಸಿಕೊಂಡಿದೆ.

ಬೆಂಗಳೂರು[ಜು.09]: ತ್ರಿಕೋನ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿದ ಪಾಕಿಸ್ತಾನ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆಸೀಸ್ ವಿರುದ್ಧ 6 ವಿಕೆಟ್’ಗಳ ಭರ್ಜರಿ ಜಯ ದಾಖಲಿಸಿದ ಪಾಕಿಸ್ತಾನ ಐಸಿಸಿ ಟಿ20 ರ‍್ಯಾಂಕಿಂಗ್’ನಲ್ಲೂ ನಂ.1 ಸ್ಥಾನ ಭದ್ರಪಡಿಸಿಕೊಂಡಿದೆ.

ಪಾಕಿಸ್ತಾನ ತಂಡದ ಈ ಪ್ರದರ್ಶನವನ್ನು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಮುಕ್ತ ಕಂಠದಿಂದ ಶ್ಲಾಘಿಸಿದ್ದು, ಅದ್ಭುತವಾಗಿ ಆಡಿದ ಪಾಕಿಸ್ತಾನ ತಂಡಕ್ಕೆ ಅಭಿನಂದನೆಗಳು. ಅತ್ಯುತ್ತಮ ಇನ್ನಿಂಗ್ಸ್ ಕಟ್ಟಿದ ಫಖರ್ ಜಮಾನ್’ಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದರು. 

ಕೈಫ್ ಟ್ವೀಟ್ ಈಗ ವೈರಲ್ ಆಗಿದ್ದು ಈ ಕುರಿತಂತೆ ಸಾಕಷ್ಟು ಪರ-ವಿರೋಧಗಳು ವ್ಯಕ್ತವಾಗಿವೆ. ಓರ್ವ ಟ್ವಿಟರಿಗ, ಕೈಫ್’ಗೆ ’ನಿಲ್ಲಿ ಭಕ್ತರು ನಿಮಗೆ ದೇಶಪ್ರೇಮದ ಪಾಠ ಹೇಳಲು ಬರುತ್ತಾರೆ ಎಂದು ಎಚ್ಚರಿಕೆ ಹೇಳಿದ್ದಾರೆ.

ಮತ್ತೊಬ್ಬರು. ನಿಮಗೆ ಪಾಕಿಸ್ತಾನದ ಮೇಲಿನ ಪ್ರೀತಿ ಇಷ್ಟು ಬೇಗ ಉಕ್ಕಿ ಹರಿಯುತ್ತದೆ ಎಂದು ನಾನು ಯೋಚಿಸಿರಲಿಲ್ಲ ಎಂದಿದ್ದಾರೆ.

ದೀಪಿಕಾ ಪಡುಕೋಣೆ ಫ್ಯಾನ್ಸ್’ಕ್ಲಬ್ ಹೆಸರಿನ ಟ್ವಿಟರ್ ಅಕೌಂಟ್’ನಿಂದ ಕೈಫ್’ರನ್ನು ದೇಶದ್ರೋಹಿ ಎಂದು ಜರಿಯಲಾಗಿದೆ.

ಇದಕ್ಕೆ ಮಾಹಿ ಹೆಸರಿನ ಟ್ವಿಟರ್ ಅಕೌಂಟ್’ನಲ್ಲಿ, ಕೈಫ್’ರನ್ನು ದೇಶದ್ರೋಹಿ ಎಂದು ಕರೆಯುವ ಮುನ್ನ ಆಕಾಶ್ ಚೋಪ್ರಾ ಟ್ವೀಟ್’ಅನ್ನು ಒಮ್ಮೆ ನೋಡಿ ಎಂದು ಚೋಪ್ರಾ ಅವರ ಟ್ವೀಟ್’ನ್ನು ಲಗತ್ತಿಸಿ ಟ್ವೀಟ್ ಮಾಡಲಾಗಿದೆ.

ಇನ್ನೊಬ್ಬ ಟ್ವಿಟರಿಗ, ಈ ಪಾಕಿಸ್ತಾನ ಪ್ರೇಮಿಗೆ 400 ಚಪ್ಪಲಿಗಳಿಂದ ಹೊಡೆಯಿರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

loader