ಏಷ್ಯಾಕಪ್ 2020: ಬಿಸಿಸಿಐಗೆ ಪಾಕ್ ಗಡುವು
ಮುಂಬರುವ 2020ರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಲಿದೆ. ಒಂದುವೇಳೆ ಟೂರ್ನಿ ಪಾಕಿಸ್ತಾನದಲ್ಲೇ ಆಯೋಜನೆಗೊಂಡರೆ ಟೀಂ ಇಂಡಿಯಾ ಭಾಗವಹಿಸುವುದು ಬಹುತೇಕ ಅನುಮಾನವಾಗಿದೆ. ಹೀಗಾಗಿ ಬಿಸಿಸಿಐ ತೀರ್ಮಾನಕ್ಕಾಗಿ ಪಾಕಿಸ್ತಾನ ತಂಡ ಎದುರು ನೋಡುತ್ತಿದೆ.
ಕರಾಚಿ (ಸೆ.30): 2020ರ ಸೆಪ್ಟೆಂಬರ್‌ನಲ್ಲಿ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಲಿದ್ದು, ಭಾರತ ತಂಡವನ್ನು ಕಳುಹಿಸಲು ಬಿಸಿಸಿಐ ಒಪ್ಪಲಿದೆಯೇ ಎನ್ನುವ ಪ್ರಶ್ನೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಯನ್ನು ಕಾಡುತ್ತಿದೆ.
ನಂ.1 ಸ್ಥಾನ ಉಳಿಸಿಕೊಳ್ಳುವ ಒತ್ತಡದಲ್ಲಿ ಟೀಂ ಇಂಡಿಯಾ
ಟೂರ್ನಿಯಲ್ಲಿ ಭಾರತ ತಂಡದ ಪಾಲ್ಗೊಳ್ಳುವಿಕೆಯನ್ನು ಖಚಿತ ಪಡಿಸಿಲು ಬಿಸಿಸಿಐಗೆ ಮುಂದಿನ ವರ್ಷ ಜೂನ್ ವರೆಗೂ ಸಮಯ ನೀಡುವುದಾಗಿ ಪಿಸಿಬಿ ಹೇಳಿದೆ. ಒಂದೊಮ್ಮೆ ಭಾರತ, ಪಾಕಿಸ್ತಾನಕ್ಕೆ ತೆರಳಲು ನಿರಾಕರಿಸಿದರೆ ತಟಸ್ಥ ಸ್ಥಳದಲ್ಲಿ ಟೂರ್ನಿ ಆಯೋಜಿಸಬೇಕಾಗುತ್ತದೆ. ಪಂದ್ಯಾವಳಿಯನ್ನು ಸ್ಥಳಾಂತರ ಮಾಡುವ ನಿರ್ಧಾರ ಏಷ್ಯನ್ ಕ್ರಿಕೆಟ್ ಸಮಿತಿ (ಎಸಿಸಿ)ಗೆ ಬಿಟ್ಟವಿಚಾರವಾಗಿದೆ.
ಪಾಕಿಸ್ತಾನಕ್ಕೆ 2020ರ ಏಷ್ಯಾ ಕಪ್ ಆತಿಥ್ಯ
‘ಭಾರತ ತಂಡ ಪಾಕಿಸ್ತಾನಕ್ಕೆ ಆಗಮಿಸಲಿದೆ ಎನ್ನುವ ಭರವಸೆ ಇದೆ. ಒಂದೊಮ್ಮೆ ಭಾರತ ಸರ್ಕಾರ ತಂಡಕ್ಕೆ ಅನುಮತಿ ನೀಡದಿದ್ದರೆ, ತಟಸ್ಥ ಸ್ಥಳದಲ್ಲಿ ಟೂರ್ನಿ ಆಯೋಜಿಸಲು ನಾವು ಸಿದ್ಧರಿದ್ದೇವೆ’ ಎಂದು ಪಿಸಿಬಿ ಸಿಇಒ ವಸೀಂ ಖಾನ್ ಹೇಳಿದ್ದಾರೆ.
ನನಗೆ ವಾಂತಿ ಬರುತ್ತಿದೆ ಎಂದ ರವಿಶಾಸ್ತ್ರಿ..! ಟೀಂ ಇಂಡಿಯಾ ಕೋಚ್ ಫುಲ್ ಟ್ರೋಲ್
2018ರ ಏಷ್ಯಾಕಪ್ ಟೂರ್ನಿಗೆ ದುಬೈ ಆತಿಥ್ಯ ವಹಿಸಿತ್ತು. ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಮಣಿಸಿ ಭಾರತ ದಾಖಲೆಯ ಏಳನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಭಾರತ ತಂಡವು 3 ವಿಕೆಟ್ ಗಳಿಂದ ಮಣಿಸಿತ್ತು. ಇದರೊಂದಿಗೆ ಮೂರನೇ ಬಾರಿಗೆ ಏಷ್ಯಾಕಪ್ ಫೈನಲ್ ಪ್ರವೇಶಿಸಿದ್ದ ಬಾಂಗ್ಲಾದೇಶ ಮತ್ತೊಮ್ಮೆ ಚೊಚ್ಚಲ ಕಪ್ ಗೆಲ್ಲುವ ಕನಸು ಭಗ್ನವಾಯಿತು.