ಮ್ಯಾಂಚೆ​ಸ್ಟರ್‌[ಸೆ.08]: ಇಂಗ್ಲೆಂಡ್‌ ವಿರುದ್ಧ ಆ್ಯಷಸ್‌ ಸರ​ಣಿಯ 4ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ದ್ವಿಶ​ತಕ ಬಾರಿ​ಸಿ ಆಸ್ಪ್ರೇ​ಲಿಯಾ ದೊಡ್ಡ ಮೊತ್ತ ಕಲೆಹಾಕಲು ನೆರವಾ​ಗಿದ್ದ ಸ್ಟೀವ್‌ ಸ್ಮಿತ್‌, 2ನೇ ಇನ್ನಿಂಗ್ಸ್‌ನಲ್ಲೂ ತಂಡಕ್ಕೆ ಆಸರೆಯಾದರು. 

ಆ್ಯಷಸ್‌ ಕದನ 2019: ಇಂಗ್ಲೆಂಡ್‌ಗೆ ರೂಟ್‌, ಬರ್ನ್ಸ್ ಆಸರೆ

4ನೇ ದಿನ​ವಾದ ಶನಿ​ವಾರ, ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ತಂಡ​ವನ್ನು 301 ರನ್‌ಗಳಿಗೆ ಆಲೌಟ್‌ ಮಾಡಿದ ಆಸೀಸ್‌, 198 ರನ್‌ ಮುನ್ನಡೆ ಪಡೆಯಿತು. 2ನೇ ಇನ್ನಿಂಗ್ಸ್‌ ಆರಂಭಿಸಿದ ಆಸೀಸ್‌ 44 ರನ್‌ಗೆ 4 ವಿಕೆಟ್‌ ಕಳೆ​ದು​ಕೊಂಡು ಸಂಕ​ಷ್ಟ​ದ​ಲ್ಲಿ​ದ್ದಾಗ, ಸ್ಮಿತ್‌ ನೆರ​ವಾ​ದರು. ಆಕ​ರ್ಷಕ ಅರ್ಧ​ಶ​ತಕ ಬಾರಿ​ಸಿದ ಸ್ಮಿತ್‌, 5ನೇ ವಿಕೆಟ್‌ಗೆ ಮ್ಯಾಥ್ಯೂ ವೇಡ್‌ ಜತೆ ಸೇರಿ ಶತ​ಕದ ಜೊತೆ​ಯಾಟವಾಡಿ​ದರು. ಸ್ಮಿತ್ 82 ರನ್ ಬಾರಿಸಿ ಜ್ಯಾಕ್ ಲೀಚ್’ಗೆ ವಿಕೆಟ್ ಒಪ್ಪಿಸಿದರು. ವೇಡ್ 34 ರನ್ ಬಾರಿಸಿ ಜೋಫ್ರಾ ಆರ್ಚರ್’ಗೆ ಬಲಿಯಾದರು. ಅಂತಿಮವಾಗಿ ಆಸ್ಟ್ರೇಲಿಯಾ 6 ವಿಕೆಟ್ ಕಳೆದುಕೊಂಡು 186 ರನ್ ಬಾರಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಆತಿಥೇಯ ಇಂಗ್ಲೆಂಡ್’ಗೆ ಗೆಲ್ಲಲು 383 ರನ್’ಗಳ ಗುರಿ ನೀಡಿತು.

ಆ್ಯಷಸ್ ಟೆಸ್ಟ್: ಸ್ಟೀವ್ ಸ್ಮಿತ್‌ ದಾಖಲೆಯ ದ್ವಿಶ​ತ​ಕ; ಆಸೀಸ್‌ ಬೃಹತ್‌ ಮೊತ್ತ!

ಇಂಗ್ಲೆಂಡ್’ಗೆ ಆರಂಭಿಕ ಆಘಾತ: ಇನ್ನು ಸವಾಲಿನ ಗುರಿ ಬೆನ್ನತ್ತಿದ ಇಂಗ್ಲೆಂಡ್ ಮೊದಲ ಓವರ್’ನಲ್ಲೇ ಆಘಾತ ಅನುಭವಿಸಿದೆ. ಪ್ಯಾಟ್ ಕಮಿನ್ಸ್ ಹಾಕಿದ ಎರಡನೇ ಇನಿಂಗ್ಸ್’ನ ಮೊದಲ ಓವರ್’ನ ಮೂರು ಹಾಗೂ ನಾಲ್ಕನೇ ಎಸೆತದಲ್ಲಿ ರೋರಿ ಬರ್ನ್ಸ್ ಹಾಗೂ ಜೋ ರೂಟ್ ಅವರನ್ನು ಬಲಿ ಪಡೆಯುವಲ್ಲಿ ಸಫಲರಾಗಿದ್ದಾರೆ. ಇದೀಗ ನಾಲ್ಕನೇ ದಿನದಂತ್ಯಕ್ಕೆ ಇಂಗ್ಲೆಂಡ್ 2 ವಿಕೆಟ್ ಕಳೆದುಕೊಂಡು 18 ರನ್ ಬಾರಿಸಿದ್ದು ಗೆಲ್ಲಲು ಇನ್ನೂ 365 ರನ್’ಗಳ ಅವಶ್ಯಕತೆಯಿದೆ. 

ಆ್ಯಷಸ್ ಸರಣಿಯಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ತಲಾ ಒಂದೊಂದು ಪಂದ್ಯ ಜಯಿಸುವ ಮೂಲಕ ಸರಣಿಯಲ್ಲಿ 1-1ರ ಸಮಬಲ ಸಾಧಿಸಿದೆ. ಈ ಪಂದ್ಯವನ್ನು ಜಯಿಸಿದ ತಂಡ ಮುನ್ನಡೆ ಕಾಯ್ದುಕೊಳ್ಳಲಿದೆ.

ಸ್ಕೋರ್‌: ಆಸ್ಪ್ರೇ​ಲಿಯಾ 497/8 ಡಿ. ಹಾಗೂ 186/6

ಇಂಗ್ಲೆಂಡ್‌ 301 ಹಾಗೂ 18/2