ಏಷ್ಯಾ ಕಪ್‌ನಲ್ಲಿ ಭಾರತ ಎ ಮತ್ತು ಪಾಕಿಸ್ತಾನ ಎ ನಡುವಿನ ಪಂದ್ಯದಲ್ಲಿ ಹರ್ಷಿತ್ ರಾಣಾ ಮತ್ತು ಪಾಕಿಸ್ತಾನ ಬ್ಯಾಟರ್‌ಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಭಾರತ ಮತ್ತು ಪಾಕಿಸ್ತಾನ ಮಧ್ಯೆ ಮ್ಯಾಚ್ ಇದ್ರೆ ಕಿರಿಕ್ ಇಲ್ಲದೇ ಮ್ಯಾಚ್ ಮುಗಿಯೋದೇ ಇಲ್ಲ ಎಂಬುವಂತಾಗಿದೆ. ಇಷ್ಟಕ್ಕೆಲ್ಲ ಕಾರಣ ಪಾಕಿಸ್ತಾನಿ ಆಟಗಾರರು ಟೀಂ ಇಂಡಿಯಾವನ್ನು ಮತ್ತೆ ಮತ್ತೆ ಕೆಣಕಿ ಪೆಟ್ಟು ತಿನ್ನೋದು. ಅದರಂತೆ ಇವತ್ತೂ ಕೂಡ ದೊಡ್ಡ ಮೊಟ್ಟದಲ್ಲಿ ಕಿರಿಕ್ ಆಗಿದೆ.

ದೋಹಾದಲ್ಲಿ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್‌ ನಡೆಯುತ್ತಿದೆ. ಇವತ್ತಿನ ಪಂದ್ಯದಲ್ಲಿ ಭಾರತ ಎ ಮತ್ತು ಪಾಕಿಸ್ತಾನ ಎ ತಂಡಗಳು ಎದುರಾಗಿವೆ. ಇದರಲ್ಲಿ ಪಾಕಿಸ್ತಾನ ತಂಡವು ಮೊದಲ 6 ಓವರ್‌ಗಳಲ್ಲಿ 64 ರನ್ ಗಳಿಸಿತ್ತು. ಈ ವೇಳೆ ಹರ್ಷಿತ್ ರಾಣಾ ಮತ್ತು ಪಾಕಿಸ್ತಾನದ ಬ್ಯಾಟರ್‍‌ಗಳ ಜೊತೆ ಕಿರಿಕ್ ಆಗಿದೆ. ರಾಣಾ, ಶಮೀಮ್ ಹುಸೇನ್ ಮತ್ತು ಮಾಜ್ ಸದಾಕತ್‌ನನ್ನು ಸ್ಲೆಡ್ಜ್ ಮಾಡಿದ್ದಾರೆ. ಕೊನೆಗೆ ಹುಸೇನ್ ಔಟ್ ಆದಾಗ ಹರ್ಷಿತ್ ರಾಣಾ ಆಕ್ರಮಣಕಾರಿಯಾಗಿ ಬೀಳ್ಕೊಟ್ಟರು. ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಆಗಿದ್ದೇನು?

ಹರ್ಷಿತ್ ರಾಣಾ, ಭಾರತದ ಪರ 7ನೇ ಓವರ್ ಎಸೆಯಲು ಬಂದಿದ್ದರು. ಆಗ ರಾಣಾ ಪಾಕಿಸ್ತಾನಿ ಬ್ಯಾಟರ್‍‌ನನ್ನು ಕೆಣಕಿದ್ದಾರೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಆಕ್ರೋಶ ಅಲ್ಲಿಗೆ ನಿಲ್ಲಲಿಲ್ಲ. ನಂತರ ಬೌಲಿಂಗ್ ಮಾಡಲು ಆಯುಷ್ ಬದೋನಿ ಬಂದಿದ್ದರು. ಬದೋನಿ ಹಾಕಿದ ಐದನೇ ಎಸೆತದಲ್ಲಿ ಶಮಿಕ್ ಹುಸೇನ್ ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿದರು. ಆದರೆ ಚೆಂಡು ನೇರವಾಗಿ ಹರ್ಷಿತ್ ರಾಣಾರ ಕೈಸೇರಿತು. ಆಗ ಹುಸೇನ್‌ಗೆ ಕೈ ಸನ್ನೆ ಮೂಲಕ ಆಕ್ರಮಣಕಾರಿಯಾಗಿ ಪೆವಿಲಿಯನ್‌ಗೆ ಕಳುಹಿಸಿದರು. ಮತ್ತೆ ಮುಂದಿನ ಓವರ್ ಅನ್ನು ಹರ್ಷಿತ್ ರಾಣಾ ಮತ್ತೆ ಬೌಲ್ ಮಾಡಿದರು. ಆಗ ರೋಹೆಲ್ ನಜೀರ್‍‌ನನ್ನು ಔಟ್ ಮಾಡಿದರು. ಆಗಲೂ ಹರ್ಷಿತ್ ಆಕ್ರೋಶ ಭರಿತವಾಗಿ ಸಂಭ್ರಮಿಸಿದರು.

