Asianet Suvarna News Asianet Suvarna News

ಅಹಮದಾಬಾದ್‌ ಶೀಘ್ರ ವಿಶ್ವದ ಅತಿದೊಡ್ಡ ಕ್ರೀಡಾ ನಗರವಾಗಿ ಅಭಿವೃದ್ಧಿ: ಅಮಿತ್ ಶಾ

ಅಹಮದಾಬಾದ್‌ ಅನ್ನು ವಿಶ್ವದ ಅತಿದೊಡ್ಡ ಕ್ರೀಡಾ ನಗರವಾಗಿ ಅಭಿವೃದ್ಧಿ ಪಡಿಸಲು ಚಿಂತನೆ
ವಿಶ್ವದ ಅತಿದೊಡ್ಡ ಕ್ರೀಡಾಂಗಣ ಎನ್ನುವ ಖ್ಯಾತಿ ಪಡೆದಿರುವ ‘ನರೇಂದ್ರ ಮೋದಿ’ ಸ್ಟೇಡಿಯಂ ಅಹಮದಾಬಾದ್‌ನಲ್ಲಿದೆ
ಶೀಘ್ರದಲ್ಲಿ ಅಹಮದಾಬಾದ್‌ ಅನ್ನು ವಿಶ್ವದ ಅತಿದೊಡ್ಡ ಕ್ರೀಡಾ ನಗರವಾಗಿ ಅಭಿವೃದ್ಧಿ ಮಾಡುತ್ತೇವೆಂದ ಅಮಿತ್ ಶಾ

Ahmedabad will soon have the world biggest sports city Says Home Minister Amit Shah kvn
Author
First Published Sep 6, 2022, 11:13 AM IST

ಅಹಮದಾಬಾದ್‌(ಸೆ.06): ಗುಜರಾತ್‌ನ ಅಹಮದಾಬಾದ್‌ ಅನ್ನು ಸದ್ಯದಲ್ಲೇ ವಿಶ್ವದ ಅತಿದೊಡ್ಡ ಕ್ರೀಡಾ ನಗರವಾಗಿ ಅಭಿವೃದ್ಧಿ ಮಾಡಲಿದ್ದೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಘೋಷಿಸಿದ್ದಾರೆ. ಇಲ್ಲಿನ ಟ್ರ್ಯಾನ್ಸ್‌ ಸ್ಟೇಡಿಯಾ ಅರೇನಾದಲ್ಲಿ ಭಾನುವಾರ ನಡೆದ 36ನೇ ರಾಷ್ಟ್ರೀಯ ಕ್ರೀಡಾಕೂಟದ ಅಧಿಕೃತ ಗೀತೆ ಮತ್ತು ಮ್ಯಾಸ್ಕಟ್‌(ಲಾಂಛನ) ಅನಾವರಣ ಕಾರ‍್ಯಕ್ರಮದಲ್ಲಿ ಪಾಲ್ಗೊಂಡಿದ್ದರು 

ಈ ವೇಳೆ ಮಾತನಾಡಿದ ಅವರು ‘10 ವರ್ಷಗಳ ಹಿಂದೆ ನರೇಂದ್ರ ಮೋದಿ ಗುಜರಾತ್‌ ಸಿಎಂ ಆಗಿದ್ದಾಗ ಖೇಲ್‌ ಮಹಾಕುಂಭ್‌ ಆರಂಭಿಸಿದ್ದರು. ಆ ಸಮಯದಲ್ಲಿ ಗುಜರಾತ್‌ ಜಾಗತಿಕ ಕ್ರೀಡಾ ಭೂಪಟದಲ್ಲಿ ಕಾಣಸಿಗುತ್ತಿರಲಿಲ್ಲ. ಆದರೆ ಈಗ ವಿಶ್ವದ ಅತಿದೊಡ್ಡ ಕ್ರೀಡಾಂಗಣ ಎನ್ನುವ ಖ್ಯಾತಿ ಪಡೆದಿರುವ ‘ನರೇಂದ್ರ ಮೋದಿ’ ಕ್ರೀಡಾಂಗಣ ರಾಜ್ಯದಲ್ಲಿದೆ. ಶೀಘ್ರದಲ್ಲಿ ಅಹಮದಾಬಾದ್‌ ಅನ್ನು ವಿಶ್ವದ ಅತಿದೊಡ್ಡ ಕ್ರೀಡಾ ನಗರವಾಗಿ ಅಭಿವೃದ್ಧಿ ಮಾಡಲಿದ್ದೇವೆ’ ಎಂದು ಘೋಷಿಸಿದರು. ಸೆಪ್ಟೆಂಬರ್ 29ರಿಂದ ಅಕ್ಟೋಬರ್ 12ರ ವರೆಗೂ ಗುಜರಾತ್‌ನ 6 ನಗರಗಳಲ್ಲಿ ರಾಷ್ಟ್ರೀಯ ಕ್ರೀಡಾಕೂಟವು ನಡೆಯಲಿದೆ.

