T20 World Cup 2024: ಸೂಪರ್ ಫಾರ್ಮ್‌ನಲ್ಲಿದ್ದ ಕೆ ಎಲ್ ರಾಹುಲ್‌ನ ಕೈಬಿಟ್ಟಿದ್ದೇಕೆ..?

ಅಂತೂ ಇಂತೂ ಟಿ20 ವಿಶ್ವಕಪ್ ಟೂರ್ನಿಗೆ ಟೀಮ್ ಇಂಡಿಯಾವನ್ನ ಆಯ್ಕೆ ಮಾಡಲಾಗಿದೆ. IPL ಪ್ರದರ್ಶನ ಗಮನದಲ್ಲಿಟ್ಟುಕೊಂಡು, ಆಟಗಾರರಿಗೆ ಚಾನ್ಸ್ ನೀಡಲಾಗಿದೆ. ಆದ್ರೆ, ಮತ್ತೊಂದೆಡೆ ತಂಡದ ಆಯ್ಕೆಯ ಬಗ್ಗೆ ಅಪಸ್ವರಗಳು ಎದ್ದಿವೆ. ಕೆ.ಎಲ್ ರಾಹುಲ್ರನ್ನ ಸೆಲೆಕ್ಟ್ ಮಾಡದ್ದಕ್ಕೆ, ಕರ್ನಾಟಕ ಕ್ರಿಕೆಟ್ ಫ್ಯಾನ್ಸ್ ಆಯ್ಕೆ ಸಮಿತಿ ವಿರುದ್ಧ ಕಿಡಿಕಾರ್ತಿದ್ದಾರೆ.

KL Rahul drops from Team India for ICC T20 World Cup Squad here is why kvn

ಬೆಂಗಳೂರ(ಮೇ.01) ಟಿ20 ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡಲಾದ ತಂಡದಲ್ಲಿ ಒಬ್ಬನೇ ಒಬ್ಬ ಕನ್ನಡಿಗ ಇಲ್ಲ. ಅದ್ಭುತ ಫಾರ್ಮ್ನಲ್ಲಿದ್ದ ಕೆ.ಎಲ್ ರಾಹುಲ್ಗೆ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಇದ್ರಿಂದ ರಾಹುಲ್ಗೆ ಭಾರಿ ನಿರಾಸೆಯಾಗಿದೆ. ಮತ್ತೊಂದೆಡೆ ಇದೇ ಈಗ ಭಾರತೀಯ ಕ್ರಿಕೆಟ್ ಜಗತ್ತಲ್ಲಿ ಬಿಗ್ ಟಾಪಿಕ್ ಆಗಿದೆ. 

ಟಿ20 ವಿಶ್ವಕಪ್ ತಂಡದಲ್ಲಿಲ್ಲ ಒಬ್ಬನೇ ಒಬ್ಬ ಕನ್ನಡಿಗ..! 

ಅಂತೂ ಇಂತೂ ಟಿ20 ವಿಶ್ವಕಪ್ ಟೂರ್ನಿಗೆ ಟೀಮ್ ಇಂಡಿಯಾವನ್ನ ಆಯ್ಕೆ ಮಾಡಲಾಗಿದೆ. IPL ಪ್ರದರ್ಶನ ಗಮನದಲ್ಲಿಟ್ಟುಕೊಂಡು, ಆಟಗಾರರಿಗೆ ಚಾನ್ಸ್ ನೀಡಲಾಗಿದೆ. ಆದ್ರೆ, ಮತ್ತೊಂದೆಡೆ ತಂಡದ ಆಯ್ಕೆಯ ಬಗ್ಗೆ ಅಪಸ್ವರಗಳು ಎದ್ದಿವೆ. ಕೆ.ಎಲ್ ರಾಹುಲ್ರನ್ನ ಸೆಲೆಕ್ಟ್ ಮಾಡದ್ದಕ್ಕೆ, ಕರ್ನಾಟಕ ಕ್ರಿಕೆಟ್ ಫ್ಯಾನ್ಸ್ ಆಯ್ಕೆ ಸಮಿತಿ ವಿರುದ್ಧ ಕಿಡಿಕಾರ್ತಿದ್ದಾರೆ.

