ಪದಕ ಗೆಲ್ಲದವರಿಗೂ ಶುಭಕೋರಿ ಆಶಾ, ಗಂಭೀರ್, ಲಕ್ಷ್ಮಣ್ ಎಡವಟ್ಟು..!
ಭಾರತದ ತಾರಾ ಅಥ್ಲೀಟ್ ಜ್ಯೋತಿ ಯರ್ರಾಜಿ ಏಷ್ಯಾಡ್ 100 ಮೀಟರ್ ಹರ್ಡಲ್ಸ್‌ನಲ್ಲಿ ಚಿನ್ನ ಗೆದ್ದಿರುವುದಾಗಿ ಟ್ವಿಟರ್‌ನಲ್ಲಿ ಆಶಾ ಭೋಸ್ಲೆ ವಿಡಿಯೋ ಹಂಚಿಕೊಂಡಿದ್ದಾರೆ. ಆದರೆ ಇದು ಹಳೆಯ ವಿಡಿಯೋ. ಕಳೆದ ಜುಲೈನಲ್ಲಿ ಜ್ಯೋತಿ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಗೆದ್ದ ವಿಡಿಯೋ ಇದಾದಗಿದೆ.
ನವದೆಹಲಿ(ಸೆ.27): ಏಷ್ಯನ್ ಗೇಮ್ಸ್‌ನಲ್ಲಿ ಸಾಧನೆ ಮಾಡಿದ ಭಾರತದ ಅಥ್ಲೀಟ್‌ಗಳಿಗೆ ಅಭಿನಂದನೆ ಸಲ್ಲಿಸುವ ಭರದಲ್ಲಿ ಖ್ಯಾತ ಗಾಯಕಿ ಆಶಾ ಭೋಸ್ಲೆ, ಮಾಜಿ ಕ್ರಿಕೆಟಿಗರಾದ ಗೌತಮ್ ಗಂಭೀರ್, ವಿವಿಎಸ್ ಲಕ್ಷ್ಮಣ್ ಎಡವಟ್ಟು ಮಾಡಿಕೊಂಡಿದ್ದಾರೆ.
ಭಾರತದ ತಾರಾ ಅಥ್ಲೀಟ್ ಜ್ಯೋತಿ ಯರ್ರಾಜಿ ಏಷ್ಯಾಡ್ 100 ಮೀಟರ್ ಹರ್ಡಲ್ಸ್‌ನಲ್ಲಿ ಚಿನ್ನ ಗೆದ್ದಿರುವುದಾಗಿ ಟ್ವಿಟರ್‌ನಲ್ಲಿ ಆಶಾ ಭೋಸ್ಲೆ ವಿಡಿಯೋ ಹಂಚಿಕೊಂಡಿದ್ದಾರೆ. ಆದರೆ ಇದು ಹಳೆಯ ವಿಡಿಯೋ. ಕಳೆದ ಜುಲೈನಲ್ಲಿ ಜ್ಯೋತಿ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಗೆದ್ದ ವಿಡಿಯೋ ಇದಾದಗಿದೆ.
Asian Games 2023: ಟೆನಿಸ್ ತಾರೆಗಳಾದ ಸುಮಿತ್ ನಗಾಲ್, ಅಂಕಿತಾ ರೈನಾ ಕ್ವಾರ್ಟರ್‌ಗೆ ಲಗ್ಗೆ
ಇನ್ನುಳಿದಂತೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರಾದ ಗೌತಮ್ ಗಂಭೀರ್, ವಿವಿಎಸ್ ಲಕ್ಷ್ಮಣ್ ಕೂಡಾ ಜ್ಯೋತಿ ಯರ್ರಾಜಿ ಚಿನ್ನ ಗೆದ್ದಿದ್ದಾರೆಂದು ಅಭಿನಂದನೆ ಸಲ್ಲಿಸಿದ್ದಾರೆ. ವಾಸ್ತವವೇನೆಂದರೆ ಹಾಂಗ್‌ಝೋ ಏಷ್ಯಾಡ್‌ನಲ್ಲಿ ಅಥ್ಲೆಟಿಕ್ಸ್ ಸ್ಪರ್ಧೆಗಳು ಇನ್ನಷ್ಟೇ ಆರಂಭವಾಗಬೇಕಿದೆ.
ವುಶು: ರೋಶಿಬೀನಾಗೆ ಕನಿಷ್ಠ ಕಂಚು ಖಚಿತ!
