ಮುಂಬೈ(ಮೇ.13): 12ನೇ ಆವೃತ್ತಿ ಐಪಿಎಲ್ ಟೂರ್ನಿ ಫೈನಲ್  ಅತ್ಯಂತ ರೋಚಕ ಪಂದ್ಯ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೊನೆಯ ಎಸೆತದಲ್ಲಿ ಎರಡೂ ತಂಡಕ್ಕೂ ಗೆಲುವಿನ ಅವಕಾಶವಿತ್ತು. ಲಸಿತ್ ಮಲಿಂಗ್ ಅದ್ಬುತ ಬೌಲಿಂಗ್‌ನಿಂದ ಮುಂಬೈ ಇಂಡಿಯನ್ಸ್ 1 ರನ್ ರೋಚಕ ಗೆಲುವು ಸಾಧಿಸಿತು. ಆದರೆ ಈ ಪಂದ್ಯದ ಕುರಿತು ಬಾಲಿವುಡ್ ಹಿರಿಯ ನಟ ಕಮಲ್ ರಶೀದ್ ಖಾನ್ ಟ್ವೀಟ್ ಇದೀಗ ವಿವಾದಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಮುಂಬೈ ಇಂಡಿಯನ್ಸ್ ಟ್ರೋಫಿ ಪಾರ್ಟಿ- ಯುವಿ,ರೋಹಿತ್ ಡ್ಯಾನ್ಸ್ ವೈರಲ್!

ಸದಾ ವಿವಾದಿತ ಟ್ವೀಟ್‌ ಹಾಗೂ ಹೇಳಿಕೆಗಳಿಂದ ಸುದ್ದಿಯಾಗೋ ಕಮಲ್ ರಶೀದ್ ಖಾನ್ ಇದೀಗ ಐಪಿಎಲ್ ಫೈನಲ್ ಕುರಿತು ಟ್ವೀಟ್ ಮಾಡಿ ಎಲ್ಲರ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಅಂಬಾನಿ ಹಣದಿಂದಲೇ ಮುಂಬೈ ಇಂಡಿಯನ್ಸ್ ಐಪಿಎಲ್ ಪ್ರಶಸ್ತಿ ಗೆದ್ದಿದೆ ಎಂದು KRK ಟ್ವೀಟ್ ಮಾಡಿದ್ದಾರೆ.

 

 

ಇದನ್ನೂ ಓದಿ: ರೋಹಿತ್ ಶರ್ಮಾಗೆ ಟೀಂ ಇಂಡಿಯಾ ನಾಯಕ ಪಟ್ಟ ನೀಡಿ- ಟ್ವಿಟರಿಗರ ಆಗ್ರಹ!

ಧೋನಿ, ರೈನಾ, ರಾಯುಡು ಒತ್ತಾಯ ಪೂರ್ವಕ ಔಟ್ ಹಾಗೂ ಅಂತಿಮ ಓವರ್‌ನಲ್ಲಿ ಶೇನ್ ವ್ಯಾಟ್ಸನ್ ಅನಗತ್ಯ ರನೌಟ್ ಸ್ಪಷ್ಟವಾಗಿ ಹೇಳುತ್ತಿದೆ, ಭಾರತದಲ್ಲಿ ಅಂಬಾನಿ ಏನು ಬೇಕಾದರು ಮಾಡಬಹುದು, ಈ ಜಗತ್ತಿನಲ್ಲಿ ಹಣದಲ್ಲಿ ಏನೂ ಬೇಕಾದರೂ ಮಾಡಬುಹುದು ಎಂದು ಟ್ವೀಟ್ ಮಾಡಿದ್ದಾರೆ.