ಏಂಜೆಲೋ ಮ್ಯಾಥ್ಯೂಸ್‌ರನ್ನು ನಾಯಕನ ಸ್ಥಾನದಿಂದ ವಜಾಗೊಳಿಸಿ, ದಿನೇಶ್ ಚಾಂಡಿಮಲ್‌ಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ. ಟೆಸ್ಟ್ ತಂಡದ ನಾಯಕರಾಗಿದ್ದ ಚಾಂಡಿಮಲ್, ಮುಂಬರುವ ಇಂಗ್ಲೆಂಡ್ ಪ್ರವಾಸದಿಂದ ಎಲ್ಲಾ ಮಾದರಿಯ ತಂಡಕ್ಕೆ ನಾಯಕರಾಗಲಿದ್ದಾರೆ.

ಕೊಲಂಬೊ(ಸೆ.25]: ಏಷ್ಯಾಕಪ್‌ನಲ್ಲಿ ಆಫ್ಘಾನಿಸ್ತಾನ, ಬಾಂಗ್ಲಾದೇಶ ವಿರುದ್ಧ ಸೋಲುಂಡು ಗುಂಪು ಹಂತದಲ್ಲೇ ಹೊರಬಿದ್ದ ಶ್ರೀಲಂಕಾ ತಂಡದಲ್ಲಿ ಮತ್ತೊಮ್ಮೆ ನಾಯಕತ್ವ ಬದಲಾವಣೆಯಾಗಿದೆ.

ಏಂಜೆಲೋ ಮ್ಯಾಥ್ಯೂಸ್‌ರನ್ನು ನಾಯಕನ ಸ್ಥಾನದಿಂದ ವಜಾಗೊಳಿಸಿ, ದಿನೇಶ್ ಚಾಂಡಿಮಲ್‌ಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ. ಟೆಸ್ಟ್ ತಂಡದ ನಾಯಕರಾಗಿದ್ದ ಚಾಂಡಿಮಲ್, ಮುಂಬರುವ ಇಂಗ್ಲೆಂಡ್ ಪ್ರವಾಸದಿಂದ ಎಲ್ಲಾ ಮಾದರಿಯ ತಂಡಕ್ಕೆ ನಾಯಕರಾಗಲಿದ್ದಾರೆ.

‘ರಾಷ್ಟ್ರೀಯ ಆಯ್ಕೆಗಾರರು ಮ್ಯಾಥ್ಯೂಸ್‌ಗೆ ನಾಯಕತ್ವ ತ್ಯಜಿಸುವಂತೆ ಮನವಿ ಮಾಡಿದರು’ ಎಂದು ಲಂಕಾ ಕ್ರಿಕೆಟ್ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ನಾಯಕತ್ವ ತ್ಯಜಿಸಿದ ಬಳಿಕ, ಮಂಡಳಿಗೆ ಪತ್ರ ಬರೆದಿರುವ ಮ್ಯಾಥ್ಯೂಸ್ ತಮ್ಮನ್ನು ಬಲಿಪಶು ಮಾಡಲಾಗಿದೆ ಎಂದಿದ್ದಾರೆ. ಇದೇ ವೇಳೆ ಈ ರೀತಿ ಅವಮಾನಿಸಿದರೆ ನಿವೃತ್ತಿ ಘೋಷಿಸುವುದಾಗಿಯೂ ಎಚ್ಚರಿಸಿದ್ದಾರೆ ಎನ್ನಲಾಗಿದೆ.