ಇನ್ನು ಫೈನಲ್’ನಲ್ಲಿ ಮತ್ತೊಮ್ಮೆ ಬಾಂಗ್ಲಾದೇಶವನ್ನು ಮಣಿಸಿದ ಭಾರತ ಗೆಲುವಿನ ಕೇಕೆ ಹಾಕಿದೆ. ಪಂದ್ಯ ಮುಕ್ತಾಯದ ಬಳಿಕ ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕ ವಿವರಣೆಗಾರ ಕೆವಿನ್ ಪೀಟರ್’ಸನ್ ಅವರ ಪ್ರಶ್ನೆಗೆ ಕೋಚ್ ನೀಡಿದ ಕಾಲ್ಪನಿಕ ಉತ್ತರಗಳು ಇಲ್ಲಿವೆ.
ಬೆಂಗಳೂರು[ಸೆ.29]: ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಹೀನಾಯ ಸೋಲನ್ನು ಇನ್ನೂ ಮರೆತಂತಿಲ್ಲ. ಐದು ಟೆಸ್ಟ್ ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 4-1ರ ಅಂತರದಲ್ಲಿ ಸೋಲುಂಡ ಟೀಂ ಇಂಡಿಯಾ ಪ್ರದರ್ಶನದಲ್ಲಿ ಕೋಚ್ ರವಿಶಾಸ್ತ್ರಿ ಕೊಡುಗೆಯೂ ಇದೆ ಎಂದು ಈ ಹಿಂದೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.
ಇದೀಗ ಏಷ್ಯಾಕಪ್’ನಲ್ಲಿ ಬಾಂಗ್ಲಾದೇಶವನ್ನು ಬಗ್ಗುಬಡಿದು ಟೀಂ ಇಂಡಿಯಾ 7ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಂಕಾಂಗ್ ವಿರುದ್ಧ ಪ್ರಯಾಸದ ಗೆಲುವು ಕಂಡಿದ್ದ ಭಾರತ ಆ ಬಳಿಕ, ಪಾಕಿಸ್ತಾನ, ಬಾಂಗ್ಲಾದೇಶ, ಪಾಕಿಸ್ತಾನ ವಿರುದ್ಧ ಅನಾಯಾಸದ ಗೆಲುವು ದಾಖಲಿಸಿತ್ತು. ಅದಾದ ಬಳಿಕ ಸೂಪರ್ 4 ಹಂತದ ಕೊನೆಯ ಪಂದ್ಯದಲ್ಲಿ ಆಫ್ಘನ್ ವಿರುದ್ಧ ರೋಚಕ ಡ್ರಾ ಸಾಧಿಸುವುದರೊಂದಿಗೆ ಅಜೇಯವಾಗಿ ಏಷ್ಯಾಕಪ್ ಫೈನಲ್ ಪ್ರವೇಶಿಸಿತ್ತು.
ಇನ್ನು ಫೈನಲ್’ನಲ್ಲಿ ಮತ್ತೊಮ್ಮೆ ಬಾಂಗ್ಲಾದೇಶವನ್ನು ಮಣಿಸಿದ ಭಾರತ ಗೆಲುವಿನ ಕೇಕೆ ಹಾಕಿದೆ. ಪಂದ್ಯ ಮುಕ್ತಾಯದ ಬಳಿಕ ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕ ವಿವರಣೆಗಾರ ಕೆವಿನ್ ಪೀಟರ್’ಸನ್ ಅವರ ಪ್ರಶ್ನೆಗೆ ಕೋಚ್ ನೀಡಿದ ಕಾಲ್ಪನಿಕ ಉತ್ತರಗಳು ಇಲ್ಲಿವೆ.
ಬಹುಶಃ ರವಿಶಾಸ್ತ್ರಿಯಷ್ಟು ಟೀಕೆಗೆ ಗುರಿಯಾದ ಮತ್ತೊಬ್ಬ ಕೋಚ್ ಇರಲು ಸಾಧ್ಯವಿಲ್ಲವೇನೋ.. ಕೋಚ್ ಆಯ್ಕೆಯ ಆರಂಭದಿಂದ ಹಿಡಿದು ಇಲ್ಲಿಯವರೆಗೂ ಒಂದಲ್ಲ ಒಂದು ವಿಚಾರವನ್ನಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳನ್ನು ಎದುರಿಸುತ್ತಲೇ ಬಂದಿದ್ದಾರೆ.