ಹೈದರಾಬಾದ್(ಮೇ.13): 12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಚಾಂಪಿಯನ್ ಕೀರಿಟ ಅಲಂಕರಿಸಿದೆ. ಅದ್ಬುತ ನಾಯಕತ್ವ, ಸಂಘಟಿತ ಹೋರಾಟದಿಂದ ಮುಂಬೈ ಇಂಡಿಯನ್ಸ್ ನಾಲ್ಕನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದುಕೊಂಡಿದೆ. ಇದೀಗ ಟೀಂ ಇಂಡಿಯಾಗೆ ರೋಹಿತ್ ಶರ್ಮಾ ನಾಯಕನಾಗಲಿ ಅನ್ನೋ ಕೂಗು ಕೇಳಿಬಂದಿದೆ. 

ಇದನ್ನೂ ಓದಿ: ಮುಂಬೈ ಇಂಡಿಯನ್ಸ್ ಟ್ರೋಫಿ ಪಾರ್ಟಿ- ಯುವಿ,ರೋಹಿತ್ ಡ್ಯಾನ್ಸ್ ವೈರಲ್!

ಎಂ.ಎಸ್.ಧೋನಿ ಬಳಿಕ ಟೀಂ ಇಂಡಿಯಾವನ್ನು ಸಮರ್ಥವಾಗಿ ಮುನ್ನಡೆಸುವ ನಾಯಕ ರೋಹಿತ್ ಶರ್ಮಾ. ಹೀಗಾಗಿ ಟಿ20 ಮಾದರಿಯಲ್ಲಾದರೂ ರೋಹಿತ್‌ಗ ನಾಯಕತ್ವ ನೀಡಿ ಎಂದು ಟ್ವಿಟರಿಗರು ಆಗ್ರಹಿಸಿದ್ದಾರೆ.