ಭಾರತೀಯರ ಪಾಲಿಗೆ ಇಂದು ಶುಭ ಶುಕ್ರವಾರವಾಗಿದ್ದು, ರೋಯಿಂಗ್’ನಲ್ಲಿ ಮೂರು, ಶೂಟಿಂಗ್’ನಲ್ಲಿ ಹಾಗೂ ಟೆನಿಸ್’ನಲ್ಲಿ ಒಂದು ಪದಕವನ್ನು ಭಾರತೀಯರು ಈಗಾಗಲೇ ಗೆದ್ದುಕೊಂಡು ಶುಭಾರಂಭ ಮಾಡಿದ್ದಾರೆ.
ಜಕಾರ್ತ[ಆ.24]: ಕನ್ನಡಿಗ ರೋಹನ್ ಬೋಪಣ್ಣ- ದಿವೀಜ್ ಶರಣ್ ಜೋಡಿ ಪುರುಷರ ಡಬಲ್ಸ್ ಟೆನಿಸ್ ವಿಭಾಗದಲ್ಲಿ ಚಿನ್ನಕ್ಕೆ ಮುತ್ತಿಕ್ಕುವ ಮೂಲಕ ದಾಖಲೆ ಬರೆದಿದ್ದಾರೆ. ಇದು ರೋಹನ್ ಬೋಪಣ್ಣಗೆ ಏಷ್ಯನ್ ಗೇಮ್ಸ್’ನಲ್ಲಿ ಮೊದಲ ಚಿನ್ನದ ಪದಕವಾಗಿದೆ.
ಭಾರತೀಯರ ಪಾಲಿಗೆ ಇಂದು ಶುಭ ಶುಕ್ರವಾರವಾಗಿದ್ದು, ರೋಯಿಂಗ್’ನಲ್ಲಿ ಮೂರು, ಶೂಟಿಂಗ್’ನಲ್ಲಿ ಹಾಗೂ ಟೆನಿಸ್’ನಲ್ಲಿ ಒಂದು ಪದಕವನ್ನು ಭಾರತೀಯರು ಈಗಾಗಲೇ ಗೆದ್ದುಕೊಂಡು ಶುಭಾರಂಭ ಮಾಡಿದ್ದಾರೆ.
ಭಾರತದ ಟಾಪ್ ಶ್ರೇಯಾಂಕಿತ ಜೋಡಿಯಾದ ರೋಹನ್ ಬೋಪಣ್ಣ ಹಾಗೂ ದಿವೀಜ್ ಶರಣ್ ಜೋಡಿ ಕಜಾಕಿಸ್ತಾನದ ಅಲೆಗ್ಸಾಂಡರ್ ಬಬ್ಲಿಕ್ ಹಾಗೂ ಡೆನಿಸ್ ಯೆವ’ಸೇವ್ ಜೋಡಿಯನ್ನು 6-3, 6-4 ಸೆಟ್’ಗಳಿಂದ ಮಣಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.
ರೋಹನ್ ಬೋಪಣ್ಣ ಜೋಡಿಯ ಈ ಸಾಧನೆಗೆ ರಾಷ್ಟ್ರಪತಿ ಸೇರಿದಂತೆ ಹಲವು ದಿಗ್ಗಜರು ಶುಭ ಕೋರಿದ್ದಾರೆ.