Asianet Suvarna News Asianet Suvarna News

ಏಷ್ಯನ್‌ ವಾಲಿ​ಬಾಲ್‌ ಚಾಂಪಿ​ಯನ್‌ಶಿಪ್‌: ಕ್ವಾರ್ಟರ್‌ ಫೈನಲ್‌ಗೇರಿದ ಭಾರತ!

ಏಷ್ಯನ್‌ ವಾಲಿಬಾಲ್ ಚಾಂಪಿ​ಯನ್‌ಶಿಪ್‌ನಲ್ಲಿ ಓಮನ್ ತಂಡವನ್ನು ಅನಾಯಾಸವಾಗಿ ಮಣಿಸಿದ ಭಾರತ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Asian Volleyball Championship Indian Men's Team beat Oman to reach knock out stage
Author
Tehran, First Published Sep 16, 2019, 4:25 PM IST

ತೆಹ್ರಾನ್‌[ಸೆ.16]: ಭಾರತ ಪುರು​ಷರ ವಾಲಿ​ಬಾಲ್‌ ತಂಡ, ಏಷ್ಯನ್‌ ಚಾಂಪಿ​ಯನ್‌ಶಿಪ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇ​ಶಿ​ಸಿದೆ. ಇದ​ರೊಂದಿಗೆ 2020 ಏಷ್ಯಾ ಒಲಿಂಪಿಕ್‌ ಅರ್ಹತಾ ಟೂರ್ನಿಗೆ ಪ್ರವೇಶ ಪಡೆ​ದಿದೆ.

ಪಂತ್‌ಗೆ ಖಡಕ್‌ ಎಚ್ಚ​ರಿಕೆ ಕೊಟ್ಟ ರವಿ ಶಾಸ್ತ್ರಿ!

 ‘ಸಿ’ ಗುಂಪಿ​ನಲ್ಲಿ ಸ್ಥಾನ ಪಡೆದಿದ್ದ ಭಾರತ, ಭಾನು​ವಾರ ತನ್ನ 3ನೇ ಹಾಗೂ ಅಂತಿಮ ಪಂದ್ಯ​ದಲ್ಲಿ ಒಮಾನ್‌ ವಿರುದ್ಧ 22-25, 25-12, 25-21, 25-19 ಸೆಟ್‌ಗಳಲ್ಲಿ ಗೆಲುವು ಸಾಧಿ​ಸಿತು. ಆದರೆ ಚೀನಾ ಹಾಗೂ ಕಜ​ಕ​ಸ್ತಾನ ನಡು​ವಿನ ಪಂದ್ಯದ ಫಲಿ​ತಾಂಶ​ಕ್ಕಾಗಿ ಭಾರತ ಕಾಯ​ಬೇ​ಕಿತ್ತು. ಕಜ​ಕ​ಸ್ತಾನ ವಿರುದ್ಧ ಚೀನಾ 25-23, 25-19, 25-20 ಸೆಟ್‌ಗಳಲ್ಲಿ ಸುಲಭ ಗೆಲುವು ಪಡೆದು ಗುಂಪಿ​ನಲ್ಲಿ ಅಗ್ರ​ಸ್ಥಾನ ಪಡೆಯಿತು. 3 ಪಂದ್ಯ​ಗ​ಳಲ್ಲಿ 2 ಗೆಲುವು, 1 ಸೋಲಿ​ನೊಂದಿಗೆ ಒಟ್ಟು 5 ಅಂಕ ಪಡೆದು ಗುಂಪಿ​ನಲ್ಲಿ 2ನೇ ಸ್ಥಾನ ಪಡೆದ ಭಾರತ, ಅಂತಿಮ 8ರ ಘಟ್ಟಕ್ಕೆ ಪ್ರವೇ​ಶಿ​ಸಿತು.

ಏಷ್ಯನ್ ವಾಲಿಬಾಲ್: ಭಾರತ ಫೈನಲ್ ಪ್ರವೇಶ

ಕ್ವಾರ್ಟರ್‌ ಫೈನಲ್‌ ವರ್ಗೀ​ಕ​ರಣ ಸುತ್ತಿ​ನಲ್ಲಿ ಭಾರತ ‘ಇ’ ಗುಂಪಿ​ನಲ್ಲಿ ಸ್ಥಾನ ಪಡೆ​ದಿದ್ದು, ಸೆಮಿ​ಫೈ​ನಲ್‌ನಲ್ಲಿ ಸ್ಥಾನ​ಕ್ಕಾಗಿ ಯಾವ ತಂಡದ ವಿರುದ್ಧ ಸೆಣ​ಸ​ಲಿದೆ ಎನ್ನು​ವುದು ಇನ್ನಷ್ಟೇ ನಿರ್ಧಾರವಾಗ​ಬೇ​ಕಿದೆ. ಚೀನಾ, ಆಸ್ಪ್ರೇ​ಲಿಯಾ, ಇರಾನ್‌, ದಕ್ಷಿಣ ಕೊರಿಯಾ, ಜಪಾನ್‌, ಚೈನೀಸ್‌ ತೈಪೆ ಹಾಗೂ ಪಾಕಿ​ಸ್ತಾನ ತಂಡ​ಗಳು ಕ್ವಾರ್ಟರ್‌ ಫೈನಲ್‌ ಪ್ರವೇ​ಶಿ​ಸಿ​ವೆ.

Follow Us:
Download App:
  • android
  • ios