ಮುಂಬೈ(ಜು.21): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಕಮೆಂಟೇಟರ್ ಸಂಜಯ್ ಮಂಜ್ರೇಕರ್ ಹಲವು ಬಾರಿ ಅಭಿಮಾನಿಗಳಿಂದ ಮಂಗಳರಾತಿ ಮಾಡಿಸಿಕೊಂಡಿದ್ದರು. ಪ್ರತಿ ಟ್ವೀಟ್‌ಗೂ ಮಂಜ್ರೇಕರ್ ಟ್ರೋಲ್ ಆಗುತ್ತಲೇ ಇದ್ದಾರೆ. ಇದೀಗ ಟೀಂ ಇಂಡಿಯಾ ನಾಲ್ಕನೇ ಬ್ಯಾಟಿಂಗ್ ಕ್ರಮಾಂಕ್ಕೆ ಪರಿಹಾರ ಸೂಚಿಸಿ ಮತ್ತೆ ಟ್ರೋಲ್ ಆಗಿದ್ದಾರೆ.

ಇದನ್ನೂ ಓದಿ: ಜಡೇಜಾ ವಿಕೆಟ್ ಕಬಳಿಸಿದ ಬೆನ್ನಲ್ಲೇ ಟ್ರೋಲ್ ಆದ ಮಂಜ್ರೇಕರ್!

ಭಾರತದ ನಾಲ್ಕನೇ ಕ್ರಮಾಂಕದ ಸಮಸ್ಯೆ ಪರಿಹರಿಸಲು, ಆತ ವಿರಾಟ್ ಕೊಹ್ಲಿ ರೀತಿ ಬ್ಯಾಟ್ ಮಾಡಬಲ್ಲವನಾಗಿರಬೇಕು. 80 ಅಥವಾ 90 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸುವವನಾಗಿರಬೇಕು. ರಿಸ್ಕ್ ಇಲ್ಲದೆ ಫೀಲ್ಡರ್‌ಗಳನ್ನು ನೋಡಿ ಗ್ಯಾಪ್ ಮೂಲಕ ರನ್ ಕಲೆ ಹಾಕಬೇಕು. ಇಷ್ಟೇ ಅಲ್ಲ ಸಿಂಗಲ್, ಡಬಲ್ ರನ್ ಓಡುವವನಾಗಿರಬೇಕು ಎಂದು  ಮಂಜ್ರೇಕರ್ ಟ್ವೀಟ್ ಮಾಡಿದ್ದಾರೆ. ಟ್ವೀಟ್ ಮಾಡಿದ ಬೆನ್ನಲ್ಲೇ ಅಭಿಮಾನಿಗಳು ಮಂಜ್ರೇಕರ್ ರೀತಿ ಇರದಿದ್ದರೆ ಸಾಕು ಎಂದು ಟ್ರೋಲ್ ಮಾಡಿದ್ದಾರೆ.