Asianet Suvarna News Asianet Suvarna News

ಬೆಂಗಳೂರಿನಲ್ಲಿ ಆಟೋರಿಕ್ಷಾ ಡ್ರೈವರ್ ಆದ ಮಾಜಿ ಆಸ್ಟ್ರೇಲಿಯಾ ಕ್ಯಾಪ್ಟನ್ (ವಿಡಿಯೋ)

ಬೆಂಗಳೂರಿಗೂ ಕ್ಲಾರ್ಕ್'ಗೂ ಒಂದು ವಿಶೇಷ ನಂಟಿದೆ. ಇದೇ ನಗರದಲ್ಲಿ ಮೈಕೇಲ್ ಕ್ಲಾರ್ಕ್ ಅಂತಾರಾಷ್ಟ್ರೀಯ ಕ್ರಿಕೆಟ್'ಗೆ ಪದಾರ್ಪಣೆ ಮಾಡಿದ್ದರು.

michael clarke become autorickshaw driver in bengaluru

ನವದೆಹಲಿ(ಮಾ. 02): ಶಿಸ್ತಿನಿಂದ ಕ್ರಿಕೆಟ್ ಕಲಿಯುವುದರ ಜೊತೆಗೆ ಲೈಫ್ ಎಂಜಾಯ್ ಮಾಡೋದ್ರಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿರು ಎತ್ತಿದಕೈ. ಮಾಜಿ ಆಸ್ಟ್ರೇಲಿಯಾ ಕ್ಯಾಪ್ಟನ್ ಮೈಕೇಲ್ ಕ್ಲಾರ್ಕ್ ಬೆಂಗಳೂರಿನಲ್ಲಿ ಲೋಕಲ್ ಬಾಯ್ ಆಗಿಬಿಟ್ಟಿದ್ದಾರೆ. ಇಲ್ಲಿಯ ಆಟೋರಿಕ್ಷಾ ಚಲಾಯಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಮಾ. 4ರಂದು ಬೆಂಗಳೂರಿನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯ ನಡೆಯಲಿದೆ. ಆಸ್ಟ್ರೇಲಿಯಾದ ಆಟಗಾರರು ಬೆಂಗಳೂರಿಗೆ ಈಗಾಗಲೇ ಆಗಮಿಸಿ ಅಭ್ಯಾಸ ನಡೆಸುತ್ತಿದ್ದಾರೆ. ಮೈಕೇಲ್ ಕ್ಲಾರ್ಕ್ ಈ ಸರಣಿಯಲ್ಲಿ ವೀಕ್ಷಕ ವಿವರಣೆ ನೀಡುತ್ತಿದ್ದಾರೆ. ಬೆಂಗಳೂರಿಗೂ ಕ್ಲಾರ್ಕ್'ಗೂ ಒಂದು ವಿಶೇಷ ನಂಟಿದೆ. ಇದೇ ನಗರದಲ್ಲಿ ಮೈಕೇಲ್ ಕ್ಲಾರ್ಕ್ ಅಂತಾರಾಷ್ಟ್ರೀಯ ಕ್ರಿಕೆಟ್'ಗೆ ಪದಾರ್ಪಣೆ ಮಾಡಿದ್ದರು. ತಮ್ಮ ಚೊಚ್ಚಲ ಟೆಸ್ಟ್'ನಲ್ಲಿ ಕ್ಲಾರ್ಕ್ 6ನೇ ನಂಬರ್ ಆಟಗಾರನಾಗಿ ಬಂದು ಭರ್ಜರಿ 151 ರನ್ ಗಳಿಸಿ ಆಸ್ಟ್ರೇಲಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಇದೀಗ, ಸ್ಟೀವ್ ಸ್ಮಿತ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ಜಯ ಸಾಧಿಸುವುದನ್ನು ಕ್ಲಾರ್ಕ್ ಕಮೆಂಟೇಟರ್ ಆಗಿ ವೀಕ್ಷಿಸಲಿದ್ದಾರಾ? ಪುಣೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲನುಭವಿಸಿರುವ ಭಾರತ ಬೆಂಗಳೂರಿನ ಟೆಸ್ಟ್'ನಲ್ಲಿ ಪುಟಿದೇಳುವ ನಿರೀಕ್ಷೆ ಇದೆ.

Follow Us:
Download App:
  • android
  • ios