IPL 2024 ಇಂದು ಚೆನ್ನೈನಲ್ಲಿ ಸಿಎಸ್‌ಕೆಗೆ ಪಂಜಾಬ್ ಕಿಂಗ್ಸ್ ಸವಾಲು

ಯೆಸ್, ಮಹತ್ವದ ಟೂರ್ನಿಯಿಂದ ರಾಹುಲ್ನ ಕೈಬಿಟ್ಟಿದ್ದೇಕೆ..? ಅನ್ನೋ ಚರ್ಚೆ ಜೋರಾಗಿದೆ. ಯಾಕಂದ್ರೆ ರಾಹುಲ್ ಸದ್ಯ ಅದ್ಭುತ ಫಾರ್ಮ್ನಲ್ಲಿದ್ದು, ಏಷ್ಯಾಕಪ್ ಟೂರ್ನಿಯಿಂದಲೂ ಟೀಮ್ ಇಂಡಿಯಾ ಸೂಪರ್ ಪರ್ಫಾಮೆನ್ಸ್ ನೀಡ್ತಿದ್ದಾರೆ. ಏಕದಿನ ವಿಶ್ವಕಪ್ನಲ್ಲೂ ಮಿಂಚಿದ್ರು. ಅಲ್ಲದೇ, ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಅಬ್ಬರಿಸಿದ್ರು. ಪ್ರಸಕ್ತ IPLನಲ್ಲೂ ಅದೇ ಆಟ ಮುಂದುವರಿಸಿದ್ದಾರೆ. ಈವರೆಗು ಆಡಿರೋ 9 ಪಂದ್ಯಗಳಿಂದ 144.27ರ ಸ್ಟ್ರೈಕ್ರೇಟ್ನಲ್ಲಿ 378 ರನ್ ಕಲೆಹಾಕಿದ್ದಾರೆ. 

ಈ ಹಿನ್ನೆಲೆಯಲ್ಲಿ ಕ್ಲಾಸ್ ಬ್ಯಾಟ್ಸ್ಮನ್ಗೆ ವಿಶ್ವಕಪ್ ಟಿಕೆಟ್ ಫಿಕ್ಸ್ ಎನ್ನಲಾಗಿತ್ತು.  ಇನ್ನು ರಾಹುಲ್ ಕೂಡ ವಿಶ್ವಕಪ್ ಮೇಲೆ ಕಣ್ಣಿಟ್ಟಿದ್ರು. ವಿಕೆಟ್ ಕೀಪರ್ ಕೋಟಾದಡಿ ಚಾನ್ಸ್ ಸಿಗುವ ವಿಶ್ವಾಸದಲ್ಲಿದ್ರು. ಅದೇ ಕಾರಣಕ್ಕೆ IPLನ ತಮ್ಮ ತಂಡದಲ್ಲಿ ಕ್ವಿಂಟನ್ ಡಿಕಾಕ್ ಮತ್ತು ನಿಕೋಲಸ್ ಪೂರಾನ್ ಇಬ್ಬರು ಫುಲ್ಟೈಮ್ ವಿಕೆಟ್ ಕೀಪರ್‌ಗಳಿದ್ದರೂ, ತಾವೇ ಕೀಪಿಂಗ್ ಮಾಡಿದ್ರು. 

ಟಿ20 ವಿಶ್ವಕಪ್ ಟೂರ್ನಿಗೆ ಆಸ್ಟ್ರೇಲಿಯಾ ತಂಡ ಪ್ರಕಟ; ವಿಶ್ವಕಪ್ ಮೇಲೆ ಕಾಲಿಟ್ಟವನಿಗೆ ನಾಯಕ ಪಟ್ಟ..!

ಯಾವುದೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಬಲ್ಲ ತಾಕತ್ತು..! 