ಮಾಸ್ಟರ್‌ಕಾರ್ಡ್‌ ಸಂಸ್ಥೆ ಪಾಲಾದ ಬಿಸಿಸಿಐ ಶೀರ್ಷಿಕೆ ಪ್ರಾಯೋಜಕತ್ವ

ನವದೆಹಲಿ: ಜಾಗತಿಕ ಹಣ ಪಾವತಿ ಮತ್ತು ತಂತ್ರಜ್ಞಾನ ಸಂಸ್ಥೆಯಾದ ಮಾಸ್ಟರ್‌ಕಾರ್ಡ್‌ ಬಿಸಿಸಿಐನ ಶೀರ್ಷಿಕೆ ಪ್ರಾಯೋಜಕತ್ವ ಪಡೆದಿದೆ. ಪೇಟಿಎಂ ಬದಲು ಮಾಸ್ಟರ್‌ಕಾರ್ಡ್‌ ಭಾರತದಲ್ಲಿ ನಡೆಯಲಿರುವ ಎಲ್ಲಾ ಅಂತಾರಾಷ್ಟ್ರೀಯ ಹಾಗೂ ದೇಸಿ ಕ್ರಿಕೆಟ್‌ ಪಂದ್ಯಗಳಿಗೆ ಪ್ರಾಯೋಜಕತ್ವ ನೀಡಲಿದೆ ಎಂದು ಬಿಸಿಸಿಐ ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದೆ. ಪೇಟಿಎಂ ಸಂಸ್ಥೆಯು ಪಾವತಿಸುತ್ತಿದ್ದ ಮೊತ್ತಕ್ಕೇ ಮಾಸ್ಟರ್‌ಕಾರ್ಡ್‌ ಸಂಸ್ಥೆಯೂ ಬಿಸಿಸಿಐನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ ಎನ್ನಲಾಗಿದೆ.

ಗಾಯದಿಂದ ಹರ್ಷಲ್‌ ಚೇತರಿಕೆ: ಆಸ್ಪ್ರೇಲಿಯಾ ಸರಣಿಗೆ ಆಯ್ಕೆ ಸಾಧ್ಯತೆ

ಬೆಂಗಳೂರು: ಪಕ್ಕೆಲುಬು ಗಾಯಕ್ಕೆ ತುತ್ತಾಗಿ ವೆಸ್ಟ್‌ಇಂಡೀಸ್‌ ಪ್ರವಾಸ ಹಾಗೂ ಏಷ್ಯಾಕಪ್‌ನಿಂದ ಹೊರಬಿದ್ದಿದ್ದ ಭಾರತದ ವೇಗಿ ಹರ್ಷಲ್‌ ಪಟೇಲ್‌ ಗಾಯದಿಂದ ಚೇತರಿಸಿಕೊಂಡಿದ್ದು, ಸೆಪ್ಟೆಂಬರ್ 20ರಿಂದ ತವರಿನಲ್ಲಿ ನಡೆಯಲಿರುವ ಆಸ್ಪ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆಗೆ ಲಭ್ಯರಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳುತ್ತಿರುವ ಹರ್ಷಲ್‌ ಸದ್ಯದಲ್ಲೇ ಫಿಟ್ನೆಸ್‌ ಪರೀಕ್ಷೆಗೆ ಒಳಗಾಗಲಿದ್ದಾರೆ ಎನ್ನಲಾಗಿದೆ. ಮುಂದಿನ ತಿಂಗಳು ಆರಂಭಗೊಳ್ಳಲಿರುವ ಐಸಿಸಿ ಟಿ20 ವಿಶ್ವಕಪ್‌ಗೂ ಹರ್ಷಲ್‌ ಆಯ್ಕೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Team India ಟೆಸ್ಟ್ ನಾಯಕತ್ವ ಬಿಟ್ಟಾಗ ಧೋನಿ ಬಿಟ್ಟು ಯಾರೂ ಮೆಸೇಜ್‌ ಮಾಡ್ಲಿಲ್ಲ..!

