ಮಹೀಂದ್ರ ಮಾಲೀಕ ಆನಂದ್ ಮಹೀಂದ್ರ 3 ವರ್ಷದ  ಹಳೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಟೀಂ ಇಂಡಿಯಾ ಕ್ರಿಕೆಟಿಗ ಎಂ.ಎಸ್.ಧೋನಿ ವಿಡಿಯೋವನ್ನು ಆನಂದ್ ಮಹೀಂದ್ರ ಶೇರ್ ಮಾಡಿದ್ದು ಯಾಕೆ? ಇಲ್ಲಿದೆ ಕಾರಣ.

ಮುಂಬೈ(ಜು.24): ಮಹೀಂದ್ರ ಕಂಪನಿ ಮಾಲೀಕ ಆನಂದ್ ಮಹೀಂದ್ರ ಸಾಮಾಜಿಕ ಜಾಲತಾದಲ್ಲಿ ಸಕ್ರಿಯರಾಗಿದ್ದಾರೆ. ಆನಂದ್ ಮಹೀಂದ್ರ ಪ್ರತಿ ಪೋಸ್ಟ್ ಕೂಡ ವೈರಲ್ ಆಗುತ್ತಿದೆ. ಇದೀಗ ಟೀಂ ಇಂಡಿಯಾ ಕ್ರಿಕೆಟಿಗ ಎಂ.ಎಸ್.ಧೋನಿ ವಿಡಿಯೋ ಶೇರ್ ಮಾಡಿದ್ದಾರೆ. ವಿಶೇಷ ಅಂದರೆ 3 ವರ್ಷ ಹಳೆ ವಿಡಿಯೋ ಶೇರ್ ಮಾಡಿದ ಆನಂದ್ ಮಹೀಂದ್ರ, ಅಭಿಮಾನಿಗಳ ಕುತೂಹಲ ಇಮ್ಮಡಿಗೊಳಿಸಿದ್ದಾರೆ.

Add Asianetnews Kannada as a Preferred SourcegooglePreferred

ಇದನ್ನೂ ಓದಿ: ಭಾರತೀಯರ ಪಾರ್ಕಿಂಗ್ ಐಡಿಯಾಗೆ ಮನಸೋತ ಆನಂದ್ ಮಹೀಂದ್ರ !

ಮೂರು ವರ್ಷಗಳ ಹಿಂದೆ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕೊಲೊನೆಲ್ ಗೌರವ್ ಹುದ್ದೆ ಹೊಂದಿರುವ ಧೋನಿ, ಸೇನಾ ಕ್ಯಾಂಪ್‌ಗೆ ಬೇಟಿ ನೀಡಿದ್ದರು. ಸೇನಾ ಸಮವಸ್ತ್ರದಲ್ಲಿ ಧೋನಿ ಶಿಸ್ತಿನ ಸಿಪಿಯಾಯಿಂತೆ ಕಾಣಿಸಿಕೊಂಡಿದ್ದರು. ಈ ವೀಡಿಯೋವನ್ನು ಆನಂದ್ ಮಹೀಂದ್ರ ಶೇರ್ ಮಾಡಿದ್ದಾರೆ. ಬಳಿಕ ಸೇನಾ ಸಮವಸ್ತ್ರದಲ್ಲಿ ಧೋನಿ ಉತ್ತಮವಾಗಿ ಕಾಣುತ್ತಿದ್ದಿರಿ. ಇಷ್ಟೇ ಅಲ್ಲ ಸೇನಾ ಕ್ಯಾಂಪ್‌ಗೆ ತೆರಳಲು ನೀಡಿರುವ ಕಾರಿನಲ್ಲಿ ಧೋನಿ ಮತ್ತಷ್ಟು ಉತ್ತಮವಾಗಿ ಕಾಣುತ್ತಿದ್ದಾರೆ ಎಂದು ಆನಂದ್ರ ಮಹೀಂದ್ರ ಟ್ವೀಟ್ ಮಾಡಿದ್ದಾರೆ.

Scroll to load tweet…

ಇದನ್ನೂ ಓದಿ:ಬ್ಲೂ ಬಾಯ್ಸ್ ಹಾರೈಸಿದ ಅಜ್ಜಿಗೆ ಆನಂದ್ ಮಹೀಂದ್ರ ಕೊಟ್ರು ಅಚ್ಚರಿಯ ಉಡುಗೊರೆ!

ಧೋನಿಗೆ ಸೇನಾ ಕ್ಯಾಂಪ್‌ಗೆ ತೆರಳಲು ಭಾರತೀಯ ಸೇನೆ ಮಹೀಂದ್ರ XUV500 ಕಾರು ನೀಡಿತ್ತು. ಇದು ಆನಂದ್ ಮಹೀಂದ್ರ ಮಾಲೀಕತ್ವದ ಮಹೀಂದ್ರ ಕಂಪನಿಯ ಕಾರು. ಆನಂದ್ ಮಹೀಂದ್ರ ಧೋನಿ ಹಾಗೂ XUV500 ಕಾರನ್ನು ಹೊಗಳಿದ್ದಾರೆ.