ಹೈದರಾಬಾದ್(ಮೇ.13): 12 ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ 2019ರ ಫೈನಲ್ ಪಂದ್ಯ ಅತ್ಯಂತ ರೋಚಕವಾಗಿತ್ತು. ಕೊನೆಯ ಎಸೆತದಲ್ಲಿ 1 ರನ್ ರೋಚಕ ಗೆಲುವು ಸಾಧಿಸಿದ ಮುಂಬೈ ಇಂಡಿಯನ್ಸ್ 4ನೇ ಟ್ರೋಫಿ ಗೆದ್ದುಕೊಂಡಿತು. ಮುಂಬೈ ಇಂಡಿಯನ್ಸ್ ಗೆಲುವು ದಾಖಲಿಸುತ್ತಿದ್ದಂತೆ ಮೈದಾನದಲ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು. ಪ್ರಶಸ್ತಿ ಸಮಾರಂಭದಲ್ಲಿ ಟ್ರೋಫಿ ಪಡೆದು ಮೈದಾನದಲ್ಲಿ ಸಂಭ್ರಮಾಚರಣೆ ನಡೆಸಿದರು. ಈ ಸಂಭ್ರಮದ ಬಳಿಕ ಮುಂಬೈ ಇಂಡಿಯನ್ಸ್ ಅದ್ಧೂರಿ ಪಾರ್ಟಿ ಆಯೋಜಿಸಿತ್ತು.

ಇದನ್ನೂ ಓದಿ: IPL 2019: ಚೆನ್ನೈಗೆ ಆಘಾತ- ಮುಂಬೈಗೆ ಚಾಂಪಿಯನ್ ಕಿರೀಟ

ಮುಂಬೈ ಇಂಡಿಯನ್ಸ್ ಟ್ರೋಫಿ ಪಾರ್ಟಿಯಲ್ಲಿ ಅಂಬಾನಿ ಬ್ರಿಗೇಡ್ ಸಂಭ್ರಮಾಚರಣೆ  ನಡೆಸಿತು. ಈ ಪಾರ್ಟಿಯಲ್ಲಿ ರೋಹಿತ್ ಶರ್ಮಾ ಹಾಗೂ ಯುವರಾಜ್ ಸಿಂಗ್ ಡ್ಯಾನ್ಸ್ ವೈರಲ್ ಆಗಿದೆ. ಇವರಿಬ್ಬರ ರ್ಯಾಪ್ ಹಾಗೂ ಡ್ಯಾನ್ಸ್ ವಿಡೀಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

"