40ನೇ ಓವರ್‍‌ನಲ್ಲಿ ಮತ್ತೆ ಗಲಾಟೆ

40ನೇ ಓವರ್‌ನಲ್ಲಿ ರಾಂಧವಾ ಹರ್ಷಿತ್ ಎಸೆದ ನೋ-ಬಾಲ್‌ನಲ್ಲಿ ಸಿಂಗಲ್ ಪಡೆದರು. ನಾನ್-ಸ್ಟ್ರೈಕರ್‌ನ ಎಂಡ್‌ಗೆ ಹೋಗುವ ಸಂದರ್ಭದಲ್ಲಿ ರಾಂಧವಾ ಮತ್ತು ಹರ್ಷಿತ್ ನಡುವೆ ಕಿರಿಕ್ ಆಗಿದೆ. ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇಬ್ಬರ ಮಧ್ಯೆ ಗಲಾಟೆ ಜೋರಾಗಿ ಹೋಗಿತ್ತು. ಆಗ ಅಂಪೈರ್ ಮಧ್ಯ ಪ್ರವೇಶ ಮಾಡಿ ಮುಂದಾಗಬಹುದಾಗಿದ್ದ ಅನಾಹುತವನ್ನು ತಪ್ಪಿಸಿದ್ದಾರೆ. ಇನ್ನು ರಾಣಾ ಇವತ್ತು ತಂಡಕ್ಕೆ ತುಂಬಾನೇ ದುಬಾರಿಯಾದರು. ತಮ್ಮ ಕೋಟಾದ 10 ಓವರ್‍‌ನಲ್ಲಿ 77 ರನ್‌ ನೀಡಿದರು. ಮೂರು ವೈಡ್ ಬಾಲ್, ಒಂದು ನೋ ಬಾಲ್‌ ಹಾಕಿದರು. ಜೊತೆಗೆ ಎರಡು ವಿಕೆಟ್ ಕೂಡ ಪಡೆದುಕೊಂಡಿದ್ದಾರೆ.

ನೇಪಾಳ ವಿರುದ್ಧದ ಪಂದ್ಯದಲ್ಲಿ 4 ವಿಕೆಟ್

ಹರ್ಷಿತ್ ರಾಣಾ ಅವರ ಪುನರಾಗಮನ ಯಶಸ್ವಿಯಾಗಿದೆ. ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್‌ನಲ್ಲಿ ಭಾರತದ ಮೊದಲ ಪಂದ್ಯ ನೇಪಾಳ ವಿರುದ್ಧವಾಗಿತ್ತು. ಭಾರತ ಎ ತಂಡವು 332 ರನ್‌ಗಳನ್ನು ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ ನೇಪಾಳ ಕೇವಲ 26 ರನ್‌ಗಳಿಗೆ ಆಲೌಟ್ ಆಯಿತು. ಭಾರತವು ಪಂದ್ಯವನ್ನು 306 ರನ್‌ಗಳ ಅಂತರದಿಂದ ಗೆದ್ದುಕೊಂಡಿತು. ಹರ್ಷಿತ್ ರಾಣಾ ಅವರ ಬೌಲಿಂಗ್ ಪ್ರದರ್ಶನವು ಆ ಪಂದ್ಯದಲ್ಲಿ ನಾಲ್ವರು ನೇಪಾಳಿ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿತು.

Scroll to load tweet…