ಯೆಸ್, ಸಂಜು ಸ್ಯಾಮ್ಸನ್ ಬದಲು ರಾಹುಲ್‌ಗೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡಬೇಕಿತ್ತು ಅನ್ನೋ ಮಾತುಗಳು ಕೇಳಿಬರ್ತಿವೆ.  T20ಯಲ್ಲಿ ಟೀಮ್ ಇಂಡಿಯಾ ಪರ ರಾಹುಲ್ ಉತ್ತಮ ದಾಖಲೆ ಹೊಂದಿದ್ದಾರೆ. 68 ಇನ್ನಿಂಗ್ಸ್ಗಳಿಂದ ಆಲ್ಮೋಸ್ಟ್ 140ರ ಸ್ಟ್ರೈಕ್ರೇಟ್ನಲ್ಲಿ 2265 ರನ್‌ಗಳಿಸಿದ್ದಾರೆ. ರಾಹುಲ್ರನ್ನ ಸೆಲೆಕ್ಟ್ ಮಾಡುವುದರ ಮತ್ತೊಂದು ಅಡ್ವಾಂಟೇಜ್ ಅಂದ್ರೆ,  ಆರಂಭಿಕರಿಂದ ಹಿಡಿದು 6ನೇ ಕ್ರಮಾಂಕದವರೆಗೆ, ಯಾವುದೇ ಸ್ಲಾಟ್ನಲ್ಲೂ ಅವ್ರು ಬ್ಯಾಟ್ ಬೀಸಬಲ್ಲರು. ಅಲ್ಲದೇ ಸಂದರ್ಭಕ್ಕೆ ತಕ್ಕಂತೆ ಆಡುವುದರಲ್ಲೂ  ಪಂಟರ್ 

Breaking ಟಿ20 ವಿಶ್ವಕಪ್ ಗೆಲ್ಲಲು ಟೀಂ ಇಂಡಿಯಾ ರೆಡಿ; 15 ಆಟಗಾರರ ಬಲಿಷ್ಠ ತಂಡ ಪ್ರಕಟ

ಐಪಿಎಲ್‌ನಲ್ಲಿ ಮಾತ್ರ ಸಂಜು ಸ್ಯಾಮ್ಸನ್ ಆರ್ಭಟ..! 

ರಾಹುಲ್ ಬದಲಿಗೆ ಆಯ್ಕೆಯಾಗಿರೋ ಸ್ಯಾಮ್ಸನ್ IPLನಲ್ಲಿ ಮಿಂಚಿದ್ದರೂ, ಟೀಮ್ ಇಂಡಿಯಾ ಪರ ಅಟ್ಟರ್ ಫ್ಲಾಪ್ ಶೋ ನೀಡಿದ್ದಾರೆ. ಈವರೆಗೂ ಆಡಿರೋ 25 ಪಂದ್ಯಗಳಿಂದ ಕೇವಲ 374 ರನ್ಗಳಿಸಿದ್ದಾರೆ. ಇದರ ಜೊತೆಗೆ ಸಂಜು ಸ್ಯಾಮ್ಸನ್ ಟಾಪ್ ಆರ್ಡರ್ರನಲ್ಲಿ ಬಿಟ್ಟು, ಕೆಳ ಕ್ರಮಾಂಕದಲ್ಲಿ ಇಂಪ್ಯಾಕ್ಟ್ಫುಲ್ ಫರ್ಪಾಮೆನ್ಸ್ ನೀಡಿಲ್ಲ. 

ಒಟ್ಟಿನಲ್ಲಿ ರಾಹುಲ್ರನ್ನ ಆಯ್ಕೆ ಮಾಡದೇ ಇರೋದು, ವಿಶ್ವಕಪ್‌ನಲ್ಲಿ ಟೀಂ ಇಂಡಿಯಾಗೆ ಮುಳುವಾಗೋ ಸಾಧ್ಯತೆಯಿದೆ. ಸಂಜು ಸ್ಯಾಮ್ಸನ್ ಅವ್ರ ಸ್ಥಾನವನ್ನ ತುಂಬ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 
 

Latest Videos
Follow Us:
Download App:
  • android
  • ios