ನವದೆಹಲಿ(ಏ.24): ಐಪಿಎಲ್ ಟೂರ್ನಿ ನಡುವೆ ಬಿಸಿಸಿಐ ಆಯೋಜಿಸುತ್ತಿರುವ ಮಹಿಳಾ ಐಪಿಎಲ್ ಪ್ರದರ್ಶನ ಪಂದ್ಯಕ್ಕೆ ವಿಶ್ವದಲ್ಲೇ ಮನ್ನಣೆ ಸಿಕ್ಕಿದೆ. ಮಹಿಳೆಯರ ಕ್ರಿಕೆಟ್ ಅಭಿವೃದ್ದಿಗಾಗಿ ಬಿಸಿಸಿಐ ಆಯೋಜಿಸುತ್ತಿರುವ ಮಹಿಳಾ ಐಪಿಎಲ್ ಪ್ರದರ್ಶನ ಪಂದ್ಯಕ್ಕೆ ನಾಯಕಿಯರ ಪಟ್ಟಿ ಪ್ರಕಟಿಸಲಾಗಿದೆ. 

ಇದನ್ನೂ ಓದಿ: ಆರ್‌ಸಿಬಿ ವಿರುದ್ಧ ಚೆನ್ನೈ ಸೋಲಲು ಅಶ್ವಿನ್‌ ಕಾರಣ?

ಐಪಿಎಲ್‌ ಪ್ಲೇ-ಆಫ್‌ ವೇಳೆ ನಡೆಯಲಿರುವ ಮಹಿಳಾ ಐಪಿಎಲ್‌ ಪ್ರದರ್ಶನ ಪಂದ್ಯಗಳಲ್ಲಿ ಮಿಥಾಲಿ ರಾಜ್‌, ಹರ್ಮನ್‌ಪ್ರೀತ್‌ ಕೌರ್‌ ಹಾಗೂ ಸ್ಮೃತಿ ಮಂಧನಾ ತಂಡಗಳನ್ನು ಮುನ್ನಡೆಸಲಿದ್ದಾರೆ. 3 ತಂಡಗಳು ಸ್ಪರ್ಧೆಗಿಳಿಯಲಿದ್ದು, ಫೈನಲ್‌ ಸೇರಿ 4 ಪಂದ್ಯಗಳು ನಡೆಯಲಿವೆ. 

ಇದನ್ನೂ ಓದಿ: ಅಶ್ವಿನ್‌ಗೆ ಡ್ಯಾನ್ಸ್ ಮೂಲಕ ತಿರುಗೇಟು ನೀಡಿದ ಧವನ್- ವಿಡಿಯೋ ವೈರಲ್!

ಮೇ 11ಕ್ಕೆ ಫೈನಲ್‌ ಪಂದ್ಯ ನಡೆಯಲಿದೆ. ‘ಭಾರತದ ಹಾಲಿ ಹಾಗೂ ಭವಿಷ್ಯದ ತಾರಾ ಆಟಗಾರ್ತಿಯರು ಇರಲಿದ್ದಾರೆ. ಜತೆಗೆ ವಿದೇಶಿ ತಾರೆಯರನ್ನು ಆಹ್ವಾನಿಸಲಾಗಿದೆ. ಮಹಿಳಾ ಕ್ರಿಕೆಟ್‌ ಅಭಿವೃದ್ಧಿಯತ್ತ ಇದು ಮತ್ತೊಂದು ಹೆಜ್ಜೆ’ ಎಂದು ಬಿಸಿಸಿಐ ತಿಳಿಸಿದೆ.