ಹಾಂಗ್‌ಝೋ: ಭಾರತಕ್ಕೆ ಏಷ್ಯಾಡ್‌ನಲ್ಲಿ ಮತ್ತೊಂದು ಪದಕ ಖಚಿತವಾಗಿದೆ. ಮಹಿಳೆಯರ ವುಶು 60 ಕೆ.ಜಿ. ವಿಭಾಗದಲ್ಲಿ ರೋಶಿಬೀನಾ ದೇವಿ ಸೆಮಿಫೈನಲ್ ಪ್ರವೇಶಿಸಿದ್ದು, ಕನಿಷ್ಠ ಕಂಚಿನ ಪದಕ ಖಚಿತವಾಗಿದೆ. ಕ್ವಾರ್ಟರ್ ಫೈನಲ್‌ನಲ್ಲಿ ರೋಶಿಬೀನಾ ಕಜಕಸ್ತಾನದ ಐಮನ್ ಕರ್ಶಾಗ್ಯ ಸುಲಭ ಗೆಲುವು ಸಾಧಿಸಿದರು. ಕಳೆದ ಆವೃತ್ತಿಯಲ್ಲಿ ರೋಶಿಬೀನಾ ಕಂಚಿನ ಪದಕ ಜಯಿಸಿದ್ದರು.
ಬೆಂಗ್ಳೂರು ಎಫ್‌ಸಿಗೆ ಇಂದು ಮೋಹನ್ ಬಗಾನ್ ಸವಾಲು
ಐಎಸ್‌ಎಲ್: ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) ಫುಟ್ಬಾಲ್ ಟೂರ್ನಿಯಲ್ಲಿ ಬುಧವಾರ ಬೆಂಗಳೂರು ಎಫ್‌ಸಿ ಹಾಗೂ ಮೋಹನ್ ಬಗಾನ್ ತಂಡಗಳು ಸೆಣಸಾಡಲಿವೆ. ಕಳೆದ ಆವೃತ್ತಿ ಫೈನಲ್‌ನಲ್ಲಿ ಈ ಎರಡು ತಂಡಗಳೇ ಮುಖಾಮುಖಿಯಾಗಿದ್ದವು. ಶೂಟೌಟ್‌ನಲ್ಲಿ ಸೋತು ಬಿಎಫ್‌ಸಿ ರನ್ನರ್-ಅಪ್ ಆಗಿತ್ತು. ಈ ಬಾರಿ ಮೋಹನ್ ಬಗಾನ್ ತಂಡ ಪಂಜಾಬ್ ಎಫ್‌ಸಿ ವಿರುದ್ಧ ಗೆದ್ದು ಶುಭಾರಂಭ ಮಾಡಿದ್ದರೆ, ಬಿಎಫ್‌ಸಿ ತನ್ನ ಮೊದಲ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ವಿರುದ್ಧ ಸೋತಿತ್ತು.
Asian Games 2023: ಈಕ್ವೆಸ್ಟ್ರಿಯನ್ ಚಿನ್ನ ಗೆದ್ದು ಭಾರತ ಇತಿಹಾಸ!
ಇಂದಿನಿಂದ ಮಂಗ್ಳೂರಲ್ಲಿ ರಾಜ್ಯ ಕಿರಿಯರ ಅಥ್ಲೆಟಿಕ್ಸ್
ಮಂಗಳೂರು: ಇಲ್ಲಿನ ಮಂಗಳಾ ಕ್ರೀಡಾಂಗಣದಲ್ಲಿ ಸೆ.27ರಿಂದ 30ರ ವರೆಗೆ ಕರ್ನಾಟಕ ರಾಜ್ಯ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ನಡೆಯಲಿದೆ. ಕೂಟದಲ್ಲಿ ವಿವಿಧ ವಿಭಾಗಗಳಲ್ಲಿ 1500ಕ್ಕೂ ಅಧಿಕ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಈ ಕೂಟ ತೆಲಂಗಾಣದಲ್ಲಿ ಅ.15ರಿಂದ 17ರ ವರೆಗೆ ನಡೆಯಲಿರುವ 34ನೇ ದಕ್ಷಿಣ ವಲಯ ಅಥ್ಲೆಟಿಕ್ಸ್ ಕೂಟಕ್ಕೆ ಆಯ್ಕೆ ಟ್ರಯಲ್ಸ್ ಆಗಿರಲಿದೆ ಎಂದು ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ ತಿಳಿಸಿದೆ.