Asianet Suvarna News Asianet Suvarna News

ಯುಎಸ್ ಓಪನ್: ಜಯದ ನಗೆ ಬೀರಿದ ಸಾನಿಯಾ, ಬೋಪಣ್ಣ

ಇನ್ನು ನಾಲ್ಕನೇ ಶ್ರೇಯಾಂಕಿತ ಇಂಡೋ-ಚೈನಾ ಜೋಡಿ ಕ್ವಾರ್ಟರ್ ಫೈನಲ್ ಹಂತ ಪ್ರವೇಶಿಸಲು ರೋಮೇನಿಯಾ-ಸ್ಪಾನಿಶ್ ಜೋಡಿಯಾದ ಸೊರಾನಾ ಕ್ರಿಸ್ಟೀಯಾ ಮತ್ತು ಸಾರಾ ಸೋರಿಬಸ್ ಟೋರ್ಮೊ ಎದುರು ಕಾದಾಡಲಿದ್ದಾರೆ.

Sania Mirza Rohan Bopanna advance at US Open
  • Facebook
  • Twitter
  • Whatsapp

ನ್ಯೂಯಾರ್ಕ್(ಸೆ.03): ದೇಶದ ಅಗ್ರ ಟೆನಿಸ್ ತಾರೆಗಳಾದ ಸಾನಿಯಾ ಮಿರ್ಜಾ ಹಾಗೂ ರೋಹನ್ ಬೋಪಣ್ಣ ಯುಎಸ್ ಓಪನ್ ಟೂರ್ನಿಯಲ್ಲಿ ಮುಂದಿನ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.

ಮಿಶ್ರ ಡಬಲ್ಸ್'ನಲ್ಲಿ ನಿರಾಸೆ ಅನುಭವಿಸಿದ್ದ ಸಾನಿಯಾ, ಮಹಿಳಾ ಡಬಲ್ಸ್ ವಿಭಾಗದಲ್ಲಿ ಎರಡನೇ ಸುತ್ತಿನಲ್ಲಿ ಸ್ಲೊವಾಕಿಯಾದ ರೈಬಾರಿಕೊವಾ-ಸೆಪಲೊವಾ ಜೋಡಿಯನ್ನು 6-7, 6-3, 6-3 ಸೆಟ್‌'ಗಳಲ್ಲಿ ಮಣಿಸಿದ ಭಾರತದ ಸಾನಿಯಾ ಮಿರ್ಜಾ ಹಾಗೂ ಚೀನಾದ ಶುವಾಯಿ ಪೆಂಗ್, ಪ್ರೀ ಕ್ವಾರ್ಟರ್‌ಗೇರಿದೆ. ಇನ್ನು ನಾಲ್ಕನೇ ಶ್ರೇಯಾಂಕಿತ ಇಂಡೋ-ಚೈನಾ ಜೋಡಿ ಕ್ವಾರ್ಟರ್ ಫೈನಲ್ ಹಂತ ಪ್ರವೇಶಿಸಲು ರೋಮೇನಿಯಾ-ಸ್ಪಾನಿಶ್ ಜೋಡಿಯಾದ ಸೊರಾನಾ ಕ್ರಿಸ್ಟೀಯಾ ಮತ್ತು ಸಾರಾ ಸೋರಿಬಸ್ ಟೋರ್ಮೊ ಎದುರು ಕಾದಾಡಲಿದ್ದಾರೆ.

ಇನ್ನು ಮಿಶ್ರ ಡಬಲ್ಸ್ ಮೊದಲ ಸುತ್ತಿನಲ್ಲಿ ರೋಹನ್ ಬೋಪಣ್ಣ ಹಾಗೂ ಕೆನಡಾದ ದವ್ರೌಸ್ಕಿ ಜೋಡಿ ಬ್ರಿಟೀಷ್-ಫಿನ್'ಲ್ಯಾಂಡ್ ಜೋಡಿಯಾದ ಹೀಥರ್ ವ್ಯಾಟ್ಸನ್-ಹೆನ್ರಿ ಕೋಂಟಿಯಿನ್ ವಿರುದ್ಧ 6-4, 4-6, 13-11 ಸೆಟ್'ಗಳಲ್ಲಿ ಗೆಲುವು ಸಾಧಿಸಿ ದ್ವಿತೀಯ ಸುತ್ತು ಪ್ರವೇಶಿಸಿದೆ.

ಏಳನೇ ಶ್ರೇಯಾಂಕಿತ ಬೋಪಣ್ಣ-ದವ್ರೌಸ್ಕಿ ಜೋಡಿ ಎರಡನೇ ಸುತ್ತಿನಲ್ಲಿ ಅಮೆರಿಕಾ-ಸ್ಪಾನಿಶ್ ಜೋಡಿಯಾದ ನಿಕೋಲಾಸ್ ಮೊನೊರೇ ಮತ್ತು ಮರಿಯಾ ಜೋಸ್ ವಿರುದ್ಧ ಕಾದಾಡಲಿದ್ದಾರೆ.

Follow Us:
Download App:
  • android
  • ios