Asianet Suvarna News Asianet Suvarna News

ಮಾಜಿ ನಾಯಕನಿಗೆ ಗೇಟ್’ಪಾಸ್ ನೀಡಿದ ಲಂಕಾ...!

ಅ.10ರಿಂದ ಇಂಗ್ಲೆಂಡ್‌ ವಿರುದ್ಧ ತವರಿನಲ್ಲಿ ನಡೆಯಲಿರುವ ಏಕದಿನ ಹಾಗೂ ಟಿ20 ಸರಣಿಗೆ ಬುಧವಾರ ಪ್ರಕಟಗೊಂಡ 15 ಸದಸ್ಯರ ತಂಡದಲ್ಲಿ ಮ್ಯಾಥ್ಯೂಸ್‌ಗೆ ಸ್ಥಾನ ನೀಡಲಾಗಿಲ್ಲ. ಆದರೆ ಅವರಿಗೆ ಟೆಸ್ಟ್‌ ತಂಡದಲ್ಲಿ ಸ್ಥಾನ ನೀಡಲಾಗಿದೆ. 

Angelo Mathews dropped from Sri Lanka ODI squad for England series
Author
Colombo, First Published Sep 27, 2018, 9:37 AM IST
  • Facebook
  • Twitter
  • Whatsapp

ಕೊಲಂಬೊ[ಸೆ.27]: ಏಷ್ಯಾಕಪ್‌ನ ಗುಂಪು ಹಂತದಿಂದಲೇ ಶ್ರೀಲಂಕಾ ಹೊರಬಿದ್ದ ಕಾರಣ, ನಾಯಕತ್ವ ಕಳೆದುಕೊಂಡಿದ್ದ ಏಂಜೆಲೋ ಮ್ಯಾಥ್ಯೂಸ್‌ ಇದೀಗ ತಂಡದಿಂದಲೇ ಹೊರಬಿದ್ದಿದ್ದಾರೆ. 

ಅ.10ರಿಂದ ಇಂಗ್ಲೆಂಡ್‌ ವಿರುದ್ಧ ತವರಿನಲ್ಲಿ ನಡೆಯಲಿರುವ ಏಕದಿನ ಹಾಗೂ ಟಿ20 ಸರಣಿಗೆ ಬುಧವಾರ ಪ್ರಕಟಗೊಂಡ 15 ಸದಸ್ಯರ ತಂಡದಲ್ಲಿ ಮ್ಯಾಥ್ಯೂಸ್‌ಗೆ ಸ್ಥಾನ ನೀಡಲಾಗಿಲ್ಲ. ಆದರೆ ಅವರಿಗೆ ಟೆಸ್ಟ್‌ ತಂಡದಲ್ಲಿ ಸ್ಥಾನ ನೀಡಲಾಗಿದೆ. 

ಇದನ್ನು ಓದಿ:  ಏಷ್ಯಾಕಪ್ ಸೋಲು: ಮ್ಯಾಥ್ಯೂಸ್ ತಲೆದಂಡ

ಸೀಮಿತ ಓವರ್‌ಗಳ ತಂಡದಿಂದ ಕೈಬಿಟ್ಟಿದ್ದಕ್ಕೆ ಆಯ್ಕೆ ಸಮಿತಿ ಫಿಟ್ನೆಸ್‌ ಸಮಸ್ಯೆಯ ಕಾರಣ ನೀಡಿದೆ. ಲಂಕಾ ಪ್ರವಾಸ ಕೈಗೊಳ್ಳಲಿರುವ ಇಂಗ್ಲೆಂಡ್‌ 5 ಏಕದಿನ, 3 ಟೆಸ್ಟ್‌ ಹಾಗೂ 1 ಟಿ20 ಪಂದ್ಯಗಳನ್ನಾಡಲಿದೆ.

Follow Us:
Download App:
  • android
  • ios