ಬೆಂಗಳೂರು(ಸೆ.20) : ಭಾರತದ ಭರವಸೆಯ ಟೆನಿಸ್ ಪಟು, ಕರ್ನಾಟಕದ ಹೆಮ್ಮೆಯ ರೋಹನ್ ಬೋಪಣ್ಣ ಜೊತೆ ಕ್ರೀಡಾಪಟುಗಳ ಫೂಟ್‌ವೇರ್ ತಯಾರಿಕಾ ಕಂಪನಿ ಎಸಿಕ್ಸ್ ಒಪ್ಪಂದ ಮಾಡಿಕೊಂಡಿದೆ. ಮುಂದಿನ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವ ವಿಶ್ವಾಸವನ್ನು ಹೊಂದಿರುವ ರೋಹನ್ ಅವರಿಗೆ ಬೆಂಬಲ ನೀಡುತ್ತಿರುವ ಎಸಿಕ್ಸ್, ಇದೀಗ ರೋಹನ್ ಅವರನ್ನು ಎಸಿಕ್ಸ್ ಅಥ್ಲೀಟ್ ಎಂದು ಘೋಷಿಸಿದೆ.

ಇದನ್ನೂ  ಓದಿ: ಏಷ್ಯನ್ ಗೇಮ್ಸ್: ಚಿನ್ನಕ್ಕೆ ಮುತ್ತಿಕ್ಕಿದ ಬೋಪಣ್ಣ ಜೋಡಿ

ಕರ್ನಾಟಕ ಸ್ಟೇಟ್ ಲಾನ್ ಟೆನಿಸ್ ಅಸೋಸಿಯೇಷನ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರ್ಜುನ ಪ್ರಶಸ್ತಿ ವಿಜೇತ ಟೆನಿಸ್ ಅಟಗಾರ ರೋಹನ್ ಹಾಗೂ ರೋಹನ್ ಟೆನಿಸ್ ಅಕಾಡೆಮಿ ಜೊತೆ ಎಸಿಕ್ಸ್ ಒಪ್ಪಂದ ಮಾಡಿಕೊಂಡಿತು. ಈ ಮೂಲಕ ಬೋಪಣ್ಣ ಟೆನಿಸ್ ಅಕಾಡೆಯಮಿಯೊಂದಿಗೆ ಟೆನಿಸ್‍ಗೆ ಅಗತ್ಯವಿರುವ ಎಲ್ಲ ಸೌಕರ್ಯಗಳನ್ನು ನೀಡುವ ಜತೆಗೆ ಪ್ರಮಾಣಿಕೃತ ತರಬೇತುದಾರರ ಮೂಲಕ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಜವಾಬ್ದಾರಿಯನ್ನು ಎಸಿಕ್ಸ್ ವಹಿಸಿಕೊಂಡಿತು. 

ಇದನ್ನೂ  ಓದಿ: ಯುಎಸ್ ಓಪನ್: ಜಯದ ನಗೆ ಬೀರಿದ ಸಾನಿಯಾ, ಬೋಪಣ್ಣ

ಅಕ್ಟೋಬರ್‌ನಿಂದ ಆರಂಭವಾಗಲಿರುವ  ಒಪ್ಪಂದದ ಕಾರ್ಯಕ್ರಮದಲ್ಲಿ ರೋಹನ್ ಅಕಾಡೆಮಿಯಲ್ಲಿ  ಪ್ರತಿ ಭಾನುವಾರ ಎಸಿಕ್ಸ್ ಟೆನಿಸ್ ನಡೆಯಲಿದೆ. ಆರ್‍ಬಿಟಿ ಕೋಚ್‍ಗಳು ವಿಶೇಷ ಮಾಸ್ಟರ್ ಕ್ಲಾಸ್‍ಗಳನ್ನು ಟೆನಿಸ್ ಆಕಾಂಕ್ಷಿಗಳಿಗಾಗಿ ನಡೆಸಲಿದ್ದಾರೆ. ಈ ತರಬೇತಿಗೆ ಸೇರಲು ಎಸಿಕ್ಸ್‌ನ ಎಲ್ಲ ಶೋ ರೂಂಗಳಲ್ಲಿ ನೋಂದಾಯಿಸಿಕೊಳ್ಳುವ ಅವಕಾಶವಿದೆ. 

“ಅಥ್ಲೀಟ್‍ಗಳಿಗೆ  ಅನುಕೂಲಕರವಾಗಿರುವ ತಂತ್ರಜ್ಞಾನ ಹಾಗೂ ಆವಿಷ್ಕಾರಗಳಿಗೆ ಮನ್ನಣೆ ನೀಡುವ ಕಾರಣ ನಾನು ಎಂದಿಗೂ ಎಸಿಕ್ಸ್‍‌ಗೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ಒಂದು ಕ್ರೀಡೆಯಾಗಿ ಟೆನಿಸ್‍ನಲ್ಲಿ ಪಾದದ ಚಲನೆಗೆ ಹೆಚ್ಚಿನ ಮಹತ್ವವಿದ್ದು, ಪಾದರಕ್ಷೆಗಳು ಇಲ್ಲಿ ಪ್ರಧಾನ ಪಾತ್ರ ವಹಿಸುವ ಜತೆಗೆ ನಮಗೆ ಅತ್ಯುತ್ತಮ ಪ್ರದರ್ಶನ ನೀಡುವಂತೆ ಪ್ರೇರೇಪಿಸುತ್ತವೆ. ಎಸಿಕ್ಸ್ ಜತೆಗಿನ ನನ್ನ ಸಹಯೋಗವನ್ನು ನಾನು ಎದುರು ನೋಡುತ್ತಿದ್ದು, ನನ್ನಲ್ಲಿರುವ ಸಂಭಾವ್ಯ ಸಾಮಥ್ರ್ಯವನ್ನು ಪ್ರದರ್ಶಿಸಲು ಅವಕಾಶ ದೊರೆಯಲಿದೆ,’’ ಎಂದು ರೋಹನ್ ಬೋಪಣ್ಣ ಹೇಳಿದರು.ಕಾರ್ಯಕ್ರಮದಲ್ಲಿಎಸಿಕ್ಸ್ ಅಥ್ಲೀಟ್ ಟೆನಿಸ್ ಆಟಗಾರ್ತಿ ಕರ್ಮನ್ ಥಂಡಿ ಪ್ಲಾಗೊಂಡಿದ್ದರು. 

ರೋಹನ್ ಬೋಪಣ್ಣ ಭಾರತದ ಶ್ರೇಷ್ಠ ಡಬಲ್ಸ್ ಟೆನಿಸ್ ಆಟಗಾರರಾಗಿದ್ದು, 2017ರ ಫ್ರೆಂಚ್ ಓಪನ್‍ನ ಮಿಶ್ರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಮೊಟ್ಟ ಮೊದಲ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದರು. 2018ರ ಏಷ್ಯನ್ ಗೇಮ್ಸ್‍ನ ಪುರುಷರ ಡಬಲ್ಸ್ ವಿಭಾಗದಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದರು.