ಬೆಂಗಳೂರು[ಏ.25]: 12 ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸತತ 6 ಸೋಲು ಕಂಡು ಕಂಗಾಲಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ಗೆಲುವಿನ ಹಳಿಗೆ ಮರಳಿದೆ. ಇದೀಗ ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು ಮಣಿಸುವ ಮೂಲಕ ಹ್ಯಾಟ್ರಿಕ್ ಗೆಲುವಿನ ಜತೆಗೆ ಒಟ್ಟಾರೆ 4 ಗೆಲುವು ದಾಖಲಿಸಿರುವ ವಿರಾಟ್ ಪಡೆ, ಪ್ಲೇ ಆಪ್ ಪ್ರವೇಶದ ಕನಸನ್ನು ಜೀವಂತವಾಗಿರಿಸಿಕೊಂಡಿದೆ. 

RCB ನಂಬಿಕಸ್ಥ ಬ್ಯಾಟ್ಸ್’ಮನ್ ಎಬಿ ಡಿವಿಲಿಯರ್ಸ್ ಬಾರಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ ಬೆಂಗಳೂರು ತಂಡ 202/4 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ಪಂಜಾಬ್ 7 ವಿಕೆಟ್ ಕಳೆದುಕೊಂಡು ಕೇವಲ 185 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಪಂದ್ಯವನ್ನು ವಿರಾಟ್ ಪಡೆ ಜಯಿಸುವ ಮೂಲಕ ಕೆಲವು ಅಪರೂಪದ ದಾಖಲೆಗಳನ್ನು ಬರೆದಿದೆ. ಆ ಕೆಲವು ಅಪರೂಪದ ದಾಖಲೆಗಳನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ...

* RCBಗೆ ಹ್ಯಾಟ್ರಿಕ್ ಗೆಲುವು: 
RCB ತಂಡವು ಕೋಲ್ಕತಾ ನೈಟ್’ರೈಡರ್ಸ್[10 ರನ್], ಚೆನ್ನೈ ಸೂಪರ್’ಕಿಂಗ್ಸ್[01 ರನ್] ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್[17 ರನ್] ತಂಡವನ್ನು ಮಣಿಸುವ ಮೂಲಕ ಹ್ಯಾಟ್ರಿಕ್ ಗೆಲುವಿನ ಸಿಹಿಯುಂಡಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ RCB ಇದೇ ಮೊದಲ ಬಾರಿಗೆ ಟಾರ್ಗೆಟ್ ಡಿಫೆಂಡ್ ಮಾಡಿಕೊಂಡ ಸಾಧನೆ ಮಾಡಿದೆ. ಇದಷ್ಟೇ ಅಲ್ಲದೇ 2018ರಿಂದೀಚೆಗೆ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ಆಡಿದ 4 ಪಂದ್ಯಗಳಲ್ಲೂ RCB ಗೆಲುವಿನ ನಗೆ ಬೀರಿದೆ.

* ಡೆತ್ ಓವರ್’ನಲ್ಲಿ RCBಯೇ ಕಿಂಗ್:

ಇನ್ನಿಂಗ್ಸ್’ನ ಕೊನೆಯ ಓವರ್’ಗಳಲ್ಲಿ ರನ್ ಕಲೆಹಾಕುವುದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೇ ಕಿಂಗ್ ಎನ್ನುವುದನ್ನು ಮತ್ತೊಮ್ಮೆ ವಿರಾಟ್ ಪಡೆ ಸಾಬೀತುಪಡಿಸಿದೆ. ಸ್ಫೋಟಕ ಬ್ಯಾಟ್ಸ್’ಮನ್’ಗಳ ದಂಡನ್ನೇ ಹೊಂದಿರುವ RCB ಕೊನೆಯ 5 ಓವರ್[16-20], ಕೊನೆಯ 4 ಓವರ್[17-20], ಕೊನೆಯ 3 ಮೂರು ಓವರ್[18-20] ಮತ್ತು ಕೊನೆಯ 2 ಓವರ್’ಗಳಲ್ಲಿ[19-20] ಗರಿಷ್ಠ ರನ್ ಬಾರಿಸಿದ ಸಾಧನೆ ಮಾಡಿದೆ.

