ಬಿಗ್‌ಬ್ಯಾಶ್‌ನಿಂದ ಹಿಂದೆ ಸರಿದ ಎಬಿ ಡಿ ವಿಲಿಯರ್ಸ್
ಬಿಗ್ ಬ್ಯಾಶ್ ವೇಳೆಯೇ ಆಸ್ಪ್ರೇಲಿಯಾ ತಂಡ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಹಾಗೂ ಏಕದಿನ ಸರಣಿಗಾಗಿ ಭಾರತ ಪ್ರವಾಸ ಕೈಗೊಳ್ಳಲಿರುವ ಕಾರಣ, ಟೂರ್ನಿಗೆ ಆಸ್ಪ್ರೇಲಿಯಾದ ತಾರಾ ಆಟಗಾರರು ಗೈರಾಗಲಿದ್ದಾರೆ. ಹೀಗಾಗಿ ಟೂರ್ನಿಯ ಮೆರುಗು ಹೆಚ್ಚಿಸಲು ಕ್ರಿಕೆಟ್ ಆಸ್ಪ್ರೇಲಿಯಾ ಡಿ ವಿಲಿಯರ್ಸ್ ಮನವೊಲಿಸಲು ಯತ್ನಿಸಿತ್ತು.
ಮೆಲ್ಬರ್ನ್[ಮೇ.13]: ದಕ್ಷಿಣ ಆಫ್ರಿಕಾದ ದಿಗ್ಗಜ ಆಟಗಾರ ಎಬಿ ಡಿ ವಿಲಿಯರ್ಸ್, ಮುಂದಿನ ಆವೃತ್ತಿಯ ಬಿಗ್ ಬ್ಯಾಶ್ ಲೀಗ್ ಟಿ20 ಟೂರ್ನಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.
ಮತ್ತೊಮ್ಮೆ ಕನ್ನಡ ಮಾತಾಡಿದ ಎಬಿಡಿ..! ಹಾಡಂತೂ ಸೂಪರ್
ಈ ಮೊದಲು ಟೂರ್ನಿಯ ಅಂತಿಮ ಹಂತದಲ್ಲಿ ಆಡುವುದಾಗಿ ಅವರು ಆಯೋಜಕರಿಗೆ ತಿಳಿಸಿದ್ದರು. ಆದರೆ ಕ್ರಿಕೆಟ್ ಆಸ್ಪ್ರೇಲಿಯಾ, ಐಪಿಎಲ್ ಮಾದರಿಯಲ್ಲಿ 14 ಪಂದ್ಯಗಳ ಲೀಗ್ ಹಂತ ನಡೆಸಲು ನಿರ್ಧರಿಸಿದ ಕಾರಣ, ವಿಲಿಯರ್ಸ್ ಟೂರ್ನಿಯಲ್ಲಿ ಆಡದಿದರು ತೀರ್ಮಾನಿಸಿದ್ದಾರೆ.
ಪಂಜಾಬ್ ವಿರುದ್ಧ ಅಪರೂಪದ ದಾಖಲೆ ಬರೆದ RCB..!
ಬಿಗ್ ಬ್ಯಾಶ್ ವೇಳೆಯೇ ಆಸ್ಪ್ರೇಲಿಯಾ ತಂಡ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಹಾಗೂ ಏಕದಿನ ಸರಣಿಗಾಗಿ ಭಾರತ ಪ್ರವಾಸ ಕೈಗೊಳ್ಳಲಿರುವ ಕಾರಣ, ಟೂರ್ನಿಗೆ ಆಸ್ಪ್ರೇಲಿಯಾದ ತಾರಾ ಆಟಗಾರರು ಗೈರಾಗಲಿದ್ದಾರೆ. ಹೀಗಾಗಿ ಟೂರ್ನಿಯ ಮೆರುಗು ಹೆಚ್ಚಿಸಲು ಕ್ರಿಕೆಟ್ ಆಸ್ಪ್ರೇಲಿಯಾ ಡಿ ವಿಲಿಯರ್ಸ್ ಮನವೊಲಿಸಲು ಯತ್ನಿಸಿತ್ತು.
ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುವ ಎಬಿ ಡಿವಿಲಿಯರ್ಸ್, 12ನೇ ಆವೃತ್ತಿಯ ಐಪಿಎಲ್’ನಲ್ಲಿ 13 ಪಂದ್ಯಗಳನ್ನಾಡಿ 442 ರನ್ ಬಾರಿಸಿದ್ದರು. ಈ ಆವೃತ್ತಿಯಲ್ಲಿ RCB ಪರ ವಿರಾಟ್ ಕೊಹ್ಲಿ[464] ಬಳಿಕ ಗರಿಷ್ಠ ರನ್ ಬಾರಿಸಿದ 2ನೇ ಕ್ರಿಕೆಟಿಗ ಎನ್ನುವ ಗೌರವಕ್ಕೆ ಎಬಿಡಿ ಪಾತ್ರರಾಗಿದ್ದಾರೆ.