ನವದೆಹಲಿ[ಮಾ.16]: ಬಾಂಗ್ಲಾ ಕ್ರಿಕೆಟಿಗರು ಇದ್ದ ಸ್ಥಳದಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿ ಇಡೀ ಕ್ರಿಕೆಟ್ ಸಮುದಾಯವೇ ತೀವ್ರವಾಗಿ ಖಂಡಿಸಿದೆ. 

ಸಾಮಾಜಿಕ ತಾಣಗಳ ಮೂಲಕ ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಕ್ರಿಕೆಟಿಗರು, ಬಾಂಗ್ಲಾ ಆಟಗಾರರ ಸುರಕ್ಷತೆಯ ಬಗ್ಗೆ ಸ್ಪಂದನೆ ವ್ಯಕ್ತಪಡಿಸಿದ್ದಾರೆ. ಇದೊಂದು ಆಘಾತಕಾರಿ ಘಟನೆ. ಒಂದು ಕ್ಷಣ ಹೃದಯ ಬಡಿತವೇ ನಿಂತು ಹೋದಂತಾಯಿತು ಎಂದು ವಿರಾಟ್ ಟ್ವೀಟ್ ಮಾಡಿದ್ದಾರೆ. ನ್ಯೂಜಿಲೆಂಡ್ ಕ್ರಿಕೆಟಿಗ ಜಿಮ್ಮಿ, ಭಾರತದ ಸ್ಪಿನ್ನರ್‌ಗಳಾದ ಅಶ್ವಿನ್, ಹರ್ಭಜನ್, ಆಸೀಸ್ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್ ಸೇರಿದಂತೆ ಖಂಡನೆ ವ್ಯಕ್ತಪಡಿಸಿದ್ದಾರೆ.

ಕ್ರೈಸ್ಟ್‌ಚರ್ಚ್ ದಾಳಿ ಬಳಿಕ ಸಹಜವಾಗಿ ಭಯೋತ್ಪಾದನೆಯನ್ನು ಪೋಷಿಸುತ್ತ ಬಂದಿರುವ ಪಾಕಿಸ್ತಾನದ ವಿರುದ್ಧ ಐಸಿಸಿ ಕಠಿಣ ಕ್ರಮ ಕೈಗೊಳ್ಳಬೇಕೆನ್ನುವ ಕೂಗು ಕೇಳಿ ಬರುತ್ತಿದೆ. ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತ ಬಂದಿರುವ ಪಾಕಿಸ್ತಾನದ ವಿರುದ್ಧ ಈಗ ಕ್ರಿಕೆಟ್ ಸಮುದಾಯದ ಆಕ್ರೋಶವೂ ದ್ವಿಗುಣಗೊಂಡಿದೆ. ಕ್ರೈಸ್ಟ್‌ಚರ್ಚ್ ದಾಳಿ ಇಡೀ ಕ್ರಿಕೆಟ್ ಸಮುದಾಯವನ್ನೇ ಬೆಚ್ಚಿಬೀಳಿಸಿದೆ. ಈ ಬಗ್ಗೆ ಅನೇಕ ಕ್ರಿಕೆಟಿಗರು ಪ್ರತಿಕ್ರಿಯಿಸಿದ್ದು, ಆತಂಕ ವ್ಯಕ್ತಪಡಿಸಿದ್ದಾರೆ. 

ಉಗ್ರರ ದಾಳಿ ಹಿನ್ನಲೆ ಕಿವೀಸ್’ನಿಂದ ತವರಿನತ್ತ ಮುಖ ಮಾಡಿದ ಬಾಂಗ್ಲಾ

ಬಿಸಿಸಿಐ ಕೂಡ ಐಸಿಸಿ ಮೇಲೆ ಒತ್ತಡ ಹೇರಬೇಕೆನ್ನುವ ಅಭಿಪ್ರಾಯಗಳು ಕೇಳಿಬಂದಿದೆ. ಒಂದೊಮ್ಮೆ ಬಿಸಿಸಿಐ ಒತ್ತಡ ಹೇರಿದಲ್ಲಿ ಐಸಿಸಿ ಪಾಕಿಸ್ತಾನದ ಸದಸ್ಯತ್ವವನ್ನು ರದ್ದುಗೊಳಿಸುವ ಸಾಧ್ಯತೆ ಇದೆ. ಇದರಿಂದ ಪಾಕ್ ಇನ್ನಷ್ಟು ಒತ್ತಡಕ್ಕೆ ಸಿಲುಕಿಕೊಳ್ಳುವುದರಲ್ಲಿ ಸಂದೇಹವಿಲ್ಲ. ಆಗ ಪಾಕಿಸ್ತಾನ ಕ್ರಿಕೆಟ್ ಮಂಡಳಿಯೂ ವಿಶ್ವಮಟ್ಟದಲ್ಲಿ ವಿರೋಧ ಎದುರಿಸಬೇಕಾಗಿ ಬರುತ್ತದೆ ಎಂಬ ಲೆಕ್ಕಾಚಾರ ಕ್ರಿಕೆಟ್ ಚಿಂತಕರ ಚಾವಡಿಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ, ಪಾಕಿಸ್ತಾನ ವಿಶ್ವ ಕ್ರಿಕೆಟ್‌ನಲ್ಲೇ ನಿಷೇಧಕ್ಕೊಳಗಾಗಬೇಕಾದ ಪರಿಸ್ಥಿತಿ ಎದುರಾಗುತ್ತದೆ ಎಂದು ಹೇಳಲಾಗುತ್ತಿದೆ.