Asianet Suvarna News Asianet Suvarna News

ನ್ಯೂಜಿಲೆಂಡ್‌ಗೆ ಆತಿಥ್ಯ ಕಳೆದುಕೊಳ್ಳುವ ಆತಂಕ!

ಮಸೀದಿ ಮೇಲಿನ ಗುಂಡಿನ ದಾಳಿಯಲ್ಲಿ ಸುಮಾರು 50 ಮಂದಿ ಮೃತಪಟ್ಟಿದ್ದರು. ಬಾಂಗ್ಲಾದೇಶ ಕ್ರಿಕೆಟಿಗರು ಪ್ರವಾಸ ಮೊಟಕುಗೊಳಿಸಿ ತವರಿಗೆ ಮರಳಿದೆ.

Attack will change fabric of sports says David White
Author
Wellington, First Published Mar 17, 2019, 4:27 PM IST

ಆಕ್ಲೆಂಡ್‌[ಮಾ.17]: ಕ್ರೈಸ್ಟ್‌ಚರ್ಚ್’ನ ಮಸೀದಿಯಲ್ಲಿ ಭಯೋತ್ಪಾದಕ ದಾಳಿ ನಡೆದ ಬಳಿಕ ನ್ಯೂಜಿಲೆಂಡ್‌ ‘ಸುರಕ್ಷತಾ ಧಾಮ’ವಾಗಿ ಉಳಿದಿಲ್ಲ. ಜಾಗತಿಕ ಮಟ್ಟದ ಪಂದ್ಯಾವಳಿಗಳ ಆತಿಥ್ಯ ಹಕ್ಕು ಕಳೆದುಕೊಳ್ಳುವ ಆತಂಕ ಶುರುವಾಗಿದೆ ಎಂದು ನ್ಯೂಜಿಲೆಂಡ್‌ ಕ್ರಿಕೆಟ್‌ ಸಂಸ್ಥೆಯ ಸಿಇಒ ಡೇವಿಡ್‌ ವೈಟ್‌ ತಿಳಿಸಿದ್ದಾರೆ.

ಮಸೀದಿಯಲ್ಲಿ ಶೂಟೌಟ್: ಕೂದಲೆಳೆ ಅಂತರದಲ್ಲಿ ಪಾರಾದ ಕ್ರಿಕೆಟಿಗರು..! 

ದಾಳಿಯಲ್ಲಿ ಬಾಂಗ್ಲಾದೇಶ ಕ್ರಿಕೆಟಿಗರು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದರು. ‘ಇದು ಆಘಾತಕಾರಿ ಘಟನೆ. ಅಂತಾರಾಷ್ಟ್ರೀಯ ಕ್ರೀಡಾತಿಥ್ಯದ ವಿಚಾರದಲ್ಲಿ ನಮ್ಮ ಮೇಲಿನ ಅಭಿಪ್ರಾಯವೇ ಬದಲಾಗಲಿದೆ. ನಮ್ಮಲ್ಲಿನ ಭದ್ರತಾ ವ್ಯವಸ್ಥೆಯನ್ನು ಆಳವಾಗಿ ಪರಿಶೀಲಿಸಬೇಕಿದೆ. ಸುರಕ್ಷತಾ ಧಾಮ ಎನ್ನುವ ಹೆಗ್ಗಳಿಕೆಯನ್ನು ನಾವು ಕಳೆದುಕೊಂಡಿದ್ದೇವೆ’ ಎಂದು ಡೇವಿಡ್‌ ಹೇಳಿದ್ದಾರೆ.

ನ್ಯೂಜಿಲೆಂಡ್’ನಲ್ಲಿ ಗುಂಡಿನ ದಾಳಿ: ಬೆಚ್ಚಿ ಬಿದ್ದ ಕ್ರಿಕೆಟ್ ಸಮುದಾಯ

ಮಸೀದಿ ಮೇಲಿನ ಗುಂಡಿನ ದಾಳಿಯಲ್ಲಿ ಸುಮಾರು 50 ಮಂದಿ ಮೃತಪಟ್ಟಿದ್ದರು. ಬಾಂಗ್ಲಾದೇಶ ಕ್ರಿಕೆಟಿಗರು ಪ್ರವಾಸ ಮೊಟಕುಗೊಳಿಸಿ ತವರಿಗೆ ಮರಳಿದೆ.

Follow Us:
Download App:
  • android
  • ios