ಮುಂಬೈ[ಜು.21]: ಆಗಸ್ಟ್ 03ರಿಂದ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಸೀಮಿತ ಓವರ್’ಗಳ ಹಾಗೂ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಕೆಲ ಅನುಭವಿ ಕ್ರಿಕೆಟಿಗರಿಗೆ ವಿಶ್ರಾಂತಿ ನೀಡಿರುವ ಎಂ.ಎಸ್.ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಯುವ ಕ್ರಿಕೆಟಿಗರಿಗೆ ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ.

ವಿಂಡೀಸ್ ಪ್ರವಾಸಕ್ಕೆ ಗೈರು; ಭಾರತೀಯ ಸೇನೆಗೆ ಧೋನಿ ಹಾಜರ್!

ಮಹೇಂದ್ರ ಸಿಂಗ್ ಧೋನಿ ಸ್ವತಃ ವಿಶ್ರಾಂತಿ ಬಯಸಿದ್ದರಿಂದ ರಿಷಭ್ ಪಂತ್ ವಿಕೆಟ್ ಕೀಪರ್ ಆಗಿ ಸ್ಥಾನ ಪಡೆದಿದ್ದಾರೆ. ಇನ್ನು ಕನ್ನಡಿಗರಾದ ಮನೀಶ್ ಪಾಂಡೆ ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಕೆ.ಎಲ್ ರಾಹುಲ್ ಮೂರು ಮಾದರಿಯ ತಂಡದಲ್ಲಿ ಸ್ಥಾನ ಪಡೆದರೆ, ಮಯಾಂಕ್ ಅಗರ್ ವಾಲ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಟಿ20 ಸರಣಿಯಲ್ಲಿ ರಾಹುಲ್ ಚಹರ್ ಹಾಗೂ ದೀಪಕ್ ಚಹರ್ ಸಹೋದರರು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಸೀಮಿತ ಓವರ್ ಗಳ ಸರಣಿಗೆ ಬುಮ್ರಾಗೆ ರೆಸ್ಟ್ ನೀಡಲಾಗಿದ್ದು, ಟೆಸ್ಟ್ ಸರಣಿಗೆ ತಂಡ ಕೂಡಿಕೊಳ್ಳಲಿದ್ದಾರೆ. 

"

ವಿಂಡೀಸ್ ಪ್ರವಾಸಕ್ಕೆ ಟೀಂ ಇಂಡಿಯಾ ಆಯ್ಕೆ: 3 ಮಾದರಿಗೂ ಕೊಹ್ಲಿಯೇ ನಾಯಕ

ಶಂಕರ್, ಕಾರ್ತಿಕ್‌ಗೆ ಗೇಟ್ ಪಾಸ್..?

ವಿಶ್ವಕಪ್ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರಿದ್ದ ವಿಜಯ್ ಶಂಕರ್, ದಿನೇಶ್ ಕಾರ್ತಿಕ್ ಅವರನ್ನು ಕೈಬಿಡಲಾಗಿದ್ದು, ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಲಾಗಿದೆ. ಆಸೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿಫಲರಾಗಿದ್ದ ಮುರುಳಿ ವಿಜಯ್‌ಗೆ ಕೋಕ್ ನೀಡಲಾಗಿದೆ. ಇನ್ನು ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಪೃಥ್ವಿ ಶಾಗೆ ವಿಶ್ರಾಂತಿ ನೀಡಲಾಗಿದೆ. 

5 RCB ಆಟಗಾರರಿಗೆ ಸ್ಥಾನ..!

ಮೂರು ಮಾದರಿಯ ಕ್ರಿಕೆಟ್‌ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ 5 ಕ್ರಿಕೆಟಿಗರಿಗೆ ಸ್ಥಾನ ಸಿಕ್ಕಿದೆ. ನಾಯಕ ವಿರಾಟ್ ಕೊಹ್ಲಿ, ಯಜುವೇಂದ್ರ ಚಹಲ್, ನವದೀಪ್ ಶೈನಿ, ವಾಷಿಂಗ್ಟನ್ ಸುಂದರ್, ಉಮೇಶ್ ಯಾದವ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. 

ಆಗಸ್ಟ್ 3 ರಿಂದ ಸೆಪ್ಟೆಂಬರ್ 3 ರವರೆಗೆ ಭಾರತ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ನಡೆಯಲಿದೆ. 1 ತಿಂಗಳು ನಡೆಯುವ ಸರಣಿಯಲ್ಲಿ ಭಾರತ ತಂಡ 3 ಟಿ20, 3 ಏಕದಿನ ಹಾಗೂ 2 ಟೆಸ್ಟ್ ಪಂದ್ಯಗಳನ್ನಾಡಲಿದೆ. 

ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಟೀಂ ಇಂಡಿಯಾ ಹೀಗಿದೆ ನೋಡಿ...

ಟಿ20 ಸರಣಿಗೆ:

ವಿರಾಟ್ ಕೊಹ್ಲಿ[ನಾಯಕ], ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಭ್ ಪಂತ್[ಕೀಪರ್], ಕೃನಾಲ್ ಪಾಂಡೆ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ರಾಹುಲ್ ಚಹರ್, ಭುವನೇಶ್ವರ್ ಕುಮಾರ್, ಖಲೀಲ್ ಅಹಮ್ಮದ್, ದೀಪಕ್ ಚಹಾರ್, ನವದೀಪ್ ಶೈನಿ

ಏಕದಿನ ಸರಣಿಗೆ:

ಕೊಹ್ಲಿ[ನಾಯಕ], ರೋಹಿತ್, ಧವನ್, ರಾಹುಲ್, ಅಯ್ಯರ್, ಪಾಂಡೆ, ಪಂತ್, ಜಡೇಜಾ, ಕುಲ್ದೀಪ್, ಚಹಲ್, ಕೇದಾರ್,ಶಮಿ, ಭುವಿ, ಖಲೀಲ್ ಅಹಮ್ಮದ್, ಶೈನಿ

ಟೆಸ್ಟ್ ಚಾಂಪಿಯನ್’ಶಿಪ್’ಗೆ:

ಮಯಾಂಕ್ ಅಗರ್’ವಾಲ್. ರಾಹುಲ್, ಪೂಜಾರ, ಕೊಹ್ಲಿ[ನಾಯಕ], ರಹಾನೆ[ಉಪನಾಯಕ], ವಿಹಾರಿ. ರೋಹಿತ್ ಶರ್ಮಾ, ರಿಷಭ್ ಪಂತ್, ವೃದ್ದಿಮಾನ್ ಸಹ, ಆರ್. ಅಶ್ವಿನ್, ಜಡೇಜಾ, ಕುಲದೀಪ್, ಇಶಾಂತ್, ಶಮಿ, ಬುಮ್ರಾ, ಉಮೇಶ್ ಯಾದವ್