BREAKING NEWS:ಗೆಲುವಿನ ನಾಗಾಲೋಟದ ಬೆನ್ನಲ್ಲೇ RCBಗೆ ಬಿಗ್ ಶಾಕ್!

ಮೊದಲ 3 ದಾಖಲೆಗಳನ್ನು ಬೆಂಗಳೂರು ತಂಡವು 2016ರಲ್ಲೇ ನಿರ್ಮಿಸಿತ್ತು. ಗುಜರಾತ್ ಲಯನ್ಸ್ ವಿರುದ್ಧ ಕ್ರಮವಾಗಿ 112 ರನ್[16-20], 89 ರನ್[17-20] ಹಾಗೂ 75 ರನ್[18-20] ಬಾರಿಸಿತ್ತು. ಅದೇ ಪಂದ್ಯದಲ್ಲಿ RCB ಕೊನೆಯ ಎರಡು ಓವರ್’ಗಳಲ್ಲಿ 45 ರನ್ ಚಚ್ಚಿ ದಾಖಲೆ ಬರೆದಿತ್ತು. ಈ ದಾಖಲೆಯನ್ನು ಮೂರು ಇತರೇ ತಂಡಗಳು ಸರಿಗಟ್ಟಿದ್ದವು. ಆದರೆ ಇದೀಗ ಪಂಜಾಬ್ ವಿರುದ್ಧ ಕೊನೆಯ 2 ಓವರ್’ಗಳಲ್ಲಿ 48 ರನ್ ಸಿಡಿಸುವ ಮೂಲಕ ಎಲ್ಲಾ ದಾಖಲೆಗಳನ್ನು ಇದೀಗ RCB ತನ್ನ ತೆಕ್ಕೆಗೆ ಹಾಕಿಕೊಂಡಿದೆ.

RCBಗೆ ಹ್ಯಾಟ್ರಿಕ್ ಗೆಲುವು- ಅಂಕಪಟ್ಟಿಯಲ್ಲಿ ಏರಿಕೆ ಕಂಡ ಕೊಹ್ಲಿ ಬಾಯ್ಸ್!

ಗೇಲ್, ಎಬಿಡಿ ಮತ್ತು RCB:
ಎಬಿ ಡಿವಿಲಿಯರ್ಸ್ ಐಪಿಎಲ್ ಟೂರ್ನಿಯಲ್ಲಿ ಒಟ್ಟಾರೆ 20 ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ. ಇನ್ನು ಕ್ರಿಸ್ ಗೇಲ್[21] ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಎಬಿಡಿ ಕೇವಲ ಒಂದು ಹೆಜ್ಜೆ ಹಿಂದಿದ್ದಾರೆ. ಐಪಿಎಲ್’ನಲ್ಲಿ ಒಟ್ಟು 20 ಪಂದ್ಯ ಶ್ರೇಷ್ಠ ಪ್ರಶಸ್ತಿಗಳ ಪೈಕಿ ಎಬಿಡಿ 18 ಬಾರಿ ರಾಯಲ್ ಚಾಲೆಂಜರ್ಸ್ ಪರ ಆಡಿದ ಪಂದ್ಯಗಳಲ್ಲಿ ಜಯಿಸಿದ್ದಾರೆ. ಈ ಮೂಲಕ ನಿರ್ದಿಷ್ಟ ತಂಡವೊಂದರ ಪರ ಗರಿಷ್ಠ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದ ದಾಖಲೆ ಎಬಿಡಿ ಪಾಲಾಗಿದೆ. ಈ ಮೊದಲು ಕ್ರಿಸ್ ಗೇಲ್ RCB ಪರ 17 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಜಯಿಸಿದ್ದರು.