Asianet Suvarna News Asianet Suvarna News

ಕ್ರಿಕೆಟಿಗ ಮೈಕಲ್ ಕ್ಲಾರ್ಕ್‌ಗೆ ಚರ್ಮ ಕ್ಯಾನ್ಸರ್‌; ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರ ತಂಡ!

ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಚರ್ಮ ಕ್ಯಾನ್ಸರ್ ಮತ್ತೆ ಕಾಣಿಸಿಕೊಂಡಿದ್ದು, ಈಗಾಗಲೇ ಶಸ್ತ ಚಿಕಿತ್ಸೆ ನಡೆಸಲಾಗಿದೆ. ಚಿಕಿತ್ಸೆ ಬಳಿಕ ಕ್ಲಾರ್ಕ್ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. 

Australia cricketer Michael Clarke had skin cancer removed from his forehead
Author
Bengaluru, First Published Sep 8, 2019, 6:55 PM IST

ಸಿಡ್ನಿ(ಸೆ.08): ಆಸ್ಟ್ರೇಲಿಯಾ ದಿಗ್ಗಜ ಕ್ರಿಕೆಟಿಗ, ಮಾಜಿ ನಾಯಕ ಮೈಕಲ್ ಕ್ಲಾರ್ಕ್‌ ಸದ್ಯ ವೀಕ್ಷಕ ವಿವರಣೆ, ವಿಶ್ಲೇಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. 2015ರ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾಗೆ ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕ ಇದೀಗ ಚರ್ಮ ಕ್ಯಾನ್ಸರ್‌ಗೆ ತುತ್ತಾಗಿದ್ದು, ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಆಟೋರಿಕ್ಷಾ ಡ್ರೈವರ್ ಆದ ಮೈಕಲ್ ಕ್ಲಾರ್ಕ್

2006ರಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಪದಾಪರ್ಣೆ ಮಾಡಿದ ಕ್ಲಾರ್ಕ್, ಬಳಿಕ ನಾಯಕನಾಗಿ ಬಡ್ತಿ ಪಡೆದರು. 2015ರ ವಿಶ್ವಕಪ್‌ಗೂ ಮೊದಲು ಬೆನ್ನು ನೋವಿನಿಂದ ಬಳಲಿದ ಕ್ಲಾರ್ಕ್ ಬಳಿಕ ನಿವೃತ್ತಿ ಹೇಳಿದರು. ಈಗಾಗಲೇ ಮೂಗು ಹಾಗೂ ನಾಲಿಗೆಯಲ್ಲಿದ್ದ ಚರ್ಮ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದಿದ್ದ ಕ್ಲಾರ್ಕ್ ಇದೀಗ ಹಣೆ ಮೇಲಿನ ಚರ್ಮ ಕ್ಯಾನ್ಸರ್‌ಗೂ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ.

 

ಇದನ್ನೂ ಓದಿ: ಆ್ಯಷಸ್‌ ಕದನ: 2ನೇ ಇನ್ನಿಂಗ್ಸ್‌ನಲ್ಲೂ ಆಸೀಸ್‌ಗೆ ಆಸರೆಯಾದ ಸ್ಮಿತ್‌!

ಶಸ್ತ ಚಿಕಿತ್ಸೆ ಬಳಿಕ ಕ್ಲಾರ್ಕ್ ಸಾಮಾಜಿಕ ಜಾಲತಾಣದಲ್ಲಿ ಫೋಟೊ ಹಂಚಿಕೊಂಡಿದ್ದಾರೆ. 115 ಟೆಸ್ಟ್ ಪಂದ್ಯದಿಂದ 8,643 ರನ್ ಸಿಡಿಸಿರವು ಕ್ಲಾರ್ಕ್ 28 ಸೆಂಚುರಿ ಬಾರಿಸಿದ್ದಾರೆ. 2013ರ ಆ್ಯಷಸ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡವನ್ನು 5-0 ಅಂತರಿಂದ ಮಣಿಸಿದ್ದ ಕ್ಲಾರ್ಕ್ ಐತಿಹಾಸಿಕ ಸಾಧನೆ ಮಾಡಿದ್ದರು. 

Follow Us:
Download App:
  • android
  • ios