ಆರ್‌ಸಿಬಿ ವಿರುದ್ಧ ಚೆನ್ನೈ ಸೋಲಲು ಅಶ್ವಿನ್‌ ಕಾರಣ?| ಮಂಕಡಿಂಗ್‌ ಎಫೆಕ್ಟ್!| ಬೌಲ್‌ ಮಾಡುವ ಕ್ರೀಸ್‌ ಬಿಡದ ಶಾರ್ದೂಲ್‌

ಬೆಂಗಳೂರು[ಏ.23]: ಆರ್‌ಸಿಬಿ ವಿರುದ್ಧ ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೋಲಲು ಆರ್‌.ಅಶ್ವಿನ್‌ ಕಾರಣವೇ?. ಹೀಗೊಂದು ಚರ್ಚೆ ಸಾಮಾಜಿಕ ತಾಣಗಳಲ್ಲಿ ಶುರುವಾಗಿದೆ.

ಈ ಆವೃತ್ತಿಯ ಆರಂಭದಲ್ಲೇ ರಾಜಸ್ಥಾನ ರಾಯಲ್ಸ್‌ನ ಜೋಸ್‌ ಬಟ್ಲರ್‌ರನ್ನು ಮಂಕಡಿಂಗ್‌ ಮೂಲಕ ರನೌಟ್‌ ಮಾಡಿ ವಿವಾದ ಸೃಷ್ಟಿಸಿದ್ದ ಅಶ್ವಿನ್‌, ‘ಬೌಲರ್‌ ಚೆಂಡನ್ನು ಎಸೆಯುವ ಮೊದಲೇ ನಾನ್‌ ಸ್ಟೆ್ರೖಕರ್‌ ಬದಿಯಲ್ಲಿರುವ ಬ್ಯಾಟ್ಸ್‌ಮನ್‌ ಕ್ರೀಸ್‌ ಬಿಟ್ಟು ಲಾಭ ಪಡೆಯುತ್ತಾರೆ. ಅದಕ್ಕೇಕೆ ಅವಕಾಶ ಕೊಡಬೇಕು’ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದರು. ಮಂಕಡಿಂಗ್‌ ಘಟನೆ ಬಳಿಕ, ನಾನ್‌ ಸ್ಟೆ್ರೖಕರ್‌ ಬದಲಿರುವ ಬ್ಯಾಟ್ಸ್‌ಮನ್‌ಗಳು ಮುಂಚಿತವಾಗಿಯೇ ಕ್ರೀಸ್‌ ಬಿಡಲು ಹಿಂಜರಿಯುತ್ತಿದ್ದಾರೆ.

ಭಾನುವಾರದ ಪಂದ್ಯದಲ್ಲೂ ಆಗಿದ್ದು ಇದೆ. ಕೊನೆ ಎಸೆತದಲ್ಲಿ 2 ರನ್‌ ಬೇಕಿದ್ದಾಗ, ಧೋನಿ ಚೆಂಡಿಗೆ ಬ್ಯಾಟ್‌ ತಗುಲಿಸಲು ವಿಫಲರಾದರು. ಆದರೂ ಒಂದು ಬೈ ರನ್‌ ಕದಿಯುವ ಯತ್ನ ನಡೆಸಿದರು. ಉಮೇಶ್‌ ಯಾದವ್‌ ಚೆಂಡನ್ನು ಎಸೆಯುವ ಮೊದಲು ಶಾರ್ದೂಲ್‌ ಕ್ರೀಸ್‌ ಬಿಟ್ಟಿರಲಿಲ್ಲ. ಹೀಗಾಗಿ ಕೇವಲ 12 ಸೆಂಟಿ ಮೀಟರ್‌ ಅಂತರದಲ್ಲಿ ಶಾರ್ದೂಲ್‌ ರನೌಟ್‌ ಆದರು.