ಕ್ರಿಕೆಟ್ ಅಭಿಮಾನಗಳಿಗೆ ಸಿಹಿ ಸುದ್ದಿ ನೀಡಿದ ಡಿವಿಲಿಯರ್ಸ್!

ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೇಳಿ ಅಭಿಮಾನಿಗಳಿಗೆ ಆಘಾತ ನೀಡಿರುವ ಎಬಿ ಡಿವಿಲಿಯರ್ಸ್ ಇದೀಗ ಸಿಹಿ ಸುದ್ದಿ ನೀಡಿದ್ದಾರೆ. ಶೀಘ್ರದಲ್ಲೇ ಬೆಂಗಳೂರಿಗೆ ಬರಲಿರುವ ಡಿವಿಲಿಯರ್ಸ್ ನೀಡಿರುವ ಸುದ್ದಿ ಏನು? ಇಲ್ಲಿದೆ ವಿವರ.
 

AB devillers will continue in competitive cricket next 3 years

ಲಂಡನ್‌(ಫೆ.26): ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯ​ರ್ಸ್ ಇನ್ನೂ 3 ವರ್ಷ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಮುಂದುವರಿಯುವುದಾಗಿ ತಿಳಿಸಿದ್ದಾರೆ. ಅಂ.ರಾ.ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿರುವ ಡಿವಿಲಿಯರ್ಸ್, ವಿಶ್ವದ ಹಲವು ಟಿ20 ಲೀಗ್‌ನಲ್ಲಿ ಆಡುತ್ತಿದ್ದಾರೆ. ಸೋಮವಾರ ಅವರು ಇಂಗ್ಲೆಂಡ್‌ ಕೌಂಟಿ ತಂಡ ಮಿಡ್ಲ್‌ಸೆಕ್ಸ್‌ ಜತೆ ಒಪ್ಪಂದಕ್ಕೆ ಸಹಿ ಹಾಕಿದರು. 

ಇದನ್ನೂ ಓದಿ: ವೈರಲ್ ಆಯ್ತು ಎಬಿ ಡಿವಿಲಿಯರ್ಸ್ ಸ್ವಿಚ್ ಹಿಟ್ ಸಿಕ್ಸ್!

ಮುಂಬರುವ ಟಿ20 ಬ್ಲಾಸ್ಟ್‌ ಟೂರ್ನಿಯಲ್ಲಿ ಅವರು ಪಾಲ್ಗೊಳ್ಳಲಿದ್ದು ಮೊದಲ 7 ಪಂದ್ಯಗಳನ್ನು ಆಡಲಿದ್ದಾರೆ. ಜು.18ರಿಂದ ಸೆ.21ರ ವರೆಗೂ ಟಿ20 ಬ್ಲಾಸ್ಟ್‌ ಟೂರ್ನಿ ನಡೆಯಲಿದೆ. ಸದ್ಯ ಪಾಕಿಸ್ತಾನ ಸೂಪರ್ ಲೀಗ್ ಟಿ20 ಟೂರ್ನಿಯಲ್ಲಿ  ಎಬಿ ಡಿವಿಲಿಯರ್ಸ್ ಭಾಗವಹಿಸಿದ್ದಾರೆ.

ಇದನ್ನೂ ಓದಿ: ಐಪಿಎಲ್ ಉದ್ಘಾಟನಾ ಸಮಾರಂಭ ರದ್ದು - ಭಾರತೀಯರ ಹೃದಯ ಗೆದ್ದ ಬಿಸಿಸಿಐ!

ಶೀಘ್ರದಲ್ಲೇ ಭಾರತಕ್ಕೆ ಆಗಮಿಸಲಿರುವ ಎಬಿ ಡಿವಿಲಿಯರ್ಸ್ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸ್ಟಾರ್ ಕ್ರಿಕೆಟಿಗನಾಗಿರುವ ಎಬಿಡಿ, 12ನೇ ಆವೃತ್ತಿಯಲ್ಲಿ ಅಬ್ಬರಿಸೋ ವಿಶ್ವಾಸದಲ್ಲಿದ್ದಾರೆ.
 

Latest Videos
Follow Us:
Download App:
  • android
  • ios