ಭಾರತೀಯರ ಪಾರ್ಕಿಂಗ್ ಐಡಿಯಾಗೆ ಮನಸೋತ ಆನಂದ್ ಮಹೀಂದ್ರ !
ಭಾರತದಲ್ಲಿ ವಾಹನ ಪಾರ್ಕಿಂಗ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಗರ ಪ್ರದೇಶಗಳಲ್ಲಿ ಪಾರ್ಕಿಂಗ ಸ್ಥಳದ ಕೊರತೆಯಾದರೆ, ಹಳ್ಳಿಗಳಲ್ಲಿ ಸರಿಯಾದ ವ್ಯವಸ್ಥೆ ಕೊರತೆ. ಆದರೆ ಆನಂದ್ ಮಹೀಂದ್ರ ಇದೀಗ ಭಾರತೀಯರ ಹೊಸ ಪಾರ್ಕಿಂಗ್ ಐಡಿಯಾ ಕುರಿತು ಬೆಳುಕ ಚೆಲ್ಲಿದ್ದಾರೆ.
ಮುಂಬೈ(ಜು.20): ಮಹೀಂದ್ರ ಕಂಪನಿ ಮಾಲೀಕ ಆನಂದ್ ಮಹೀಂದ್ರ ಕೇವಲ ಕಾರು ಬಿಡುಗಡೆ ಮಾಡಿ ಸದ್ದುಮಾಡುತ್ತಿಲ್ಲ. ಇದರ ಜೊತೆಗೆ ಟ್ವೀಟ್ ಮೂಲಕವೂ ಸುದ್ದಿಯಾಗುತ್ತಿದ್ದಾರೆ. ಸೂಕ್ಷ್ಮ ವಿಚಾರ, ತೀಕ್ಷ್ಣ ತಿರುಗೇಟಿನ ಮೂಲಕ ಆನಂದ್ ಮಹೀಂದ್ರ ಹಲವು ಬಾರಿ ದೇಶದ ಗಮನ ಸೆಳೆದಿದ್ದಾರೆ. ಇದೀಗ ಆನಂದ್ ಮಹೀಂದ್ರ ಭಾರತೀಯರ ಅದ್ಭುತ ಪಾರ್ಕಿಂಗ್ ಐಡಿಯಾ ಕುರಿತು ಬೆಳಕು ಚೆಲ್ಲಿದ್ದಾರೆ.
ಇದನ್ನೂ ಓದಿ: ಕಾರು ಎಷ್ಟು ಕೊಡುತ್ತೆ ಪ್ರಶ್ನೆಗೆ ಮಹೀಂದ್ರ ಮಾಲೀಕರ ತಕ್ಕ ತಿರುಗೇಟು!
ಪ್ಲಾಸ್ಟಿಕ್ ಬಳಕೆಯನ್ನು ಆನಂದ್ ಮಹೀಂದ್ರ ಮೊದಲಿನಿಂದಲೂ ವಿರೋಧಿಸಿದ್ದಾರೆ. ಹೀಗಾಗಿ ಮಹೀಂದ್ರ ಕಂಪನಿಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದ್ದಾರೆ. ಆದರೆ ಪ್ಲಾಸ್ಟಿಕ್ ಮರುಬಳಕೆ ಮಾಡಿ ಪಾರ್ಕಿಂಗ್ ಸ್ಥಳವನ್ನಾಗಿಸಿದ ಐಡಿಯಾಗೆ ಮಹೀಂದ್ರ ಮನಸೋತಿದ್ದಾರೆ. ಹಾಳಾದ ಪ್ಲಾಸ್ಟಿಕ್ ನೀರಿನ ಟ್ಯಾಂಕ್‌ನ್ನು ಬಿಸಾಡದೇ, ದ್ವಿಚಕ್ರ ವಾಹನ ಪಾರ್ಕಿಂಗ್ ಮಾಡಲಾಗಿದೆ. ಈ ಹೊಸತನಕ್ಕೆ ಆನಂದ್ ಮಹೀಂದ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರಸ್ತೆ ನನ್ನಪ್ಪಂದಲ್ಲ-ಮಹೀಂದ್ರ ಮೋಟಾರ್ಸ್ ಮುಖ್ಯಸ್ಥ ಟ್ವೀಟ್ ಮಾಡಿದ್ದೇಕೆ?
ನಮ್ಮ ಕಚೇರಿಯಲ್ಲಿ ಪ್ಲಾಸ್ಟಿಕ್ ಬಾಟಲ್ ನಿಷೇಧ ಮಾಡಿರುವುದರ ಕುರಿತು ಈಗಾಗಲೇ ಟ್ವೀಟ್ ಮಾಡಿದ್ದೇನೆ. ಇದು ಎಲ್ಲರೂ ಪಾಲಿಸದರೆ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗಲಿದೆ. ಆದರೆ ಪ್ಲಾಸ್ಟಿಕ್‌ನ್ನು ಈ ರೀತಿ ಪುನರ್‌ಬಳಕೆ ಮಾಡುತ್ತಿರುವುದು ನಿಜಕ್ಕೂ ಮೆಚ್ಚಲೇಬೇಕು ಎಂದು ಆನಂದ್ ಮಹೀಂದ್ರ ಟ್ವೀಟ್ ಮಾಡಿದ್ದಾರೆ.