ಕ್ಯಾಚ್‌ ಬಿಟ್ಟಅಶ್‌ರ್‍ದೀಪ್‌ರನ್ನು ಖಲಿಸ್ತಾನಿ ಎಂದ ಕಿಡಿಗೇಡಿಗಳು!

ಪಾಕಿಸ್ತಾನ ವಿರುದ್ಧ ಏಷ್ಯಾಕಪ್‌ ಸೂಪರ್‌-4 ಪಂದ್ಯದಲ್ಲಿ ಸುಲಭ ಕ್ಯಾಚ್‌ ಕೈಚೆಲ್ಲಿದ ಭಾರತದ ವೇಗಿ ಅಶ್‌ರ್‍ದೀಪ್‌ ಸಿಂಗ್‌ ವಿರುದ್ಧ ಕೆಲ ಕಿಡಿಗೇಡಿಗಳ ದುಕೃತ್ಯ ನಡೆಸಿದ್ದಾರೆ. ಅವರ ಹೆಸರಿನ ವಿಕಿಪೀಡಿಯಾ ಪೇಜ್‌ನಲ್ಲಿ ಭಾರತೀಯ ಆಟಗಾರ ಎನ್ನುವ ಜಾಗದಲ್ಲಿ ಖಲಿಸ್ತಾನಿ ಆಟಗಾರ ಎಂದು ತಿದ್ದಲಾಗಿದೆ. ಈ ದುಕೃತ್ಯ ನಡೆದ 15 ನಿಮಿಷಗಳಲ್ಲಿ ಬದಲಾವಣೆ ಮಾಡಲಾಗಿದೆಯಾದರೂ ಕ್ರಿಕೆಟ್‌ ಅಭಿಮಾನಿಗಳಿಂದ ಭಾರೀ ಆಕ್ರೋಶಕ್ಕೆ ವ್ಯಕ್ತವಾಗಿದೆ. ಸಾಮಾಜಿಕ ತಾಣಗಳಲ್ಲಿ ಅಶ್‌ರ್‍ದೀಪ್‌ಗೆ ದೊಡ್ಡ ಪ್ರಮಾಣದಲ್ಲಿ ಬೆಂಬಲ ದೊರೆತಿದೆ.

ಪಂಜಾಬ್‌ ಕ್ರೀಡಾ ಸಚಿವ ಬೆಂಬಲ

ಅಶ್‌ರ್‍ದೀಪ್‌ಗೆ ಪಂಜಾಬ್‌ನ ಕ್ರೀಡಾ ಸಚಿವ ಗುರ್‌ಮೀತ್‌ ಸಿಂಗ್‌ ಬೆಂಬಲ ವ್ಯಕ್ತಪಡಿಸಿದ್ದು, ಯುವ ವೇಗಿಯ ತಾಯಿಗೆ ಕರೆ ಮಾಡಿ ಮಾತನಾಡಿದ್ದಾರೆ. ‘ಅಶ್‌ರ್‍ದೀಪ್‌ಗೆ ಅನಗತ್ಯ ವಿಷಯಗಳತ್ತ ಗಮನ ಹರಿಸುವುದು ಬೇಡ ಎಂದು ಹೇಳಿ. ಅವರು ತವರಿಗೆ ಬಂದಾಗ ಸ್ವಾಗತಿಸಲು ನಿಮ್ಮ ಜೊತೆ ನಾನೂ ವಿಮಾನ ನಿಲ್ದಾಣಕ್ಕೆ ಬರುತ್ತೇನೆ’ ಎಂದು ಗುರ್‌ಮೀತ್‌ ಹೇಳಿದ್ದಾರೆ.

ಪಂಜಾಬ್‌ ಮಾಜಿ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ಕೂಡ ಫೇಸ್‌ಬುಕ್‌ನಲ್ಲಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಇನ್ನು ಟ್ವೀಟರ್‌ನಲ್ಲಿ ಅನೇಕ ಮಾಜಿ ಕ್ರಿಕೆಟಿಗರು, ರಾಜಕೀಯ ನಾಯಕರು, ಅಭಿಮಾನಿಗಳು ಅಶ್‌ರ್‍ದೀಪ್‌ರ ಫೋಟೋವನ್ನು ಹಾಕಿ ಬೆಂಬಲ ಸೂಚಿಸಿದ್ದಾರೆ.

Follow Us:
Download App:
  • android
  • ios